
ಕೊಡಗು : ಶನಿವಾರಸಂತೆ ಸಮೀಪದ ಹೊಸಗುತ್ತಿ ಗ್ರಾಮದ ಕಾಂತರಾಜು (45 ) ಎಂಬುವರು ಆನೆ ದಾಳಿಗೆ ಇಂದು ಮೃತಪಟ್ಟಿದ್ದಾರೆ. ತನ್ನ ಜಮೀನಿಗೆ ಹೋಗುತ್ತಿರುವ ವೇಳೆ ಕಾಡಾನೆ ಎದುರಾಗಿ ಇವರ ಮೇಲೆ ದಾಳಿ ನಡೆಸಿದ ಪರಿಣಾಮ ಇವರು ಸ್ಥಳದಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಘಟನೆ ನಡೆದ ನಂತರ ಎಂದಿನಂತೆ ಅರಣ್ಯ ಇಲಾಖೆ ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಕೊಡಗಿನಲ್ಲಿ ಇದೀಗ ನಿತ್ಯ ವನ್ಯಜೀವಿಗಳ ಉಪಟಳದಿಂದ ಹಲವರು ಪ್ರಾಣ ಕಳೆದುಕೊಂಡರೆ ಇನ್ನಿತರ ರೈತರು ಪಸಲು ನಷ್ಟ ಅನುಭವಿಸುತ್ತಿದ್ದಾರೆ.
ಆನೆ ಮಾನವ ಸಂಘರ್ಷನವನ್ನು ಗಂಭೀರವಾಗಿ ಪರಿಗಣಿಸಿ ಇದಕ್ಕೆ ಸೂಕ್ತ ಪರಿಹಾರ ನೀಡುತ್ತೇವೆ ಎಂದು ಬೊಗಳೆ ಬಿಟ್ಟ ರಾಜಕಾರಣಿಗಳ ಬಗ್ಗೆ ಇದೀಗ ಕೊಡಗಿನ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
