*ಮಲೆನಾಡ ಮಡಿಲಲ್ಲಿ ಪ್ರಾಕೃತಿಕ* *ರಂಗ ತರಬೇತಿ ಶಿಬಿರ*

ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ ಮಲೆನಾಡಿನ ಪ್ರಕೃತಿಯ ಮಡಿಲಲ್ಲಿ ಬೆಳೆದಿರುವ “ಜೈ ಕರ್ನಾಟಕ ಸಂಘ ಬೆಳ್ಳೇಕೆರೆ”, ಕಳೆದ ನಲವತ್ತೈದು ವರ್ಷಗಳಿಂದ ರಂಗಭೂಮಿ, ಸಾಹಿತ್ಯ, ಕಲೆ, ಪರಿಸರ ಸಂರಕ್ಷಣೆ, ಸಾಕ್ಷರತೆ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಸಂಸ್ಥೆ. ಈ ಸಂಸ್ಥೆಯು ಈ ವರ್ಷ “ಪೂರ್ಣಚಂದ್ರ ತೇಜಸ್ವಿ ರಂಗಮಂದಿರ ರಕ್ಷಿದಿ” ಯಲ್ಲಿ ಮೇ ೧, ೨೦೨೪ರಿಂದ ಮೇ ೧೫, ೨೦೨೪ರ ವರೆಗೆ ಯುವ ಜನರಿಗಾಗಿ ರಂಗ ತರಬೇತಿ ಶಿಬಿರವನ್ನು ಆಯೋಜಿಸುತ್ತಿದೆ.

ಇದು ಹದಿನೈದು ದಿನಗಳ ವಸತಿ, ಊಟ ಸಮೇತ ಶಿಬಿರವಾದ್ದರಿಂದ ನಮ್ಮ ಮಿತಿಯನ್ನಾದರಿಸಿ ಶಿಬಿರಾರ್ಥಿಗಳ ಸಂಖ್ಯೆಯನ್ನು ಸೀಮಿತಗೊಳಿಸಲಾಗಿದೆ. ಶಿಬಿರಾರ್ಥಿಗಳಿಗೆ ಪ್ರವೇಶ ಶುಲ್ಕ ಇರುತ್ತದೆ. ಶಿಬಿರಗಳು ಇಡೀ ದಿನ ನಡೆಯುತ್ತವೆ.

ಶಿಬಿರದಲ್ಲಿ ರಂಗಕಲೆ, ಚಾರಣ- ಪರಿಸರ ಅಧ್ಯಯನ, ಛಾಯಾಚಿತ್ರ ಗ್ರಹಣ, ಸಾಹಿತ್ಯ ಮುಂತಾದ ವಿಚಾರಗಳ ಪ್ರಾಥಮಿಕ ಜ್ಣಾನದ ತರಗತಿಗಳು ಹಾಗೂ ಪ್ರಾತ್ಯಕ್ಷಿಕೆಗಳು ಇರುತ್ತವೆ.

ಈ ಎಲ್ಲಾ ವಿಭಾಗಗಳಲ್ಲೂ ಆಯಾ ವಿಚಾರಕ್ಕೆ ಸಂಬಂಧಪಟ್ಟ ತಜ್ಣರು ತರಗತಿ- ಪ್ರಾತ್ಯಕ್ಷಿಕೆಗಳನ್ನು ನಡೆಸಿಕೊಡುತ್ತಾರೆ.

ಶಿಬಿರದ ಕೊನೆಯಲ್ಲಿ ಶಿಬಿರಾಥಿಗಳಿಂದ ತಮ್ಮ ಕಲಿಕೆಯ ಪುನರಾವಲೋಕನ‌ ಮತ್ತು ಸಣ್ಣ ರಂಗ ಪ್ರಸ್ತುತಿಯೂ ಇರಲಿದೆ.

ಅರ್ಜಿ ಸಲ್ಲಿಸಬಯಸುವವರಿಗೆ ಅಗತ್ಯ ವಿವರಗಳು ಹೀಗಿವೆ

ಆಸಕ್ತ ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಅಂತರ್ಜಾಲತಾಣದಲ್ಲಿ ನೇರವಾಗಿ ಅರ್ಜಿ ಸಲ್ಲಿಸಬಹುದು ಅಥವಾ ಅರ್ಜಿಯನ್ನು ಅಂತರ್ಜಾಲತಾಣದಿಂದ ಡೌನ್ ಲೋಡ್ ಮಾಡಿಕೊಂಡು ಅದನ್ನು ಅಂಚೆ ಮೂಲಕ ಕಳಿಸಬಹುದು.

೧೮ ರಿಂದ ೪೦ ವರ್ಷದ ನಡುವಿನವರೆಗೆ ಯಾರೂ ಬೇಕಾದರೂ ಶಿಬಿರದಲ್ಲಿ ಪಾಲ್ಗೊಳ್ಳಬಹುದು.

ಈ ಬಗ್ಗೆ ಯಾವುದೇ ಸಂದರ್ಶನ ಇರುವುದಿಲ್ಲ. ಅರ್ಜಿಯ ವಿವರಗಳನ್ನು ಆಧರಿಸಿ ಆಯ್ಕೆ ನಡೆಯುತ್ತದೆ.•

ಸೀಮಿತ ಸಂಖ್ಯೆಯ ಶಿಬಿರಾರ್ಥಿಗಳಿಗೆ ಪ್ರವೇಶ. ಆಯ್ಕೆಯಾದವರಿಗೆ ದಿನಾಂಕ ೨೫ ಏಪ್ರಿಲ್ ೨೦೨೪ ರೊಳಗೆ ಈ-ಮೈಲ್, ಅಥವಾ ವಾಟ್ಸಾಪ್ ದೂರವಾಣಿ ಮೂಲಕ ತಿಳಿಸಲಾಗುತ್ತದೆ.•

ಕಾರ್ಯಕ್ರಮದಲ್ಲಿ ಭಾಗವಹಿಸಲು ಶಿಬಿರದ ಅವಧಿಯ ಊಟವಸತಿ ವ್ಯವಸ್ಥೆಯ ವೆಚ್ಚವಾಗಿ ಒಟ್ಟು ರೂ ೧೦,೦೦೦ ಗಳನ್ನು ಪ್ರತಿಯೊಬ್ಬ ಶಿಬಿರಾರ್ಥಿಯೂ ಪಾವತಿಸಬೇಕು.•

ನಿಮಗೆ ಆಯ್ಕೆ ಪತ್ರ ಬಂದ ಮೇಲೆ ನಾವು ತಿಳಿಸುವ ವಿಧಾನದಲ್ಲಿ ಈ ಹಣ ಪಾವತಿಸಬೇಕು•

ಶಿಬಿರದಲ್ಲಿ ಪೂರ್ಣಾವಧಿ ಭಾಗವಹಿಸುವುದು ಕಡ್ಡಾಯ. ಶಿಬಿರದ ನಡುವೆ ಯಾವುದೇ ರಜೆ ನೀಡಲಾಗುವುದಿಲ್ಲ.•

ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ೨೦ ಏಪ್ರಿಲ್ ೨೦೨೪.

ಹೆಚ್ಚಿನ ಸಂಖ್ಯೆಯ ಅರ್ಜಿಗಳು ಬಂದ ಪಕ್ಷದಲ್ಲಿ ಆನ್ಲೈನ್ ಅರ್ಜಿ ಸೌಲಭ್ಯವನ್ನು ಈ ದಿನಾಂಕಕ್ಕೆ ಮೊದಲೇ ಮುಚ್ಚಲಾಗುತ್ತದೆ.

ವಿಳಾಸ : ಪ್ರಸಾದ್ ರಕ್ಷಿದಿಜೈ ಕರ್ನಾಟಕ ಸಂಘ ಬೆಳ್ಳೇಕೆರೆಕ್ಯಾಮನಹಳ್ಳಿ ಪೋಸ್ಟ್ ಸಕಲೇಶಪುರ ತಾಲೂಕು ಹಾಸನ್ ಜಿಲ್ಲೆ ಕರ್ನಾಟಕ 573165

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ :-9448825701 / 9901910988

ಇಮೇಲ್ ಐಡಿ Jksbellerkere@gmail.com

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *