ಸಕಲೇಶಪುರ:- ಸಕಲೇಶಪುರಕ್ಕೆ ಶೀಘ್ರ ಮಳೆಗಾಗಿ ಮತ್ತು ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಸಕಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ

ರೇವತಿ ಮಳೆ ಹಾಗು ವರ್ಷದ ಮೊದಲ ಮಳೆ ನಕ್ಷತ್ರ ಪ್ರಾರಂಭ ಆದರೂ ಸಹ ಸಕಲೇಶಪುರದಲ್ಲಿ ಮಳೆ ಇಲ್ಲದ ಕಾರಣ ಶೀಘ್ರ ಮಳೆಯಾಗಲಿ ಎಂದು ಪ್ರಾರ್ಥನೆ

ಮೋದಿ ಮೂರನೇ ಬಾರಿ ಪ್ರಧಾನಿಯಾಗಲಿ ಎಂದು ಗ್ರಾಮದೇವತೆ ಸಕಲೇಶ್ವರ ಸ್ವಾಮಿಗೆ ಹಿಂದೂ ಕಾರ್ಯಕರ್ತರಿಂದ ವಿಶೇಷ ಪೂಜೆ

ಮೋದಿ ಗೆಲುವಿಗಾಗಿ 50 ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ವಿಶೇಷ ಸಂಕಲ್ಪ ಪೂಜೆ ಸಕಲೇಶಪುರ ಹಿಂದೂ ಕಾರ್ಯಕರ್ತರಿಂದ

ಭಾರತ ದೇಶ ಭಾರತವಾಗಿ ಉಳಿಯಬೇಕಾದರೆ 2024 ನೇ ಸಾಲಿನ ಲೋಕಸಭೆ ಚುನಾವಣೆಯಲ್ಲಿ ಮೋದಿ ಗೆಲ್ಲಿಸುವ ಸಂಕಲ್ಪ ಮಾಡಬೇಕಾಗಿದೆ. ಎಂದು ಹಿಂದೂ ಸಂಘಟನೆಗಳು ತಯಾರಿ ನಡೆಸಿವೆ.

ಇಂದು ಸಕಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕಾರ್ಯಕರ್ತರು ವಿಶೇಷ ಪೂಜೆ ಸಂಕಲ್ಪ ಮಾಡಿ ಸಕಲೇಶಪುರಕ್ಕೆ ಮಳೆ ಬರಲಿ ಎಂದು ಕಾರ್ಯಕರ್ತರು ಪ್ರಾರ್ಥಿಸಿದರು ಜೊತೆಗೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಪ್ರಾರ್ಥಿಸಿದರು.

ಮೋದಿ ಮತ್ತೆ ಪ್ರಧಾನಿಯಾಗಲೆಂದು ಪ್ರತಿ ಗ್ರಾಮದ ಗ್ರಾಮದೇವತೆಯಲ್ಲಿ ವಿಶೇಷ ಸಂಕಲ್ಪ ಹಾಗೂ ಪೂಜೆ ಮಾಡಿಸಲು ಸಕಲೇಶಪುರದ ಹಿಂದೂ ಸಂಘಟನೆಗಳು ನಿಶ್ವಯಿಸಿದ್ದು. ಪ್ರತಿ ಮನೆಗೆ ಹೋಗಿ ಮೋದಿಜೀ ಯಾಕೆ ಗೆಲ್ಲಬೇಕು ನಮ್ಮ ಸನಾತನ ಧರ್ಮ ಉಳಿವಿಗಾಗಿ ದೇಶದ ಸುಭದ್ರತೆಗೆ ಮತ್ತು ನಮ್ಮ ಮುಂದಿನ ಪೀಳಿಗೆ ಉಳಿಯಬೇಕು ಎಂದರೆ ಮೋದಿ ಗೆಲುವು ಮುಖ್ಯ ಎಂದು ಜಾಗೃತಿ ಮೂಡಿಸಲಾಗುವುದು.

ಪ್ರತಿಯೊಬ್ಬರು ಮತದಾನ ಮಾಡಬೇಕು ಕಡ್ಡಾಯ ಮತದಾನ ಅತಿಅವಶ್ಯ ಎಂದು ಜನಜಾಗೃತಿ ಮಾಡಲಾಗುವುದು ಎಂದು ಹಿಂದೂ ಮುಖಂಡ ರಘು ಸಕಲೇಶಪುರ ತಿಳಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *