ಸಕಲೇಶಪುರ : ಬದ್ರಿಯಾ ಯೂತ್ ಸೆಂಟರ್ ವತಿಯಿಂದ ಪಟ್ಟಣದ ಅಜಾದ್ ರಸ್ತೆಯಲ್ಲಿರುವ ಬದ್ರಿಯಾ ಜುಮ್ಮಾ ಮಸ್ಜಿದ್ ಆವರಣದಲ್ಲಿ ಬೃಹತ್ ಇಫ್ತಾರ್ ಕೂಟ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಬದ್ರಿಯಾ ಯೂತ್ ಸೆಂಟರ್ ಅಧ್ಯಕ್ಷ ನೌಜಲ್ ಮಾತನಾಡಿ, ಕಳೆದ 32ವರ್ಷಗಳ ಹಿಂದೆ ಸ್ಥಾಪಿತವಾದ ನಮ್ಮ ಸಂಘಟನೆ ಹಲವಾರು ಸಮಾಜಮುಖಿ ಕೆಲಸ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾ ಬಂದಿರುತ್ತದೆ.

ಶೈಕ್ಷಣಿಕ, ಅರೋಗ್ಯ, ಕೊರೋನ ಸಂದರ್ಭದಲ್ಲಿ ಅಗತ್ಯವಿದ್ದವರಿಗೆ ಆಹಾರದ ಕಿಟ್, ರಂಜಾನ್ ಕಿಟ್ ನೀಡುವ ಮೂಲಕ ಸಹಾಯ ಹಸ್ತ ಚಾಚಿದೆ ಎಂದರು.

ಕಳೆದ ಹಲವು ವರ್ಷಗಳಿಂದ ಬದ್ರಿಯಾ ಮಸೀದಿ ಆವರಣದಲ್ಲಿ ರಂಜಾನ್ ಮಾಸದ ಕಡೆಯ ಹತ್ತು ದಿನ ಉಪವಾಸ ಮಾಡುವವರಿಗೆ ಶಹರಿಗೆ ಆಹಾರದ ವ್ಯವಸ್ಥೆ ಮಾಡಿದ್ದೇವೆ ಹಾಗೆ ದಿನದ ಉಪವಾಸ ಸಮಾಪ್ತಿಗೊಳಿಸಲು ಇಫ್ತಾರ್ ಕೂಟವನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.

ಇಫ್ತಾರ್ ಮೂಲ ಉದ್ದೇಶ ಕುಟುಂಬ ಮತ್ತು ಸಮುದಾಯದ ಸದಸ್ಯರನ್ನು ಒಳಗೊಂಡ ಸಾಮಾಜಿಕ ಕಾರ್ಯಕ್ರಮವಾಗಿದೆ. ಇನ್ನೊಬ್ಬರ ಹಸಿವನ್ನು ಅರಿವುದು ಉಪವಾಸದ ಮೂಲ ಉದ್ದೇಶವೆಂದರು.

ಈ ಸಂದರ್ಭದಲ್ಲಿ ಬದ್ರಿಯಾ ಜುಮಾ ಮಸೀದಿಯ ಖತೀಬ್ ಅಬ್ದುಲ್ ರಝಕ್, ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷರಾದ ಯಾದ್ಗಾರ್ ಜಾಕೀರ್, ಬದ್ರಿಯಾ ಯೂಥ್ ಸೆಂಟರ್ ನ ಸ್ಥಾಪಕ ಅಧ್ಯಕ್ಷ ಯಾದ್ಗಾರ್ ಇಬ್ರಾಹಿಂ, ಕಶ್ವ ಸುಲೈಮಾನ್, ನಿಜಾರ್ ಮಂಜ್ರಬಾದ್ ಮತ್ತು ಅದಮ್ ಹಾಜಿ ಮತ್ತು ಇನ್ನಿತರರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *