
ಸಕಲೇಶಪುರ : ನಗರದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಬಾಲಕ ಹಾಗೂ ಬಾಲಕಿಯರ ನಿಲಯಾರ್ಥಿಗಳಿಂದ ಮತದಾರರ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಯಿತು.
ಜಾಥಾವು ಸಂತೆ ಮೈದಾನದಿಂದ ಪ್ರಾರಂಭಗೊಂಡು ಹೊಸ ಬಸ್ ಸ್ಟಾಂಡ್ ಹಾಗೂ ಬಿ ಎಂ ರಸ್ತೆ ಮುಖಾಂತರ ಸಾಗಿ ಹಳೇ ಬಸ್ ಸ್ಟಾಂಡ್ ತಲುಪಿ ಅಶೋಕ ರಸ್ತೆ ಮುಖಾಂತರ ತಮ್ಮ ತಮ್ಮ ನಿಲಯಗಳ ಬಳಿ ಮುಕ್ತಯಗೊಂಡಿತು.
ಮೆರವಣಿಗೆಯುದ್ಧಕ್ಕೂ ನಿಲಯರ್ಥಿಗಳು ಮತದಾನದ ಬಗ್ಗೆ ಅರಿವು ಮೂಡಿಸುವ ಹಲವಾರು ಘೋಷಣೆಗಳನ್ನು ಕೂಗುತ್ತಾ ಮುಂಬರುವ ಲೋಕಸಭಾ ಚುನಾವಣೆಯಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸುವಂತೆ ಜಾಗೃತಿ ಮೂಡಿಸಿದರು.




