ಚನ್ನರಾಯಪಟ್ಟಣ: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಡಾ.ಸುಭುದೇಂದ್ರ ತೀರ್ಥ ಶ್ರೀಪಾದಂಗಳವರ ಪಾದಸ್ಪರ್ಶ ಮತ್ತು ಅಮೃತ ಹಸ್ತದಿಂದ ಶ್ರೀ ಮೂಲ ರಾಮರ ಪೂಜೆಯೊಂದಿಗೆ ನಿರ್ಮಾಣವಾಗಿರುವ ಚನ್ನರಾಯಪಟ್ಟಣದ ಗಾಂಧಿ ವೃತದಲ್ಲಿರುವ ರಾಯರ ರಂಗಮಂದಿರದಲ್ಲಿ ಗುರುವಾರ ಬೆಳಗ್ಗೆ ಪಂಚಾಮೃತ ಅಭಿಷೇಕ ಹಾಗೂ ಸಂಜೆ ಶ್ರೀಮತಿ ಸುಮಿತ್ರ ವಿಶ್ವನಾಥ ಮತ್ತು ತಂಡದವರಿಂದ ಶ್ರೀಗುರು ಶಂಕರಾಚಾರ್ಯರ ಸೋತ್ರ ಪಠಣ ಕಾರ್ಯಕ್ರಮ ನಡೆಸಿಕೊಟ್ಟರು.

ರಾಯರ ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿದ ನೂರಾರು ಭಕ್ತರು ಮೌನದಿಂದ ಗುರುಗಳ ನಾಮ ಪಠಣ ಮಾಡುವಲ್ಲಿ ಮಗ್ನರಾಗಿದ್ದು ವಿಶೇಷವಾಗಿತ್ತು.

ಇದೇ ಸಂದರ್ಭದಲ್ಲಿ ಕೆಂಪೇಗೌಡ ವೇದಿಕೆಯ ಸಂಸ್ಥಾಪಕ ರಾಜ್ಯ ಅಧ್ಯಕ್ಷರಾದ ಕಾಳೇನಹಳ್ಳಿ ಆನಂದ್ ರವರಿಗೆ ರಾಯರ ಪ್ರಸಾದ ನೀಡಿ ಅಭಿನಂದಿಸಲಾಯಿತು,ನಂತರ ಎಲ್ಲಾ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ರಾಯರ ರಂಗಮಂದಿರದ ಮುಖ್ಯಸ್ಥರಾದ ಎಂ ಕೆ ಪ್ರಕಾಶ್, ಸಮಾಜ ಸೇವಕರಾದ ಶ್ರೀಮತಿ ಅಹಲ್ಯ ಶ್ರೀಕಂಠಮೂರ್ತಿ,ಶ್ರೀಮತಿ ಸೌಮ್ಯಸುನಿಲ್,ವಕೀಲರಾದ ಶ್ರೀಮತಿ ಅಶ್ವಿನಿಅಂಬರೀಶ್, ರಾಯರ ಭಕ್ತರಾದ ಸಣ್ಣಪ್ಪ, ಉಪನ್ಯಾಸಕರಾದ ಪ್ರವೀಣ್,ಸೇರಿದಂತೆ ಇತರರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *