“ವಿದ್ಯುತ್ ಸ್ಪರ್ಶದಿಂದ ಕಾಫಿ ತೋಟ ಭಸ್ಮ –ಇಲಾಖೆ ವಿರುದ್ದ ಆಕ್ರೋಶ”

ಬೇಲೂರು : ತಾಲ್ಲೂಕಿನ ಮೊಗಸಾವರ ಗ್ರಾಮದ ಮಲ್ಲೇಶ್ ಎಂಬ ಕೃಷಿಕರ ಕಾಫಿ ತೋಟದಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದ ಕಾರಣದಿಂದ ತೋಟದಲ್ಲಿನ ಕಾಫಿ,ಬಾಳೆ, ಮೆಣಸು ಸೇರಿದಂತೆ ಹತ್ತಾರು ಬಗೆಯ ಫಸಲಿಗೆ ಬಂದ ಗಿಡಗಳು ಭಸ್ಮವಾಗಿದೆ. ಇದಕ್ಕೆ ವಿದ್ಯುತ್ ಇಲಾಖೆಯ ದಿವ್ಯ ನಿರ್ಲಕ್ಷ್ಯವಾಗಿದೆ. ನಮಗೆ ನ್ಯಾಯ ಮತ್ತು ಸೂಕ್ತ ಪರಿಹಾರ ನೀಡಬೇಕು ಎಂದು ನೊಂದ ರೈತರು ಮತ್ತು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ರೈತ ಮಲ್ಲೇಶ್, ನಾವುಗಳ ಸಾಲ ಮಾಡಿ ಸುಮಾರು ೩ ಎಕ್ಕರೆಗೂ ಹೆಚ್ಚು ಕಾಫಿ ತೋಟವನ್ನು ಕಷ್ಟ-ಪಟ್ಟು ಮಾಡಲಾಗಿದೆ.

ಇದರಲ್ಲಿ ಕಾಫಿ, ಮೆಣಸು ಬಾಳೆ ಸೇರಿದಂತೆ ಇನ್ನು ಮುಂತಾದ ಬೆಳೆಗಳನ್ನು ಬೆಳೆಯಾಗಿದೆ. ಮೊದಲೇ ಕಾಡಾನೆಗಳಿಂದ ಆತಂಕದಲ್ಲಿರುವ ಸಂದರ್ಭದಲ್ಲಿ ತೋಟದಲ್ಲಿ ವಿದ್ಯುತ್ ತಂತಿಯಿಂದ ಉಂಟಾದ ಬೆಂಕಿಯಿಂದ ಇಡೀ ತೋಟವೇ ನಾಶವಾಗಿದೆ.

ಈ ಮೊದಲು ಇಲ್ಲಿನ ಜೆಇ ರೇವಣ್ಣನವರಿಗೆ ತಿಳಿಸಿದರೂ ಅವರು ಉಡಾಪೆಯಿಂದ ವರ್ತಿಸಿದ್ದಾರೆ. ನಾನು ಏನು ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ. ಅಲ್ಲದೆ ಲಂಚ ಕೇಳುತ್ತಾರೆ.

ಶಾಸಕರು ತಾಲ್ಲೂಕಿನಲ್ಲಿ ಭ್ರಷ್ಟಾವಾರ ರಹಿತ ಆಡಳಿತ ನಡೆಸಬೇಕು ಎನ್ನುವ ಶಾಸಕರು ಮೊದಲು ಇಂತಹ ಅಧಿಕಾರಿ ವಿರುದ್ದ ತೀವ್ರ ಕ್ರಮಕೈಗೊಳ್ಳಬೇಕು, ಈ ಘಟನೆಯಿಂದ ಇಡೀ ಕುಟುಂಬವೇ ಮಾನಸಿಕವಾಗಿ ನೊಂದಿದ್ದು ಸಾಲವನ್ನು ಹೇಗೆ ತೀರಿಸುವುದು ಬಗ್ಗೆ ಚಿಂತನೆಯಾಗಿದೆ ನಮಗೆ ಸೂಕ್ತ ಪರಿಹಾರ ನೀಡಿ ಎಂದು ತಮ್ಮ ಆಳಲು ಹೇಳಿಕೊಂಡರು.

ಇದೇ ವೇಳೆ ಅಗ್ನಿ ಶಾಮಕ ದಳದವರು ಬಂದು ಬೆಂಕಿ ನಂದಿಸಿದರು.

ಈ ಸಂದರ್ಭದಲ್ಲಿ ಮೊಗಸಾವರ ಗ್ರಾಮದ ಚಂದ್ರಶೇಖರ್,ಮೋಹನ್ ಎಂಪಿ,ಗಣೇಶ್,ಆನಂದ್ ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *