
ಸಕಲೇಶಪುರ :- ಸಕಲೇಶಪುರ, ಆಲೂರು, ಕಟ್ಟಾಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಮುರಳಿ ಮೋಹನ್ ರವರ ಶಿಫಾರಸ್ಸಿನ ಮೇರೆಗೆ ಸಕಲೇಶಪುರ ತಾಲ್ಲೂಕು ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷರಾಗಿ ಚಿನ್ನಹಳ್ಳಿ ಪ್ರಜ್ವಲ್ ( ಯೋಗೇಶ್ ಸಿ. ಕೆ) ಅವರನ್ನು ನೇಮಿಸಲಾಗಿದೆ.
ಚಿನ್ನಹಳ್ಳಿ ಪ್ರಜ್ವಲ್ ಅವರು ತಾಲೂಕಿನಾದ್ಯಂತ ಸಮಾಜ ಸೇವೆಯ ಮೂಲಕ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು . ಇವರನ್ನು ಕಾಂಗ್ರೆಸ್ ಪಕ್ಷವು ಗುರುತಿಸಿ ತಾಲ್ಲೂಕು ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಿರುವುದು ಚುನಾವಣಾ ಸಮಯದಲ್ಲಿ ಪಕ್ಷಕ್ಕೆ ಇನ್ನಷ್ಟು ಬಲ ಬಂದಂತಾಗಿದೆ.


