
ಸಕಲೇಶಪುರ : ಲೋಕಸಭಾ ಚುನಾವಣೆ ಸಮೀಪಸುತ್ತಿದ್ದಂತೆ ಶಾಂತಿಯುತ ಚುನಾವಣೆ ನಡೆಸುವ ಸಲುವಾಗಿ ಪೊಲೀಸ್ ಇಲಾಖೆ ತಾಲೂಕಿನ ಕೆಲವರನ್ನು ಗಡಿಪಾರು ಮಾಡಲು ನೋಟೀಸ್ ಜಾರಿ ಮಾಡಿರುವುದನ್ನು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಿಂದೂ ಪರ ಸಂಘಟನೆಗಳ ಮುಖಂಡ ರಘು ಸಕಲೇಶಪುರ ಹಾಗೂ ಕಾರ್ಯಕರ್ತ ಶಿವು ಎಂಬುವರ ಮೇಲೆ ಇಲಾಖೆ ಗಡಿಪಾರಿಗೆ ಆದೇಶ ನೋಟಿಸ್ ಜಾರಿ ಮಾಡಿರುವುದನ್ನು ಮರು ಪರಿಶೀಲನೆ ಮಾಡುವಂತೆ ಹಿಂದುಪರ ಸಂಘಟನೆಗಳ ಮುಖಂಡರು ಉಪವಿಭಾಗ ಅಧಿಕಾರಿ ಶ್ರುತಿ ಅವರಿಗೆ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ತಾಲೂಕು ವಿ ಎಚ್ ಪಿ ಕಾರ್ಯದರ್ಶಿ ಮಂಜುನಾಥ್, ನಗರ ಠಾಣೆ ಮತ್ತು ಗ್ರಾಮಾಂತರ ಠಾಣೆಯಿಂದ ಹಿಂದೂ ಸಂಘಟನೆ ಕಾರ್ಯಕರ್ತರಾದ ರಘು ಸಕಲೇಶಪುರ ಮತ್ತು ಶಿವೂ (ಜಿಪ್ಪಿ) ಗಡಿಪಾರು ಮಾಡಲು ನೋಟೀಸ್ ನೀಡಿರುವುದು ಕಾನೂನು ಬಾಹಿರವಾಗಿದ್ದು, ಗಡಿಪಾರು ಆದೇಶ ಮಾಡಬಾರದೆಂದು ಅಗ್ರಹಿಸಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಬಜರಂಗದಳ ಸಹ ಸಂಯೋಜಕ ಎಚ್. ಎಂ ಕೌಶಿಕ್, ತಾಲೂಕು ಸಂಯೋಜಕ ಶ್ರೀ ಜೀತ್, ಪ್ರದೀಪ್ ವಿಜಿತ್ ಆಟೋ ಶೇಖರ್, ದುಷ್ಯಂತ್ ಗೌಡ ಪ್ರಸನ್ನ ದೇವಲಕೆರೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.




