ಹಾಸನ: ಪ್ರತಿ ವರ್ಷದಂತೆ ಈ ವರ್ಷವು ಕೂಡ ರಂಜಾನ್ ಹಬ್ಬದ ಅಂಗವಾಗಿ ಗುರುವಾರದಂದು ಮುಸಲ್ಮಾನ ಬಾಂಧವರು ನಗರದ ಹೊಸಲೈನ್ ರಸ್ತೆ ಬಳಿ ಇರುವ ಹಳೆ ಈದ್ಗಾ ಮೈದಾನದ ಆವರಣದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಜಾಗದ ಕೊರತೆಯಿಂದ ಮತ್ತು ತಡವಾಗಿ ಬಂದವರು ರಸ್ತೆ ಮೇಲೆ ನೂರಾರು ಜನ ಸಮುದಾಯದವರು ಪ್ರಾರ್ಥನೆ ಸಲ್ಲಿಸಿದರು.

೨೦೨೪ರ ಏಪ್ರಿಲ್ ೨೬ ರಂದು ನಡೆಯುವ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಮುಸ್ಲಿಂ ಬಾಂಧವರಿಗೆ ಶುಭ ಹಾರೈಸುವ ಮೂಲಕ ಮತ ಸೆಳೆಯುವ ತಂತ್ರದಲ್ಲಿ ತೊಡಗಿದ್ದರು.

ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್, ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ಸುಮುಖ ರಘು, ಸಯ್ಯಾದ್ ಅಕ್ಬರ್, ಹೊಂಬೇಶ್, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ, ಮುಖಂಡರಾದ ಹೆಚ್.ಕೆ. ಜವರೇಗೌಡ, ಬನವಾಸೆ ರಂಗಸ್ವಾಮಿ, ಕೃಷ್ಣಕುಮಾರ್, ಮಲ್ಲಿಗೆವಾಳ್ ದೇವಪ್ಪ, ರಂಜಿತ್ ಗೊರೂರು, ಜಾವಗಲ್ ಮಂಜುನಾಥ್, ಪ್ರಕಾಶ್, ರಾಮಚಂದ್ರ ಇತರರು ಮುಸ್ಲಿಂ ಬಾಧವರಿಗೆ ಇದೆ ವೇಳೆ ಶುಭ ಹಾರೈಸಿದರು.

ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಮಾಧ್ಯಮದೊಂದಿಗೆ ಮಾತನಾಡಿ, ಪ್ರತಿವರ್ಷವೂ ಕೂಡ ಮುಸ್ಲಿಂ ಬಾಂಧವರು ರಂಜಾನ್ ಹಬ್ಬವನ್ನು ಶ್ರದ್ಧೆಯಿಂದ ಆಚರಿಸುತ್ತಾರೆ. ಈ ವೇಳೆ ಹಿಂದಿನಿಂದಲೂ ಕೂಡ ನಾವುಗಳು ಶುಭ ಹಾರೈಸುತ್ತಿದ್ದು, ಈಗ ಶಾಸಕನಾಗಿ ನಿಮ್ಮ ಬಳಿಗೆ ಶುಭಾಶಯ ಹೇಳಲು ಬಂದಿದ್ದೇನೆ. ಚುಣಾವಣೆ ಸಂದರ್ಭದಲ್ಲಿ ಮುಸಲ್ಮಾನರೇ ನನ್ನ ಗೆಲುವಿಗೆ ಕಾರಣಕರ್ತರಾಗಿದ್ದು, ಅವರಿಗೆಲ್ಲಾ ಕೃತಜ್ಞತೆ ಹೇಳುತ್ತೇನೆ ಎಂದರು. ಕಳೆದ ವರ್ಷ ಬಂದಾಗ ಶಾಸಕನಾಗಿರಲಿಲ್ಲ. ಈಗ ಶಾಸಕನಾಗಿ ಬಂದಿದ್ದೇನೆ. ಆ ಋಣವನ್ನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು.

ಹಾಸನ ವಿಧಾನಸಭೆ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಬನವಾಸೆ ರಂಗಸ್ವಾಮಿ ಮಾತನಾಡಿ, ಒಂದು ತಿಂಗಳ ಕಾಲ ಉಪವಾಸದ ವ್ರತವನ್ನು ಮುಗಿಸಿ ರಂಜಾನ್ ಹಬ್ಬ ಆಚರಿಸುವ ನಿಟ್ಟಿನಲ್ಲಿ ಹಳೆ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಕಾಂಗ್ರೆಸ್ ಮುಖಂಡರುಗಳೆಲ್ಲಾ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದಾರೆ ಎಂದರು. ನಾವೆಲ್ಲರೂ ಕೂಡ ಸಹೋದರತ್ವದಲ್ಲಿ ಸಹಬಾಳ್ವೆಯಿಂದ ಬಾಳಬೇಕು. ರಂಜಾನ್ ಹಬ್ಬದ ಶುಭಾಶಯಗಳನ್ನು ಇದೆ ವೇಳೆ ಕೋರಿದರು.

ಈದ್ಘಾ ಕಮಿಟಿ ಅಧ್ಯಕ್ಷ ಸಮೀರ್ ಖಾನ್ ಮಾತನಾಡಿ, ಸಮಸ್ತ ನಾಗರೀಕ ಬಂಧುಗಳಿಗೆ, ಅಣ್ಣ ತಮ್ಮಂದಿರಿಗೆ ಹಾಗೂ ಅಕ್ಕತಂಗಿಯರಿಗೆ ರಂಜಾನ್ ಹಬ್ಬದ ಶುಭಾಶಯಗಳು. ೩೦ ದಿನಗಳ ಕಾಲ ಉಪವಾಸವನ್ನು ಮಾಡಿ ಕೊನೆಯ ದಿವಸ ಪ್ರಾರ್ಥನೆಯೊಂದಿಗೆ ರಂಜಾನ್ ಉಪವಾಸ ಮುಕ್ತಾಯಗೊಳ್ಳಲಿದೆ. ಈದಿನ ವಿಶೇಷ ಪ್ರಾರ್ಥನೆಯೊಂದಿಗೆ ಈ ಜಗತ್ತಿನ ಎಲ್ಲಾ ಕೆಡುಕುಗಳಿಗೆ ಅಂತ್ಯವಾಗಲು ಬೇಡಿಕೊಳ್ಳುತ್ತೇವೆ. ಈಗ ಬರಗಾಲ ಬಂದಿದ್ದು, ಮಳೆಗಾಗಿ ವಿಶೇಷ ಪ್ರಾರ್ಥನೆಯನ್ನು ಮಾಡಲಾಗಿದೆ ಎಂದರು.

ಧ್ವೇಷ, ಅಸೂಹೆಯನ್ನು ದೂರವಿಟ್ಟು ನಾವು ಸಹೋಧರರು ನಾವೆಲ್ಲಾ ಒಂದೆ ಭಾವನೆಯೊಂದಿಗೆ ಉಪವಾಸ ಆಚರಣೆ ಮಾಡಲಾಗುತ್ತದೆ. ಮುಂದಿನ ೧೧ ತಿಂಗಳು ಶಾಂತಿಗಾಗಿ ಸಹೊಧರತ್ವದಿಂದ ಬಾತೃತ್ವದಿಂದ ಬದುಕಬೇಕು ಎಂಬುದು ರಂಜಾನ್ ಹಬ್ಬದ ಪ್ರಾಮುಖ್ಯತೆಯಾಗಿದೆ. ಕಡು ಬಡವರ ಸೇವೆ ಮಾಡುವುದು, ಇದ್ದವರು ಇಲ್ಲದವರಿಗೆ ಕೊಡುವುದು ರಂಜಾನ್ ಹಬ್ಬದ ವಿಶೇಷತೆ ಎಂದು ಹೇಳಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *