ಸಕಲೇಶಪುರ : ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಒಂದು ತಿಂಗಳಕಾಲ ಉಪವಾಸ ವೃತವನ್ನು ಕೈಗೊಂಡು ಇಂದು ರಂಜಾನ್ ಹಬ್ಬದ ದಿನದಂದು ಶುಭ್ರವಾದ ಬಟ್ಟೆಯನ್ನು ತೊಡುವ ಮೂಲಕ ಪಟ್ಟಣದ ಸಮೀಪವಿರುವ ಕುಶಾಲನಗರದ ಈದ್ಗಾ ಮೈದಾನದಲ್ಲಿ ಸಾಮೂಹಿಕವಾಗಿ ಅಲ್ಲಾಹನುಗೆ ಪ್ರಾರ್ಥನೆ ಸಲ್ಲಿಸಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು.

ಇದೆ ಸಂದರ್ಭದಲ್ಲಿ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿ ವಿಶ್ವಾಸದಿಂದ ಆಲಂಗಿಸುವ ಮೂಲಕ ಸಂತೋಷ ಹಂಚಿಕೊಂಡರು.ಬಿಸಿಲಿನ ತಾಪಮಾನ ಹೆಚ್ಚಿದ್ದ ಹಿನ್ನೆಲೆಯಲ್ಲಿ ಯುವಕರು ಪ್ರಾರ್ಥನೆಯಲ್ಲಿ ಪಾಲ್ಗೊಂಡವರಿಗೆ ಮಜ್ಜಿಗೆ, ತಂಪು ಪಾನಿಯ ಹಾಗೂ ಹಾಗೂ ನೀರನ್ನು ನೀಡುವ ಮೂಲಕ ಬಾಯಾರಿಕೆಯನ್ನು ತಣಿಸಿದರು.

ವಿಶೇಷವೆಂದರೆ ಪ್ರತಿ ರಂಜಾನ್ ಹಬ್ಬದ ಸಂದರ್ಭದಲ್ಲಿ ಪ್ರಾರ್ಥನೆ ಸಲ್ಲಿಸುವ ಸ್ಥಳಕ್ಕೆ ವಿವಿದ ಪಕ್ಷಗಳ ಮುಖಂಡರು ಹಾಜರಾಗಿ ಶುಭಾಶಯ ಕೋರುತ್ತಿದ್ದರು ಆದರೆ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಇಂದು ಯಾರೂ ಕೂಡ ಮುಖಂಡರುಗಳು ಪ್ರಾರ್ಥನೆಯ ಸ್ಥಳದಲ್ಲಿ ಕಾಣಿಸಿಕೊಳ್ಳಲಿಲ್ಲ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *