
ಚನ್ನರಾಯಪಟ್ಟಣ: ಕೃಷ್ಣರಾಜಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ನಾಟನಹಳ್ಳಿ ಗ್ರಾಮದ ಸಂಗೀತ ಎಂಬ ಯುವತಿಯನ್ನು ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ಉಳಿಗೆರೆ ಗ್ರಾಮದ ಕಿರಣ್ ಎಂಬುವರು ನಾಲ್ಕು ವರ್ಷದ ಹಿಂದೆ ಸಿನಿಮಾ ಶೈಲಿಯಲ್ಲಿ ಕರೆದುಕೊಂಡು ಹೋಗಿ ವಿವಾಹವಾಗಿದ್ದು, ಇವರಿಗೆ ಮೂರು ವರ್ಷದ ಸಾಂಕೇತ ಎಂಬ ಮಗನಿದ್ದಾನೆ
ಇಂದು ಬೆಳಗ್ಗೆ ಸಂಗೀತ ಅವರಿಗೆ ದೈಹಿಕ ಹಲ್ಲೇ ನಡೆಸಿ ನೇಣು ಬಿಗಿದು ಕೊಲೆ ಮಾಡಿದ್ದಾರೆ,ಕೂಡಲೇ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಯನ್ನು ನೀಡಬೇಕು ಎಂದು ಆಗ್ರಹಿಸಿ ಕೆ ಆರ್ ಪೇಟೆ ತಾಲೂಕಿನ ನಾಟನಹಳ್ಳಿ ಗ್ರಾಮಸ್ಥರು ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಯ ಶವಗಾರ ಮುಂಭಾಗ ಪ್ರತಿಭಟನೆ ನಡೆಸಿದರು
ಸಂಗೀತನ ಕೊಲೆಯಲ್ಲಿ ಪ್ರಮುಖ ಆರೋಪಿಗಳಾದ ಗಂಡ ಕಿರಣ್, ಮಾವ ಧರ್ಮೇಗೌಡ, ಅತ್ತೆ ಗೌರಮ್ಮ, ಸೇರಿದಂತೆ ಕುಟುಂಬದ ಎಲ್ಲಾ ಸದಸ್ಯರು ಸೇರಿಕೊಂಡು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಲ್ಲೇ ಮಾಡಿ ಕೊಲೆ ಮಾಡಿದ್ದಾರೆ ಎಂದು ಮೃತ ಗೃಹಿಣಿ ಕುಟುಂಬಸ್ಥರು ಆರೋಪಿಸಿದರು.
ಮೃತ ದುರ್ದೈವಿ ಸಂಗೀತಳ ತಂದೆ ಮತ್ತು ತಾಯಿ ಹಿರಿಸೇವೆ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ ಎಂದು ಗ್ರಾಮಸ್ಥರು ಪತ್ರಿಕಾ ಮಾಧ್ಯಮದವರಿಗೆ ಮಾಹಿತಿ ನೀಡಿದರು.
