ಅರಕಲಗೂಡು ಕೋದಂಡರಾಮ ದೇವಾಲಯದಲ್ಲಿ ನಡೆಯುತ್ತಿರುವ ರಾಮೋತ್ಸವ ಕಾರ್ಯಕ್ರಮದಲ್ಲಿ ಮೈಸೂರಿನ ಎನ್. ಶಶಾಂಕ್ ಗಾಯನ ನಡೆಸಿದರು.

ರಾಮೋತ್ಸವ ; ಗಮನ ಸೆಳೆದ ಗಾಯನ

ಅರಕಲಗೂಡು: ಪಟ್ಟಣದ ಕೋಟೆ ಕೋದಂಡರಾಮ ದೇವಾಲಯದಲ್ಲಿ ನಡೆಯುತ್ತಿರುವ ರಾಮೋತ್ಸವ ಕಾರ್ಯಕ್ರಮದಲ್ಲಿ ಬುಧವಾರ ರಾತ್ರಿ ಮೈಸೂರಿನ ಎನ್. ಶಶಾಂಕ್ ನಡೆಸಿ ಕೊಟ್ಟ ಭಕ್ತಿ ಸಂಗೀತ ಗಾಯನ ಕಾರ್ಯಕ್ರಮ ಜನರ ಮೆಚ್ಚುಗೆ ಪಡೆಯಿತು.

ಪುರಂದರ ದಾಸರು, ತ್ಯಾಗರಾಜರು, ಮುತ್ತು ಸ್ವಾಮಿ ದೀಕ್ಷಿತ್ ಮೊದಲಾದ ವಾಗ್ಗೇಯಕಾರರ ಕೃತಿಗಳನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಯುವ ಗಾಯಕ ಜನರನ್ನು ರಂಜಿಸಿದರು.

ಹಾಸನದ ರಾಘವೇಂದ್ರ ವೈಲಿನ್ ,ಮಂಜುನಾಥ್ ಮೃದಂಗದ ಸಾಥ್ ನೀಡಿದರು.

ಜಿಪಂ ಮಾಜಿ ಅಧ್ಯಕ್ಷ ವಿ.ಎ.ನಂಜುಂಡಸ್ವಾಮಿ ಕಾರ್ಯಕ್ರಮವನ್ನು ಪ್ರಾಯೋಜನೆ ಮಾಡಿದರು.

ಕೋದಂಡರಾಮ ದೇವಾಲಯದ ಅಧ್ಯಕ್ಷ ಎ.ಎಸ್.ರಾಮಸ್ವಾಮಿ, ಕಾರ್ಯದರ್ಶಿ ಎ.ಎನ್. ಗಣೇಶಮೂರ್ತಿ, ಕೆ.ವಿ. ಪ್ರಭಾಕರ್ ಕಲಾವಿದರನ್ನು ಗೌರವಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *