
ಅರಕಲಗೂಡು: *ಲಾರಿ ಹರಿದು ಇಬ್ಬರು ಸ್ಥಳದಲ್ಲೇ ಸಾವು*
ಕೊಣನೂರು ಗ್ರಾಮದ ಅರಳಿ ಮರದ ಸಮೀಪ ಬೈಕ್ ಗೆ ಲಾರಿಯು ಗುದ್ದಿದ ಪರಿಣಾಮ ಹಿಂಬದಿಯಲ್ಲಿ ಕುಳಿತಿ್ದ್ದ ಮಹಿಳೆ ಸ್ಥಳದಲ್ಲಿಯೆ ಮೃತ ಪಟ್ಟಿದ್ದು ಬೈಕ್ ಸವಾರ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತ ಪಟ್ಟಿರುತ್ತಾರೆ.
ಮೃತರು ಮಜ್ಜನಹಳ್ಳಿ ಗ್ರಾಮದವರು ಎಂದು ಸ್ಥಳಿಯ ರು ತಿಳಿಸಿರುತ್ತಾರೆ.ಮೃತ ವ್ಯಕ್ತಿಯಾಜಮಾನ ಮರಿಯಯ್ಯ (61) ಪತ್ನಿ ವಸಂತಮ್ಮ(58) ಎಂದು ಗುರುತಿಸಲಾಗಿದೆ,
ಈ ಸಂದರ್ಭದಲ್ಲಿ ಮಾತನಾಡಿದ ಪ್ರತ್ಯಕ್ಷ ದರ್ಶಿಗಳು ಕೆ.ಐ.ಅರ್.ಡಿ.ಸಿ ಎಲ್ ವತಿಯಿಂದ ನಿರ್ಮಾಣ ವಾಗುತ್ತಿರುವ ರಸ್ತೆಯು ಅವೈಜ್ಞಾನಿಕ ವಾಗಿ ಕೂಡಿದ್ದು ಈ ಅಪಘಾತಕ್ಕೆ ಪ್ರಮುಖ ಕಾರಣವಾಗಿದೆ ಸೂಮಾರು ಎರಡು ವರ್ಷಗಳಿಂದ ನೆಡೆಯುತ್ತಿರುವ ರಸ್ತೆ ಕಾಮಗಾರಿಯು ಬಹಳ ಜನರನ್ನು ಆಹುತಿ ಪಡೆದಿದೆ ಈ ಅಪಘಾತಕ್ಕೆ ಅವರೆ ನೇರ ಕಾರಣ ಎಂದು ಅಕ್ರೋಶ ಹೊರ ಹಾಕಿದರು.
