ಸಕಲೇಶಪುರ : ಕರ್ನಾಟಕ ಪಬ್ಲಿಕ್ ಸ್ಕೂಲ್ ಹಾನುಬಾಳು ಗ್ರಾಮದ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಭಾರತ ರತ್ನ, ಸಂವಿಧಾನ ಶಿಲ್ಪಿ, ಭಾರತದ ಭಾಗ್ಯವಿದಾತ, ಡಾ:ಬಿ.ಆರ್. ಅಂಬೇಡ್ಕರ್ ರವರ ಜನ್ಮದಿನವನ್ನು ಆಚರಿಸಲಾಯಿತು.

ಈ ದಿನದ ಸಮಾರಂಭದ ವಿಶೇಷತೆಯೇನೆಂದರೆ , ನಮ್ಮೂರಿನ ಅಂಬೇಡ್ಕರ್ ನಗರ ಮತ್ತು ಇಂದಿರಾನಗರ ಗ್ರಾಮದ ನಮ್ಮ ದಲಿತ ಸಮುದಾಯದ ಬಂದುಗಳು ತಾವು ಕಲಿತ ಮತ್ತು ತಮ್ಮ ಮಕ್ಕಳು ಕಲಿಯುತ್ತಿರುವ (ನೂತನ ಶಾಲೆ)ಶಾಲೆಗೆ ದೇಣಿಗೆಯನ್ನ ನೀಡಿ ಬಾಬಾ ಸಾಹೇಬರ ಹುಟ್ಟುಹಬ್ಬವನ್ನು ಬಹಳ ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಿದ್ದಾರೆ.

ಸ್ಥಳೀಯ ಕಾಫಿ ತೋಟಗಳಲ್ಲಿ ಕಾರ್ಮಿಕರಾಗಿ ದುಡಿಯುತ್ತಾ ತಮ್ಮ ಸಂಪಾದನೆಯ ಒಂದಿಷ್ಟು ಮೊತ್ತವನ್ನು ಸಮಾಜಕ್ಕೆ ಅರ್ಪಣೆ ಮಾಡುವ ಉದ್ದೇಶದಿಂದ ಮೊದಲಿಗೆ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ದೇಣಿಗೆ ನೀಡಿರುವುದು ತುಂಬಾ ಶ್ಲಾಘನೀಯ.

ನೂರು ವರುಷ ತುಂಬಿದ ಶಾಲೆಯನ್ನ ಪುನರುಜ್ಜೀವನ ಗೊಳಿಸಿದ ಶಾಲಾಬಿವೃದ್ದಿ ಸಮಿತಿ ಮತ್ತು ಹಿರಿಯ ವಿಧ್ಯಾರ್ಥಿಗಳ ಸಂಘದ ನಿಸ್ವಾರ್ಥ ಸೇವೆಯನ್ನ ಗುರುತಿಸಿ , ಇಂದು ಸುಮಾರು 50,000 ರೂ, ನಗದು ರೂಪದ ದೇಣಿಗೆಯನ್ನು ಹಿರಿಯ ವಿಧ್ಯಾರ್ಥಿಗಳ ಸಂಘದ ಅಧ್ಯಕ್ಷರ ಅನುಪಸ್ತಿತಿಯಲ್ಲಿ ಉಪಾಧ್ಯಕ್ಷರುಗಳಾದ ಮೋಹನ್ ಹೆಚ್.ಜಿ., ಸಂತೋಷ್ ಹೆಚ್.ಎಸ್. ಮತ್ತು ಕಾರ್ಯದರ್ಶಿಗಳಾದ ಲೋಹಿತ್ ಐ.ಎಸ್. ರೆಹಮಾನ್ ಎಂ.ಬಿ. ಮತ್ತು ಶಾಲಾ ಎಸ್,ಡಿ,ಎಂ,ಸಿ ಅಧ್ಯಕ್ಷರಾದ ಅರುಣ್,ಹೆಚ್.ಕೆ ಮತ್ತು ಶಾಲಾಮುಖ್ಯೊಪಾಧ್ಯಯರು ಸಹ ಶಿಕ್ಷಕರ ಸಮ್ಮುಖದಲ್ಲಿ ,ಹಾನುಬಾಳು ಇಂದಿರಾನಗರ ದಲಿತ ಸಮುದಾಯದ ನಾಯಕರುಗಳಾದ ಹೆಚ್.ಬಿ.ಗೋಪಾಲ್ ರವರು, ಹೆಚ್.ಬಿ.ದೇವರಾಜ್ ರವರು,ಸೋಮಶೇಖರ್ ರವರು, ನಾಗೇಶ್ ರವರು ಮತ್ತು ಅವರ ತಂಡದವರು ಹಸ್ತಾಂತರಿಸಿದರು.

ಈ ದಿನದ ವಿಶೇಷ ಕಾರ್ಯದಲ್ಲಿ ಬಾಗಿಯಾದ ಸರ್ವರಿಗೂ ಶಾಲೆಯ ಪರವಾಗಿ ಮತ್ತೊಮ್ಮೆ ಅಬಿನಂದನೆ ಮತ್ತು ಧನ್ಯವಾದಗಳನ್ನು ಈ ಮೂಲಕ ಸಮರ್ಪಿಸುತ್ತಿದ್ದೆವೆ.. ಅಧ್ಯಕ್ಷರು : ಎಸ್,ಡಿ,ಎಂ,ಸಿ. ಕೆ,ಪಿ,ಎಸ್ ಹಾನುಬಾಳು…

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *