ಸಕಲೇಶಪುರ : ಪಟ್ಟಣದ 14 ನೇ ವಾರ್ಡ್ ಜನತಾ ಕ್ವಾಟರ್ಸ್ ನ 3 ಮತ್ತು 4 ನೇ ಅಡ್ಡ ರಸ್ತೆ ಯ ಮತದಾರರು ಇಂದು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ ಎಂದು ಮತದಾನ ಬಹಿಷ್ಕಾರ ಮಾಡಲು ನಿರ್ಧಾರ ಮಾಡಿರುವುದು ಪ್ರಜಾಪ್ರಭುತ್ವ ವಿರೋಧಿ ನೀತಿಯಾಗಿದ್ದುಕಳೆದ ನಲವತ್ತು ವರ್ಷಗಳಿಂದಲೂ ಈ ವಾರ್ಡ್ ನಲ್ಲಿ ಯಾವುದೇ ರಸ್ತೆ ಹಾಗು ಡ್ರೈನೇಜ್ ವ್ಯವಸ್ಥೆ ಸರಿ ಇಲ್ಲದ ಕಾರಣ ಇಲ್ಲಿಯ ಮತದಾರರು ಮತದಾನ ಬಹಿಷ್ಕಾರ ಮಾಡಲು ನಿರ್ದರಿಸಿರುವುದು ಸರಿಯಾಗಿದ್ದರೂ ಕೂಡ ಪುರಸಭೆ ಚುನಾವಣೆ ಕಳೆದು 6 ವರ್ಷಗಳು ಕಳೆದರೂ ಕೂಡ ಸ್ಥಳೀಯ ನಿವಾಸಿಗಳು ಪುರಸಭೆ ಸದಸ್ಯರನ್ನು ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಯಾಕೆ ಇದುವರೆಗೂ ಪ್ರತಿಭಟನೆ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.

ಎಲ್ಲರೂ ಚುನಾವಣೆ ಸಮಯದಲ್ಲಿ ಮತಯಾಚನೆ ಮಾಡುವ ಸಂದರ್ಭದಲ್ಲಿ ಎಲ್ಲವನ್ನೂ ಸರಿ ಮಾಡಿಕೊಡುತ್ತೇವೆ ಎಂದು ಭರವಸೆಗಳನ್ನು ಕೊಡುತ್ತಾರೆಯೇ ಹೊರತು, ಯಾವುದೇ ಜನಪ್ರತಿನಿಧಿಗಳು,ಪುರಸಭೆಯ ಸದಸ್ಯರುಗಳೇ ಆಗಲಿ ನಮ್ಮ ಸಮಸ್ಯೆಯನ್ನು ಪರಿಹರಿಸಿ ಕೊಡುತ್ತಿಲ್ಲ ಎಂದು ಇಲ್ಲಿಯ ನಿವಾಸಿಗಳು ದೂರಿರುವುದಕ್ಕೆ ನನ್ನ ಸಹಮತವಿದೆ

ಆದರೆ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಚುನಾವಣೆ ಬಹಿಷ್ಕಾರ ಮಾಡುವ ಬದಲು ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಬಹಿಷ್ಕಾರ ಮಾಡುವುದು ಸೂಕ್ತ ಎಂದಿದ್ದಾರೆ.ಹಾಗಾಗಿ ಈ ಬಾರಿ ಮತದಾನ ಬಹಿಷ್ಕಾರ ಮಾಡುವುದು ಬೇಡ ಎಂದಿದ್ದಾರೆ.

ಹೇಳಿಕೆ : ಈ ಕೆಲಸವನ್ನು ಪುರಸಭೆ ಸದಸ್ಯರು ಮಾಡಿಸಬೇಕು,ಲೋಕಸಭೆ ಚುನಾವಣೆಯ ಮತದಾನವನ್ನು ಬಹಿಷ್ಕಾರ ಮಾಡುವುದು ಸರಿಯಲ್ಲ, **ಅವಿನಾಶ್ ಡಿಸೋಜ ಸ್ಥಳೀಯ ನಿವಾಸಿ”.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *