ಸಕಲೇಶಪುರ : ಸೊಮವಾರ ಪಟ್ಟಣದಲ್ಲಿ ರೋಡ್ ಶೋ ಮೂಲಕ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಪ್ರಚಾರ ನಡೆಸಿ ಸಾರ್ವಜನಿಕರ ಸಭೆಯನ್ನೊದ್ದೇಶಿ ಮಾತನಾಡಿ, ಬೇಕಾಬಿಟ್ಟಿ ಗ್ಯಾರಂಟಿ ಘೋಷಿಸಿರುವ ರಾಜ್ಯ ಸರ್ಕಾರ ಕಳೆದ 11 ತಿಂಗಳಿನಿAದ ಈ ಯೋಜನೆಗಳ ಹಣ ಹೊಂದಿಸಲು ಎಲ್ಲ ವಸ್ತುಗಳ ಬೆಲೆಯನ್ನು ನಾಲ್ಕು ಪಟ್ಟು ಹೆಚ್ಚಳ ಮಾಢಿದೆ ಇನ್ನೂ ಬೆಲೆ ಏರಿಕೆ ಅಸಾಧ್ಯವಾಗಿರುವುದನ್ನು ಅರಿತು ರಾಜ್ಯ ಬಿಜೆಪಿ ಸರ್ಕಾರ ಪರಿಶೀಷ್ಟಜಾತಿ ವರ್ಗಗಳ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ 15 ಸಾವಿರ ಕೋಟಿಯನ್ನು ಗ್ಯಾರೆಂಟಿ ಯೋಜನೆಗಳಿಗೆ ಬಳಸಿಕೊಳ್ಳುವ ಮೂಲಕ ಪರಿಶೀಷ್ಟ ಜಾತಿಗೂ ಅನ್ಯಾಯ ಎಸೆಗಲಾಗಿದೆ.

ಇನ್ನೂ ಗ್ಯಾರೆಂಟಿ ಯೋಜನೆಗಳಿಗೆ ಹಣ ಹೊಂದಿಸುವುದು ಅಸಾದ್ಯ ಎಂಬ ವರಧಿ ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ತಲುಪಿಸಿರುವುದರಿಂದ ಲೋಕಸಭಾ ಚುನಾವಣೆಯ ನಂತರ ಈ ಎಲ್ಲ ಗ್ಯಾರೆಂಟಿಗಳು ಸ್ಥಗಿತಗೊಳ್ಳುವುದು ನಿಶ್ಚಿತವಾಗಿದೆ. ರಾಜ್ಯದಲ್ಲಿ ಬೀಕರ ಬರಗಾಲಕ್ಕೆ ಸಿಲುಕಿ 840 ರೈತರು ಮೃತಪಟ್ಟರು ಪರಿಹಾರ ನೀಡಲು ಸರ್ಕಾರದ ಬಳಿÀ ಹಣವಿಲ್ಲದಾಗಿದೆ. ಕೇಂದ್ರ ಸರ್ಕಾರ ನೇರೆಂದ್ರ ಮೋದಿ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ನಂತರ ಹಿಂದೂಗಳ ಮಾರಣಹೋಮಕ್ಕೆ ಕಾರಣವಾಗಿದ್ದ ಅರ್ಟಿಕಲ್ 370 ನ್ನೂ ತೆಗೆದು ಹಾಕುವ ಮೂಲಕ ಶಾಂತಿ ನೆಲಸುವಂತೆ ಮಾಢಿದೆ. ಅರ್ಟಿಕಲ್ 370 ಕಾಂಗ್ರೆಸ್ ಪಕ್ಷದ ಪಾಪದ ಕೂಸಾಗಿದೆ. ದೇಶದ 80 ಕೋಟಿ ಬಡವರಿಗೆ ಕೇಂದ್ರ ಸರ್ಕಾರ ಐದು ಕೆಜಿ ಅಕ್ಕಿ ನೀಡುವ ಮೂಲಕ ಬಡವರ ಪರವಾಗಿ ಕೆಲಸ ಮಾಡುತ್ತಿದೆ .

ದೇಶದ ಸುರಕ್ಷತೆಯ ದೃಷ್ಟಿಯಿಂದ ಮತ್ಸಧ್ದಿ ದೇವೆಗೌಡರು ಬೇಷರತ್ತು ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ. ಕಳೆದ 10 ವರ್ಷಗಳಲ್ಲಿ ಒಂದು ರಜೆ ತೆಗೆದುಕೊಳ್ಳದೆ ಕೆಲಸ ಮಾಡುತ್ತಿರುವ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿ ಮಾಡಲು ಪಕ್ಷದ ಕಾರ್ಯಕರ್ತರು ಕನಿಷ್ಠ ತಮ್ಮ ಭೂತ್‌ಗಳಲ್ಲಿ ಎರಡು ಗಂಟೆ ಸಮಯ ಕಳೆಯುವ ಮೂಲಕ ಕೇಂದ್ರ ಸರ್ಕಾರದ ಯೋಜನೆಗಳನ್ನು ಮತದಾರರಿಗೆ ವಿವರಿಸುವ ಮೂಲಕ ಮೋದಿಯವರ ಕೈ ಬಲಪಡಿಸ ಬೇಕು ಎಂದರು.

ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮಾತನಾಢಿ, ಹಾಸನ ಲೋಕಸಬಾ ಕ್ಷೇತ್ರದಿಂದ ನನ್ನ ಸ್ಪರ್ದೇ ನೆಪಮಾತ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ನನಗೆ ಆಶೀರ್ವಾದ ಮಾಡಬೇಕು. ರಾಜ್ಯ ಸರ್ಕಾರ ಗ್ಯಾರೆಂಟಿಗಳ ಮೇಲೆ ನಂಬಿಕೆ ಇಟ್ಟು ಹೋರಾಟ ಮಾಡುತ್ತಿದೆ. ಆದರೆ ಗ್ಯಾರೆಂಟಿಗಳು ಕೈಹಿಡಿಯುವುದಿಲ್ಲ ಎಂಬುದು ಸದ್ಯ ಸಿದ್ದರಾಮಯ್ಯನವರಿಗೆ ಮನವರಿಕೆಯಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಜಿಲ್ಲೆಗೆ ನೀಡಿರುವ ಕೂಡುಗೆ ಏನು. ಚುನಾವಣೆಯ ವೇಳೆ ಮತಕೇಳಲು ಬರುವ ಇವರು, ಕೇಂದ್ರ ಸರ್ಕಾರ ಜಿಲ್ಲೆಗೆ ಏನು ನೀಡಿದ ಎಂದು ಪ್ರಶ್ನಿಸುತ್ತಿದ್ದಾರೆ.

ನಾನು ಈ ಸಭೆಯ ಮೂಲಕ ನಮ್ಮ ವಿರೋದಿಗಳಿಗೆ ಹೇಳುವುದೇನೆಂದರೆ ಜಿಲ್ಲೆಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಕಳೆದ 5 ವರ್ಷಗಳ ಅವಧಿಯಲ್ಲಿ 15 ಸಾವಿರ ಕೋಟಿ ಅನುದಾನ ನೀಡಿದೆ ಎಂಬುದನ್ನು ತಿಳಿಸುತ್ತಿದ್ದೇನೆ ಎಂದರು. ಸಕಲೇಶಪುರ ವಿಧಾನಸಬಾ ಕ್ಷೇತ್ರದಲ್ಲಿ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಐವರು ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾರೆ ಆದರೆ ಮಾನವಿಯತೆಯ ದೃಷ್ಟಿಯಿಂದಲು ರಾಜ್ಯ ಸರ್ಕಾರದ ಪ್ರತಿನಿಧಿಗಳು ನೊಂದ ಕುಟುಂಭದ ಕಣ್ಣೀರು ಒರೆಸುವ ಕೆಲಸ ಮಾಡಲಿಲ್ಲ ಇದು ರಾಜ್ಯ ಸರ್ಕಾರ ಮಲೆನಾಡ ಬಗ್ಗೆ ಎಂತಹ ತಾತ್ಸರದ ಮನೋಭಾವನೆ ಹೊಂದಿದೆ ಎಂಬುದನ್ನು ತೊರುತ್ತಿದೆ ಎಂದರು.

ಶಾಸಕ ಸೀಮೆಂಟ್ ಮಂಜು ಮಾತನಾಡಿ ದೇಶದ ಸುಭದ್ರತೆ,ಅಭಿವೃದ್ಧಿ ದೃಷ್ಟಿಯಿಂದ ಮತ್ತೊಮ್ಮೆ ನರೇಂದ್ರಮೋದಿ ಪ್ರಧಾನಿಯಾಗುವುದು ಅಗತ್ಯವಾಗಿದ್ದು ಪ್ರಪಂಚದಲ್ಲೆ ಭಾರತ ದೇಶದ ಬಗ್ಗೆ ಗೌರವದ ಬಾವನೆ ಮೂಡುವಂತ ವಾತವಾರಣ ಇಂದು ಸೃಷ್ಟಿಯಾಗಿದೆ ಭಾರತ ವಿಶ್ವಗುರುವಾಗಿ ಹೊರಹೊಮ್ಮಲು ಮತ್ತೊಮ್ಮೆ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬರುವುದು ಅಗತ್ವವಿದೆ. ಸಕಲೇಶಫುರ ವಿಧಾನಸಭಾ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣನವರಿಗೆ ಅತಿಹೆಚ್ಚಿನ ಮತದ ಮುನ್ನಡೆಗಳಿಸಿಕೊಡಲು ಎರಡು ಪಕ್ಷದ ಕಾರ್ಯಕರ್ತರು ಮನೆಮನೆ ಪ್ರಚಾರ ನಡೆಸ ಬೇಕು ಎಂದರು.

ಮಾಜಿ ಶಾಸಕ ಎಚ್.ಕೆ ಕುಮಾರಸ್ವಾಮಿ ಮಾತನಾಡಿ, ರಾಜ್ಯ ಸರ್ಕಾರ ಗ್ಯಾರೆಂಟಿ ಜಾರಿಗೆ ಸಮಿತಿ ರಚಿಸಿದೆ ಇದರ ಬದಲು ತಾಲೂಕಿಗೊಂದು ಟ್ರಾನ್ಸ್ಪರ್ ಸಮಿತಿ ರಚಸಿದರೆ ಉತ್ತಮ ಎಂದು ಗೇಲಿ ಮಾಡಿದರು. .

ರೋಡ್ ಶೋ: ಪಟ್ಟಣಕ್ಕೆ ಆಗಮಿಸಿದ ವಿಜಯೇಂದ್ರ ಸಕಲೇಶ್ವರಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ದೇವಸ್ಥಾನ ಪ್ರದಕ್ಷಿಣೆ ಹಾಕಿದ ನಂತರ ದೇವಸ್ಥಾನದಿಂದ ಹಳೆಬಸ್ ನಿಲ್ದಾನದವರಗೆ ರೋಡ್‌ಶೋ ನೆಡೆಸಿದರು.

ಹಳೆಬಸ್ ನಿಲ್ದಾಣದಲ್ಲಿ ಸಮಾಜ ಸೇವಕ ಬನ್ನಹಳ್ಳಿಪುನೀತ್ ನಾಲ್ಕನೂರು ಕೆ.ಜಿ ತೋಕದ ಸೇಬಿನ ಹಾರವನ್ನು ಬಿಜೆಪಿ ರಾಜ್ಯಾಧ್ಯಕ್ಷರಿಗೆ ಹಾಕುವ ಮೂಲಕ ಗಮನಸೇಳೆದರು.

ಈ ವೇಳೆ ಮಾಜಿ ಶಾಸಕರಾದ ಗುರುದೇವ್,ಎಚ್.ಎಂ ವಿಶ್ವನಾಥ್, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ತಾಲೂಕು ಬಿಜೆಪಿ ಅಧ್ಯಕ್ಷ ಅಶ್ವಥ್, ಕೆ.ಎಲ್ ಸೋಮಶೇSರ್ ಮುಂತಾದವರಿದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *