
ಬೇಲೂರು : ನಾರ್ವೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಗೀತಾ ಲಕ್ಷ್ಮಣ್ ಶೆಟ್ಟಿ ಆಯ್ಕೆ.
ಹಿಂದೆ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯಲ್ಲಿ ಗೀತಾ ಲಕ್ಷ್ಮಣ್ ಶೆಟ್ಟಿ ಒಬ್ಬರೇ ನಾಮಪತ್ರ ಸಲ್ಲಿಸಿದರು.
ಆದ್ದರಿಂದ ಅವರು ಆವಿರೋದ ಆಯ್ಕೆ ಆಗುವುದರ ಮೂಲಕ ಅಧ್ಯಕ್ಷರಾಗಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಎಸ್. ಬಿ. ಕೃಷ್ಣೇಗೌಡ, ಸೋಮಯ್ಯ, ಉಪಾಧ್ಯಕ್ಷ ಮದುಕುಮಾರ್, ನಿರ್ದೇಶಕರುಗಳಾದ ಪ್ರವೀಣ್ ಕುಮಾರ್, ಎಸ್. ವಿ. ದೇವರಾಜ್, ಗ್ರಾ. ಪಂ. ಅಧ್ಯಕ್ಷೆ ಮಾಲಾಶ್ರೀ ಎಸ್. ಕೆ.ರಾಮಚಂದ್ರ ಶೆಟ್ಟಿ, ಮಂಜುನಾಥ್ ಶೆಟ್ಟಿ, ಶುಭವತಿ, ರವಿಕುಮಾರ್,ಕಾರ್ಯನಿರ್ವಹಣಾಧಿಕಾರಿ ಜ್ಯೋತಿ ಎಸ್, ಹೇಮರಾಜ್ ಇದ್ದರು


