
ಸಕಲೇಶಪುರ : ಹುಬ್ಬಳ್ಳಿ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ್ ಹತ್ಯೆಯ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಇಡೀ ದೇಶವೇ ಬೆಚ್ಚಿಬೀಳಿಸುವಂತ ಪೈಚಾಚಿಕ ಕೃತ್ಯ ರಾಜ್ಯದ ಹುಬ್ಬಳ್ಳಿಯಲ್ಲಿ ನೆಡೆದಿದೆ.
ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಬಿವಿಬಿ ಕಾಲೇಜು ಆವರಣದಲ್ಲಿ ಗುರುವಾರ ಮಧ್ಯಾಹ್ನ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ್ ಎಂಬುವರನ್ನು ಫಯಾಜ್ ಕೊಲೆ ಮಾಡಿರುವುದು ಇಡೀ ದೇಶವೇ ತಲೆ ತಗ್ಗಿಸುವ ಕೆಲಸವಾಗಿದೆ.
ಈ ಹಿಂದೆ ರಾಜ್ಯದಲ್ಲಿ ಇಂತ ಘಟನೆಗಳು ಸಾಕಷ್ಟು ನೆಡೆದಿದ್ದು ಅಪರಾಧಿಗಳಿಗೆ ಕಾನೂನಿನ ಭಯವೇ ಇಲ್ಲದಂತಾಗಿದೆ. ಆದ್ದರಿಂದ ನೇಹಾ ಹತ್ಯೆಗೈದ ಪಾಯಾಜ್ ಗೆ ಗಲ್ಲು ಶಿಕ್ಷೆ ವಿಧಿಸುವ ಮೂಲಕ ರಾಜ್ಯದ ಹೆಣ್ಣುಮಕ್ಕಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕಿದೆ.
ಇದರ ಜೊತೆಗೆ ಇಂತ ಹೇಯ ಕೃತ್ಯ ನೆಡೆಸುವ ಅಪರಾಧಿಗಳಿಗೆ ಕಠಿಣ ಸಂದೇಶ ನೀಡಿದಂತಾಗುತ್ತದೆ.
ಹುಬ್ಬಳ್ಳಿಯ ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಮಗಳ ಸ್ಥಿತಿ ಈಗೆ ಆದರೆ ಜನಸಾಮಾನ್ಯರ ಕಥೆ ಏನು ಎಂಬ ಪ್ರಶ್ನೆ ಕಾಡುತ್ತಿದ್ದೆ. ಹಾಗಾಗಿ ಅಪರಾಧಿ ಪಯಾಜ್ ಗೆ ಗಲ್ಲು ಶಿಕ್ಷೆಯೊಂದೆ ನೇಹಾಳ ಆತ್ಮಕ್ಕೆ ಶಾಂತಿ ದೊರಕಿಸಿ ಕೊಡಬಲ್ಲದು ಆದ್ದರಿಂದ ಆರೋಪಿಯಾಗಿರುವ ಫಯಾಜ್ ಗೆ ಯಾವುದೇ ಕಾನೂನು ಸೇವೆ ದೊರಕದಂತೆ ನೋಡಿಕೊಂಡು ನ್ಯಾಯಾಲಯದ ಮೂಲಕ ಗಲ್ಲು ಶಿಕ್ಷೆ ವಿಧಿಸುವಂತೆ ವೀರಶೈವ ಲಿಂಗಾಯತ ಯುವ ಸೇನೆ ಮನವಿ ನೀಡಿದರು.
ಈ ಸಂದರ್ಭದಲ್ಲಿ ವೀರಶೈವ ಯುವಸೇನೆ ತಾಲೂಕು ಅಧ್ಯಕ್ಷ ಸಾಗರ್ ಜಾನೆ ಕೆರೆ, ಉಪಾಧ್ಯಕ್ಷರಾದ ಎ.ಜಿ. ಗಗನ್, ವೀರಶೈವ ಯುವಸೇನೆ ಸಂಚಾಲಕರಾದ ಭೂಮೇಶ್, ಸನತ್, ಅರುಣ್ ಕುಮಾರ್ ಹುರುಡಿ, ಪ್ರಶಾಂತ್ ಹುರುಡಿ, ಮಸ್ತಾರೆ ಲೋಕೇಶ್, ಶಶಿ ಹಾನುಬಾಳು, ಪುನೀತ್ ಬನ್ನಳ್ಳಿ, ಬ್ಯಾಕರವಳ್ಳಿ ವಿಜಿಕುಮಾರ್, ಭಾಸ್ಕರ್ ಬ್ಯಾಕರವಳ್ಳಿ, ಯಡೇಹಳ್ಳಿ ಮಂಜುನಾಥ್, ಅಕ್ಕಮಹಾದೇವಿ ಸಂಘದ ಅಧ್ಯಕ್ಷರಾದ ಶಶಿಕಲಾ ಲೋಕೇಶ್, ಚೈತ್ರ ನವೀನ್, ನೇತ್ರ ಮಂಜುನಾಥ್ ಹಾಗೂ ವೀರಶೈವ ಸಮಾಜದ ಬೆಳಗೋಡು ಹೋಬಳಿ ಅಧ್ಯಕ್ಷರಾದ ನಾಗೇಂದ್ರ ಪ್ರಸಾದ್ ಮುಂತಾದವರು ಉಪಸ್ಥಿತರಿದ್ದರು.



