
ಸಕಲೇಶಪುರ : ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಎಂಬ ಯುವತಿಯನ್ನು ಚಾಕಿವಿನಿಂದ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಕೊಲೆ ಪಾತಕನಿಗೆ ಗಲ್ಲು ಶಿಕ್ಷೆ ವಿದಿಸಬೇಕು ಎಂದು ಆಗ್ರಹಿಸಿ ಹಾಸನ ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಿ ಎಸಿ ಅವರಿಗೆ ಮನವಿ ಸಲ್ಲಿಸಲಾಯಿತು.
ಇತ್ತೀಚೆಗೆ ಹುಬ್ಬಳ್ಳಿಯ ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿ ನೇಹಾ ಎಂಬುವವಳನ್ನು ಸಾರ್ವಜನಿಕವಾಗಿ ಚಾಕುವಿನಿಂದ ಚುಚ್ಚಿ ಕೊಲೆಮಾಡಿರುವುದು ನಾಗರೀಕ ಸಮಾಜ ತಲೆತಗ್ಗಿಸುವಂತದ್ದು ಇದನ್ನು ನಮ್ಮ ಸಂಘಟನೆಯ ವತಿಯಿಂದ ಉಘ್ರವಾಗಿ ಖಂಡಿಸುತ್ತಿದ್ದು ಇದಕ್ಕೆ ಯಾವುದೆ ರಾಜಕೀಯ ,ಧರ್ಮ , ಜಾತಿಯನ್ನು ಪರಿಗಣಿಸದೆ ಸರ್ಕಾರ ಹಾಗೂ ನ್ಯಾಯಾಂಗ ವ್ಯವಸ್ಥೆ ಆರೋಪಿ ಕೊಲೆಪಾತಕನಿಗೆ ಕಠಿಣ ಶಿಕ್ಷೆ ವಿದಿಸಬೇಕು ಎಂದು ಮುಸ್ಲಿಂ ಮುಖಂಡರು ಉಪವಿಭಾಗಾದಿಕಾರಿ ಡಾ.ಎಂ.ಕೆ ಶೃತಿ ಅವರ ಮಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಮುಖಂಡರುಗಳಾದ , ಸಲೀಂ ಕೊಲ್ಲಹಳ್ಳಿ, ಸೈಯದ್ ಮುಫೀಜ್ , ಮಹಮ್ಮದ್, ಜಾಕೀರ್, ಇತರರು ಇದ್ದರು.

