ಆಲೂರು : – ಪ್ರತಿ ವರ್ಷದಂತೆ ಈ ಬಾರಿಯೂ ಶುಕ್ರವಾರ ರಾತ್ರಿ ಬನದಿಂದ ಬನಶಂಕರಿ, ಲಕ್ಷ್ಮೀದೇವಿ, ಶನೇಶ್ವರ ಹಾಗೂ ಬಸವೇಶ್ವರ ಸ್ವಾಮಿಯವರ ಕಳಸಗಳನ್ನು ಗ್ರಾಮದ ಮುಖ್ಯ ಬೀದಿ ಗಳಲ್ಲಿ ಬನಶಂಕರಿ ಅಮ್ಮನವರ ಅಡ್ಡೆ ಹಾಗೂ ವಾದ್ಯಗೋಷ್ಠಿಯ ಮೂಲಕ ದೇವಸ್ಥಾನಗಳಿಗೆ ಕರೆತಂದು ಉತ್ಸವವನ್ನು ಆಚರಿಸಿ.

ಮರುದಿನ ಬೆಳಗಿನ ಜಾವ ಮತ್ತೆ ಹೊಳೆಯಿಂದ ಗಂಗೆಯನ್ನು ದೇವಿಯವರ ಕಳಸ ಬನಶಂಕರಿ ಅಮ್ಮನವರ ಕಳಸ ಲಕ್ಷ್ಮೀದೇವಿ ಅಮ್ಮನವರ ಕಳಸ ಶನೇಶ್ವರ ಸ್ವಾಮಿಯವರ ಕಳಸ ಇನ್ನು ಮುಂತಾದ ದೇವತೆಗಳ ಕಳಸಗಳನ್ನು ಗಂಗೆ ಪೂಜೆ ಮಾಡಿ ಅಲ್ಲಿಂದ ದೇವಸ್ಥಾನದ ಆವರಣಕ್ಕೆ ಕೊಲ್ಲಿ ಅಮ್ಮನವರ ಅಡ್ಡೆ ಹಾಗೂ ವಾದ್ಯಗೋಷ್ಠಿಯ ಮೂಲಕ ಎಲ್ಲಾ ಕಳಶ ದೇವತೆಗಳನ್ನು ಕೆಂಡ ಆಯುವ ಸ್ಥಳಕ್ಕೆ ಕರೆತಂದು ಕೆಂಡ ಹಾದು ಶನೇಶ್ವರ ಸ್ವಾಮಿ, ಬಸವೇಶ್ವರ ಸ್ವಾಮಿ ಆಂಜನೇಯ ಸ್ವಾಮಿ ಬನಶಂಕರಿ ಅಮ್ಮನವರ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ಕೊಲ್ಲಿ ಅಮ್ಮನವರ ಉತ್ಸವವನ್ನು ಕುಣಿಸಿ ಸಡಗರ ಸಂಭ್ರಮದಿಂದ ತೊಗರನಹಳ್ಳಿ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಲ್ಲದೆ ಹೊರ ಜಿಲ್ಲೆಯ ಭಕ್ತಾದಿಗಳು ಸೇರಿ ಸಂಭ್ರಮದಿಂದ ಆಚರಿಸಿದರು.

ನಂತರ ಬಂದಂತಹ ಭಕ್ತಾದಿಗಳಿಗೆ ಅನ್ನದಾಸೋಹ ನಡೆಸಲಾಯಿತು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *