
ಬೇಲೂರು : ಪುರಸಭೆಯ ಆವರಣದಲ್ಲಿ ಎರಡನೇ ಹಂತದ ಮತದಾನ ಜಾಗೃತಿ ಕಾರ್ಯಕ್ರಮವನ್ನು. ಚುನಾವಣಾ ಆಯೋಗದ ನಿರ್ದೇಶನದಂತೆ,ಚುನಾವಣಾ ಸಹಾಯಕ ಅಧಿಕಾರಿ ಮಂಜುನಾಥ್ ಮತ್ತು ಬೇಲೂರು ತಹಸಿಲ್ದಾರ್ ಎಂ ಮಮತಾರವರು ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಹಸಿಲ್ದಾರ್ ಎಂ ಮಮತ ಇದೇ ತಿಂಗಳು 26ರಂದು ಶುಕ್ರವಾರ ಲೋಕಸಭೆ ಸಾರ್ವತಿಕ ಚುನಾವಣೆ ಹಿನ್ನೆಲೆ ಮತದಾರ ಬಂಧುಗಳು ಯಾವುದೇ, ಆಸೆ ಆಮಿಷಕ್ಕೆ ಒಳಗಾಗದೆ,,ಭಯಭೀತಿವಿಲ್ಲದೆ, ನಿರ್ಭೀತಿಯಿಂದ ಪ್ರಜಾಪ್ರಭುತ್ವದ ಶಕ್ತಿ ಬೇಲೂರು ತಾಲೂಕಿನ ನಾಗರಿಕ ಬಂಧುಗಳು ಮತದಾನದ ಹಕ್ಕು ಎನ್ನದೆ ಪ್ರತಿಯೊಬ್ಬರ ಕರ್ತವ್ಯ ಮತ್ತು ಜವಾಬ್ದಾರಿ. ಪ್ರಜಾಪ್ರಭುತ್ವ ವ್ಯವಸ್ಥೆ ಉಳಿವಿಗಾಗಿ ಪ್ರತಿಯೊಬ್ಬ ನಾಗರಿಕರು ಸಾಕ್ಷಿ ಆಗಬೇಕು ಎಂದು ಅರಿತು ಮತಗಟ್ಟೆಗೆ ತೆರಳಿ ಮತದಾನ ಚಲಾಯಿಸಬೇಕು . ನಮ್ಮ ಉದ್ದೇಶ ಬೇಲೂರು ತಾಲೂಕಿನಲ್ಲಿ ಚುನಾವಣಾ ಆಯೋಗ ಆಶಯದಂತೆ.ಶೇಕಡ ನೂರರಷ್ಟು ಮತದಾನ ಮಾಡಿಸುವ ಗುರಿ ಹೊಂದಿದ್ದೇವೆ ಎಂದರು.
ನಂತರ ಮಾತನಾಡಿದ ಸಹಾಯಕ ಚುನಾವಣಾ ಅಧಿಕಾರಿ ಮಂಜುನಾಥ್ ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಆರು ಹೋಬಳಿ ಕೇಂದ್ರಗಳಿಂದ.270.ಮತಗಟ್ಟೆಗಳಿದ್ದು ಪ್ರತಿಯೊಂದು ಮತಗಟ್ಟೆಯಲ್ಲಿ ನಮ್ಮ ಅಧಿಕಾರಿ ವರ್ಗದವರು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ನಂತರ ಮಾತನಾಡಿದ ಪುರಸಭೆ ಮುಖ್ಯ ಅಧಿಕಾರಿ ಇಂದು ರವರು ಬೇಲೂರು ಪಟ್ಟಣ ವ್ಯಾಪ್ತಿಗೆ ಸೇರಿದ ಮತಗಟ್ಟೆಗಳಿಗೆ ನಮ್ಮ ಪುರಸಭೆ ವತಿಯಿಂದ ಮೂಲಭೂತ ಸೌಕರ್ಯ ಒದಗಿಸುವುದು ನಮ್ಮ ಜವಾಬ್ದಾರಿ ಮತ್ತು ಪ್ರತಿಯೊಂದು ವಾರ್ಡ್ಗಳಿಗೆ ನಾಟಕ ಪ್ರದರ್ಶನ ನಡೆಯಿಸುವ ಮೂಲಕ ಮತದಾನ ಜಾಗೃತಿ ನಡೆಸಿ ನಮ್ಮ ನಡೆ ಮತದಾನ ಕಡೆ ಎಂಬ ಕಾರ್ಯಕ್ರಮ ಆಯೋಜಿಸಲಾಗಿದ್ದು ಪ್ರತಿಯೊಬ್ಬರು ತಮ್ಮ ಜವಾಬ್ದಾರಿ ಮತದಾನ ಮಾಡುವ ಮೂಲಕ ನಿಭಾಯಿಸಬೇಕು ಎಂದು ಕರೆ ನೀಡಿದರು.
ಬಳಿಕ ಮಾತನಾಡಿದ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಸತೀಶ್ ರವರು ಪ್ರತಿಯೊಂದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಮ್ಮ ಅಧಿಕಾರಿಗಳು ಪ್ರತಿಯೊಂದು ಮತದಾರರಿಗೆ ಮತದಾನ ಕೇಂದ್ರ ಪರಿಚಯಿಸುವುದು ಮತದಾನ ಮಾಡುವಂತೆ ಜಾಗೃತಿ ಮೂಡಿಸುತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಹಾಸನ ಲೋಕಸಭಾ ಚುನಾವಣೆಯ ತಾಲೂಕು ಸ್ವೀಪ್ ಸಮಿತಿಯ ಪ್ರಸನ್ನ .ಲೋಹಿತ್ .ಸೇರಿದಂತೆ ಸದಸ್ಯರು ಹಾಗೂ ತಾಲೂಕು ಮಟ್ಟದ ಎಲ್ಲಾ ಅಧಿಕಾರಿ ವರ್ಗದವರು ನಾಟಕ ಮಂಡಳಿಯ ಸದಸ್ಯರು ಹಾಜರಿದ್ದರು.

