
ಅರೇಹಳ್ಳಿ: ಪ್ರತಿ ವರ್ಷದಂತೆ ಈ ವರ್ಷವೂ ಕೆರೆಕೋಡಮ್ಮನವರ ಜಾತ್ರಾ ಮಹೋತ್ಸವವನ್ನು ಮೂರು ದಿನಗಳ ಕಾಲ ಆದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ ಎಂದು ಶ್ರೀ ಆದಿಶಕ್ತಿ ಕೆರೆಕೋಡಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ಗೋಪಾಲ್ ಹೇಳಿದರು.
ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಹಿರಿಗರ್ಜೆ-ಕೊಪ್ಪಲು ಗ್ರಾಮದಲ್ಲಿ ನಡೆದ ಜಾತ್ರಾ ಮಹೋತ್ಸವದ ಸಂಭ್ರಮಾಚರಣೆಯನ್ನು ಕುರಿತು ಮಾತನಾಡಿದ ಅವರು, ಪೂಜಾ ಮಹೋತ್ಸವದಲ್ಲಿ ಗಂಗಾ ಪೂಜೆ, ಅಮ್ಮನವರ ರಾತ್ರಿ ಉತ್ಸವ ಏರ್ಪಡಿಸಲಾಗಿತ್ತು.
ಎರಡನೇ ದಿನ ಅಮ್ಮನವರು ಬನಕ್ಕೆ ಹೊರಡುವುದು, ಗಂಗಾಸ್ಥಾನದಲ್ಲಿ ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ ಹಾಗೂ ಹಗಲು ಉತ್ಸವ ಜರುಗಿತು. ಕೊನೆಯ ದಿನ ಹವಳಪ್ಪ ಸ್ವಾಮಿಯವರಿಗೆ ಹಾಗೂ ಚಿಕ್ಕಮ್ಮನವರಿಗೆ ಅಮ್ಮನವರ ಬನದಲ್ಲಿ ಕವಳ ಕಾರ್ಯಕ್ರಮ ನಡೆಯಿತು.
ಸುತ್ತ ಮುತ್ತ ಗ್ರಾಮಗಳ ಸಾವಿರಾರು ಭಕ್ತರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ಎಂದರು.
ಕಾರ್ಯದರ್ಶಿ ದಿನೇಶ್ ಹೆಚ್.ಬಿ ಮಾತನಾಡಿ, ಈ ತಾಯಿಯ ಮನೆವೊಕ್ಕಲಿನವರು ಸುಮಾರು ೧೫೦ ಹಳ್ಳಿಗಳಲ್ಲಿ ವಾಸಮಾಡುತ್ತಿದ್ದಾರೆ. ಈ ಪೂಜಾ ಕಾರ್ಯಕ್ರಮಕ್ಕೆ ಅಷ್ಟು ಒಕ್ಕಿಲಿನವರು ಎಷ್ಟೇ ಅನ್ಯ ಕರ‍್ಯದಲ್ಲಿ ತಲ್ಲೀನರಾಗಿದ್ದರೂ ಸಹ ಬಿಡುವು ಮಾಡಿಕೊಂಡು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದರು.
ಮಂಜುನಾಥ್, ಕೆ.ಆರ್ ದಿನೇಶ್, ಚಂದ್ರಯ್ಯ, ಕಾರ್ತಿಕ್, ಅರ್ಚಕ ವೀರಭದ್ರ,ಚಂದ್ರಶೇಖರ್, ನಿಶಾಂತ್, ಪ್ರೀತಮ್, ರುದ್ರೇಶ್,ನಂದೀಶ್,ಮಹೇಂದ್ರ ಹಾಗೂ ಇನ್ನಿತರರು ಈ ವೇಳೆ ಉಪಸ್ಥಿತರಿದ್ದರು.


