ಬೇಲೂರು : ವಿಶ್ವವಿಖ್ಯಾತ ಬೇಲೂರು ಚನ್ನಕೇಶವ ಸ್ವಾಮಿಯ ದಿವ್ಯ ಬ್ರಹ್ಮ ರಥೋತ್ಸವ ಮತ್ತು ನಾಡ ರಥೋತ್ಸವ 2 ದಿನಗಳ ಕಾಲ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಯಶಸ್ವಿಯಾಗಿ ನೆರವೇರಿತು.

ಸುಮಾರು 12 ದಿನಗಳಿಂದ ವಿಶ್ವ ಪ್ರಸಿದ್ಧ ಶ್ರೀ ಚನ್ನಕೇಶವ ಸ್ವಾಮಿಯ ರಥೋತ್ಸವದ ಅಂಗವಾಗಿ ರಾತ್ರಿ ವೇಳೆ ವಿಧಿ ವಿಧಾನಗಳೊಂದಿಗೆ ಹತ್ತಾರು ಉತ್ಸವಗಳು ನೆರವೇರಿದ ಬಳಿಕ ಏಪ್ರಿಲ್ 20 ಶನಿವಾರ ದಿವ್ಯ ಬ್ರಹ್ಮ ರಥೋತ್ಸವ 21ರ ಭಾನುವಾರ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಅದ್ದೂರಿ ನಾಡ ರಥೋತ್ಸವ ಯಶಸ್ವಿಯಾಗಿ ನೆರವೇರಿತು

ಸಾಂಪ್ರದಾಯಕದಂತೆ ನಾಡ ರಥೋತ್ಸವ ನಡೆದ ದಿನವೆ ರಾತ್ರಿ ವೇಳೆ 4 ಮೂಲೆ ಅಡ್ಡೆಗಾರ ನೇತೃತ್ವದಲ್ಲಿ ಕೈ ಅಡ್ಡೆ ಮೂಲಕ ಹನುಮಂತೋತ್ಸವ ನಡೆಸುವುದು ಹಿಂದಿನಿಂದಲೂ ನಡೆದು ಬರುತ್ತಿದ್ದು . ಕೆಲವು ಉಸ್ತುವಾದಿಗಳು ಅಡ್ಡಯ ಮೂಲಕ ನೆರವೇರುತ್ತಿತ್ತು ಆದರೆ ಹಲವು ವರ್ಷಗಳ ಹಿಂದೆ ಟ್ರ್ಯಾಕ್ಟರ್ ಟ್ರಾಲಿಯ ಮೂಲಕ ಉತ್ಸವ ನಡೆಸಲಾಗುತ್ತಿತ್ತು ಆದರೆ ಈ ಬಾರಿ ವಿಶೇಷವಾಗಿ 4 ಮೂಲೆಯ ಅಡ್ಡೆಗಾರರು ಮತ್ತು ಭಕ್ತಾದಿಗಳು ದೇವಾಲಯದ ಆಡಳಿತ ಮಂಡಳಿಯ ಸಹಕಾರದಿಂದ ಅತ್ಯಂತ ವಿಜೃಂಭಣೆಯಿಂದ ಕೈಯಟ್ಟೆ ಉತ್ಸವ ನೆರವೇರಿತು

ಅದೇನ ಪೂರ್ವಾ ಸಂದರ್ಭದಲ್ಲಿ ಜೈ ಶ್ರೀರಾಮ್ ಎಂದು ಕೂಗುತ್ತಾ ಯುವಕರು ಹನುಮಂತನನ್ನ ಹೆಗಲ ಮೇಲೆ ಹೊತ್ತು ದೇವಾಲಯದ ನಾಲ್ಕು ಮೂಲೆಗಳನ್ನು ತಮ್ಮ ಭಕ್ತಿಯನ್ನು ಹನುಮನಿಗೆ ಸಮರ್ಪಿಸಿದರು ಅಲ್ಲದೆ ಹನುಮಂತನ ಉತ್ಸವ ಬರುವ ಸಂದರ್ಭದಲ್ಲಿ 4 ಮೂಲೆಗಳನ್ನು ಸಹ ಅಪಾರ ಭಕ್ತಾದಿಗಳು ನಿಂತು ಉತ್ಸವವನ್ನು ಕಣ್ತುಂಬಿಕೊಂಡರು ಮಾಡಿಕೊಡದೆ ಒಗ್ಗಟ್ಟಿನಿಂದ ಕೈ ಅಡ್ಡೆಯ ಮೂಲಕವೇ ರಾತ್ರಿ ಹನುಮಂತೋತ್ಸವವನ್ನು ಅದ್ದೂರಿಯಾಗಿ ನೆರವೇರಿಸಿದ್ದು ವಿಶೇಷವಾಗಿ ಕಂಡುಬಂದಿತು.

ಇದೇ ಸಂದರ್ಭ ಸ್ಥಳದಲ್ಲಿ ನರೆದಿದ್ದ ಸಹಸ್ರಾರು ಭಕ್ತಾದಿಗಳು ಉತ್ಸವಕ್ಕೆ ಕೈ ಮುಗಿದು ಕಣ್ಣು ತುಂಬಿಕೊಂಡರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *