
ಹಾಸನ : ರಾಜ್ಯದಲ್ಲಿ ಇತ್ತಿಚಿಗೆ ನಡೆದಂತಹ ನೇಹಾ ಅವರ ಹತ್ಯೆಯನ್ನು ಖಂಡಿಸಿ ಬಿಜೆಪಿ ಮುಖಂಡರು, ವಿಶ್ವಹಿಂದೂ ಪರಿಷತ್ತು ಸೇರಿದಂತೆ ಹಲವಾರು ಸಂಘಟನೆಗಳು ಖಂಡಿಸಿ ನಗರದ ಹೇಮಾವತಿ ಪ್ರತಿಮೆ ಬಳಿ ರಸ್ತೆ ಮಧ್ಯೆ ಕುಳಿತು ಪ್ರತಿಭಟಿಸಿ ಮೆರವಣಿಗೆ ಹೊರಟಾಗ ಪ್ರತಿಭಟನಗಾರರನ್ನು ಪೊಲೀಸರು ೩೦೦ಕ್ಕೂ ಹೆಚ್ಚು ಜನರನ್ನು ಬಂಧಿಸಿದ ಘಟನೆ ನಡೆಯಿತು.
ಬಿಜೆಪಿ ಮಾಜಿ ಅಧ್ಯಕ್ಷ ರೇಣುಕುಮಾರ್ ಮತ್ತು ಬಿಜೆಪಿ ಮಹಿಳಾ ಅಧ್ಯಕ್ಷೆ ನೇತ್ರಾವತಿ ಮಂಜುನಾಥ್ ಮಾತನಾಡಿ, ಇಡೀ ಕರ್ನಾಟಕ ರಾಜ್ಯದಲ್ಲಿ ನೇಹಾ ಹತ್ಯೆ ಸೇರಿದಂತೆ ಅನೇಕ ಘಟನೆಗಳು ನಡೆದಿದೆ. ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಬಂದ ಮೇಲೆ ಬಿಜಿ ಹಳ್ಳಿಯಲ್ಲಿ ನಡೆದ ಘಟನೆ, ಮಂಗಳೂರಿನ ಪ್ರವೀಣ್ ಹತ್ಯೆ ಸೇರಿದಂತೆ ನಾನಾ ರೀತಿಯ ಕೊಲೆ, ಹಲ್ಲೆ ಪ್ರಕರಣ ನಡೆದಿದೆ.
ಇಲ್ಲಿರುವುದು ಕಾಂಗ್ರೆಸ್ ಸರಕಾರವಲ್ಲ. ತಾಲೀಬಾನ್ ಸರಕಾರದಲ್ಲಿ ಇದ್ದೇವೆ ಎನ್ನುವ ಭಾವನೆ ಸಾಮಾನ್ಯ ಜನರಲ್ಲಿ ಮೂಡುತ್ತಿದೆ. ನೇಹಾ ಅವರ ಹತ್ಯೆಯನ್ನು ಕಾಂಗ್ರೆಸ್ ಸರಕಾರವು ಕೂಡ ಒಂದು ಸಾಮಾನ್ಯ ಪ್ರಕರಣ ಎಂದು ಮುಖ್ಯಮಂತ್ರಿಗಳು ಮತ್ತು ಗೃಹಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಹಗುರವಾಗಿ ತೆಗೆದುಕೊಂಡಿರುವ ಮನೋಭಾವ ಹೊಂದಿರುವುದಾಗಿ ದೂರಿದರು.
ಇದೆ ರೀತಿ ಮುಂದುವರೆದರೇ ರಾಜ್ಯದಲ್ಲಿ ಹೆಣ್ಣು ಮಕ್ಕಳು ಭಯದ ವಾತವರಣದಲ್ಲಿ ಇರಬೇಕಾಗುತ್ತದೆ. ಜೈಶ್ರೀರಾಮ್ ಎಂದು ಕೂಗಿದರೇ ಅವರ ಮೇಲೆ ಹಲ್ಲೆ ಮಾಡುವ ಪ್ರಯತ್ನ ಮಾಡುತ್ತಾರೆ. ಮೋದಿ ಮೇಲೆ ಹಾಡು ಬರೆದರೇ ಅವರ ಮೇಲೆ ಹಲ್ಲೆ ಪ್ರಯತ್ನ ನಡೆದಿದೆ.
ಇವರ ವ್ಯವಸ್ಥೆ ಪಾಕಿಸ್ತಾನ್ ಜಿಂದಾಬಾದ್ ಎಂದು ವಿಧಾನಸೌದ ಎದುರು ಕೂಗಿದರೇ ಅವರನ್ನು ಸಮರ್ಥನೆ ಮಾಡಿಕೊಳ್ಳುವ ಸರಕಾರವಾಗಿದೆ. ಇಂತಹ ಕೆಟ್ಟ ಸರಕಾರವನ್ನು ತೊಲಗಿಸುವ ವ್ಯವಸ್ಥೆ ಶೀಘ್ರ ಮಾಡಲು ಜನರು ಕಾಯುತ್ತಿದ್ದಾರೆ ಎಂದರು.
ನೇಹಾ ಅವರ ಹತ್ಯೆ ದೇಶದಲ್ಲಿ ಬಹಳ ಬಿರುಗಾಳಿ ಬೀಸಿದೆ. ಹತ್ಯೆ ಮಾಡಿದ ಅಪರಾಧಿ ಮತ್ತು ಸಹಕಾರ ನೀಡಿದ ಅಚ್ಟು ಜನರನ್ನು ಬಂಧಿಸಿ ಅವರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಅಮಿತ್ ಶೆಟ್ಟಿ, ಶೋಭನ್ ಬಾಬು, ಚನ್ನಕೇಶವ, ವೇಣುಗೋಪಾಲ್, ಪ್ರೀತಿವರ್ಧನ್, ನೇತ್ರಾವತಿ ಮಂಜುನಾಥ್, ರಾಕೇಶ್ ಇತರರು ಉಪಸ್ಥಿತರಿದ್ದರು.






