ಬೇಲೂರು : ತಾಲೂಕಿನ ಹನಿಕೆ ಗ್ರಾಮಪಂಚಾಯತಿ ವ್ಯಾಪ್ತೀಯ ಹೊನ್ನೆನಹಳ್ಳಿ ಗ್ರಾಮದ ಸುಮಾರು ೪೫ ಕುಟುಂಬಗಳು ಚುನಾವಣೆಯಲ್ಲಿ ಮತಗಟ್ಟೆ ಸಂಖ್ಯೆ ೫೭ ರಲ್ಲಿ ಮತದಾನ ಮಾಡದೆ ಹೊರಗುಳಿದರು.

ಈ ವೇಳೆ ಮಾತನಾಡಿದ ತಾಪಂ ಮಾಜಿ ಸದಸ್ಯ ಶೇಖರಯ್ಯ ,ಗ್ರಾಮಸ್ಥರಾದ ಬಸವರಾಜು ,ಚಂದ್ರಶೇಖರ್ ಶಿವಣ್ಣ ಮಾತನಾಡಿ ನಮ್ಮ ಗ್ರಾಮಕ್ಕೆ ಸುಮಾರು ಮೂರು ವರ್ಷಗಳಿಂದ ಮೂಲಭೂತ ಸೌಕರ್ಯಗಳಿಲ್ಲ ಅದರಲ್ಲೂ ಬಹುಮುಖ್ಯವಾಗಿ ಕುಡಿಯುವ ನೀರು ಒಳಚರಂಡಿ ರಸ್ತೆ ಯಾರಿಗಾದರೂ ಆರೋಗ್ಯ ಸಮಸ್ಯೆಯಾದರೂ ಒಂದೇ ಒಂದು ಆಂಬುಲೆನ್ಸ್ ಕೂಡ ಗ್ರಾಮಕ್ಕೆ ಬರಲು ಹಿಂದೇಟಾಕುತ್ತಾರೆ.

ಬರಗಾಲದ ಹಿನ್ನಲೆಯಲ್ಲಿ ಇಲ್ಲಿರುವ ಕೊಳವೆ ಬಾವಿಗಳಲ್ಲಿ ನೀರಿಲ್ಲದೆ ಪರಿತಪಿಸುತ್ತಿದ್ದರು ನಮ್ಮ ಕಷ್ಟಕ್ಕೆ ಯಾರೂ ಸ್ಪಂದಿಸುತ್ತಿಲ್ಲ.

ಗ್ರಾಪಂ ಅಧ್ಯಕ್ಷರು ಹಾಗೂ ಅಧಿಕಾರಿಗಳ ಬೇಜವಬ್ದಾರಿ ತನದಿಂದ ನಮಗೆ ಕುಡಿಯಲು ನೀರಿಲ್ಲದಂತಾಗಿದೆ.ಅದಕ್ಕಾಗಿ ಇಂದು ನಡೆಯುತ್ತಿರುವ ಚುನಾವಣೆಯಲ್ಲಿ ಮತದಾನ ಮಾಡದೆ‌ ನಾವು ಹೊರಗುಳಿಯುತ್ತಿದ್ದೇವೆ ಎಂದು ಗ್ರಾಮದ ಮಹಿಳೆಯರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಗ್ರಾಮಸ್ಥರಾದ ರಂಗಸ್ವಾಮಿ ,ರಾಜಯ್ಯ,ತೀರ್ಥಯ್ಯ,ಜಗದೀಶ್,ವಿಜಯಕುಮಾರ್,ಮಲ್ಲೇಶಯ್ಯ,ಜಯಂತಿ, ರೇಣುಕಾ,ಆಶಾ,ಪೂಜಾ,ಗಂಗ,ಮಲ್ಲಮ್ಮ ಇತರರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *