ಬೇಲೂರು : ಏಪ್ರಿಲ್. ೨೬”ಕೋಳಿ ಅಂಗಡಿ ಮತ್ತೆ ಮುನ್ನೆಲೆಗೆ – ದಲಿತ ಸಂಘಟನೆ ಆಕ್ರೋಶ ” :- ಬೇಲೂರು ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನದ ಬಳಿ ಅಸ್ವಚ್ಚತೆಗೆ ಕಾರಣವಾಗಿದ್ದ ಕೋಳಿ ಅಂಗಡಿಗಳನ್ನು ತೆರೆವು ಮಾಡಬೇಕು ಎಂದು ಕಳೆದ ಎರಡು ದಶಕಗಳ ಹೋರಾಟಕ್ಕೆ ಇಲ್ಲಿನ ಶಾಸಕರಾದ ಹೆಚ್.ಕೆ.ಸುರೇಶ್ ಮತ್ತು ಪುರಸಭೆಯ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳ ಕಾರ್ಯಕ್ಷಮತೆಯಿಂದ ಕೋಳಿ ಅಂಗಡಿಗಳನ್ನು ತೆರವು ಮಾಡಲಾಗಿತ್ತು.

ಬಳಿಕ ಕೋಳಿ ಅಂಗಡಿ ಮಾಲೀಕರು ನ್ಯಾಯಾಲಯದ ಮೆಟ್ಟುಲು ಏರಿ ನಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ತನಕ ಸ್ಥಳಾವಕಾಶಕ್ಕೆ ಅರ್ಜಿ ಸಲ್ಲಿಸಿದರು.

ಅಂತಯೇ ಪುರಸಭಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಬುಧವಾರ ಸಂಜೆ ಕೋಳಿ ಅಂಗಡಿಗಳಿಗೆ ಹಾಕಿದ ಬೀಗ ಮುದ್ರೆಯನ್ನು ತೆಗೆಯಲು ಬಂದ ಸಂದರ್ಭದಲ್ಲಿ ದಲಿತ ಮುಖಂಡರು ಮತ್ತು ಪುರಸಭಾ ಅಧಿಕಾರಿಗಳ‌ ನಡುವೆ ತೀವ್ರ ಮಾತಿನ ಚಕಮಕಿಗೆ ಕಾರಣವಾಯಿತು.

ಈ ವೇಳೆ ಮಾತನಾಡಿದ ದಲಿತ ಮುಖಂಡರಾದ ಪವರ್ತಯ್ಯ, ಮಂಜುನಾಥ, ಮಹೇಶ್, ಶಂಭುನಹಳ್ಳಿ‌ಬಾಬು, ಮಹೇಶ್. ಮರಿಯಪ್ಪ, ತೀರ್ಥಕುಮಾರ್, ಕರವೇ ಚಂದ್ರಶೇಖರ, ಎಂ.ಜಿ.ವೆಂಕಟೇಶ್ ಇನ್ನೂ ಮುಂತಾದ ಮುಖಂಡರು ಅಧಿಕಾರಿಗಳನ್ನು ತಡೆದು ನ್ಯಾಯಾಲಯದಲ್ಲಿ ನೀಡಿದ ಆದೇಶ ಪ್ರತಿಯನ್ನು ನೀಡುವಂತೆ ಒತ್ತಾಯಿಸಿದರು.

ಅಲ್ಲದೆ ಪುರಸಭಾ ಅಧಿಕಾರಿಗಳು ಸಂಜೆ ವೇಳೆಯಲ್ಲಿ ಬಂದು ಕೋಳಿ ಅಂಗಡಿಗಳ ಬೀಗ ಮುದ್ರೆ ತೆಗೆಯಲು ಮುಂದಾಗಿರುವ ಹಿಂದೆ ಅನುಮಾನ ಕಾಡಾತ್ತಿದೆ.ಕೋಳಿ ಅಂಗಡಿಯವರ ಜೊತೆಗೆ ಪುರಸಭೆ ಒಳ ಒಪ್ಪಂದ ಮಾಡಿಕೊಂಡ ಕಾರಣದಿಂದ ಅವರ ಪರ ವಾಕಲತ್ತು ವಹಿಸಿದ್ದಾರೆ.

ನಾಳೆ ಏನಾದರೂ ಮತ್ತೆ ಕೋಳಿ ಅಂಗಡಿಗೆ ಪುರಸಭೆ ಅವಕಾಶ ನೀಡಿದರೆ ಖಂಡಿತ ಉಗ್ರ ಹೋರಾಟ ನಡೆಸಬೇಕಾಗುತ್ತದೆ. ದಲಿತರು ಸುಮ್ಮನಿದ್ದರೆ ಎಂದು ಇಲ್ಲದ ಸಲ್ಲದ ಕೆಲಸ ಮಾಡಲು ಇಲ್ಲಿ ಬಿಡಲ್ಲ. ಅಂಬೇಡ್ಕರ್ ಒಂದು ಜಾತಿ ಧರ್ಮಕ್ಕೆ ಸೀಮಿತವಾಗಿಲ್ಲ. ಇಂತಹ ವ್ಯಕ್ತಿಯ ಹೆಸರಿನಲ್ಲಿ ಅಂಬೇಡ್ಕರ್ ಭವನ ಬಳಿ ಅಸ್ವಚ್ಚತೆಗೆ ಕಾರಣವಾಗಿದೆ ಎಂದು ಕಳೆದ ೨೦ ವರ್ಷದಿಂದ ಹೋರಾಟ ಮಾಡಿದ ಫಲದಿಂದ ಸದ್ಯ ಶಾಸಕರು ಮತ್ತು ಪುರಸಭಾ ವತಿಯಿಂದ ನ್ಯಾಯ ನೀಡಿದ್ದಾರೆ.

ಇದೆ ಮಳಿಗೆಗೆ ಮಾಂಸ ಮಾರಾಟ ಹೊರತು ಪಡಿಸಿ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಲಿ ನಮ್ಮ ಅಭ್ಯಂತವಿಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಪುರಸಭಾ ಅಧಿಕಾರಿಗಳು ವಾಪಸು ತೆರಳಿದರು.

ಕೋಳಿ ಅಂಗಡಿಗಳನ್ನು ಡಾ.ಬಿ.ಆರ್.ಅಂಬೇಡ್ಕರ್ ಭವನ ಬಳಿಯೇ ನಡೆಸಬೇಕು ಎಂಬ ಛಲಕ್ಕೆ ಇಲ್ಲಿನ ಕೋಳಿ ಅಂಗಡಿ ಮಾಲೀಕರು ಮುಂದಾಗಿರುವುದು ನಿಜಕ್ಕೂ ಶೋಚನೀಯ. ಇದನ್ನು ನಮ್ಮ ಸಮಾಜ ಸಂಪೂರ್ಣವಾಗಿ ಖಂಡಿಸುತ್ತದೆ. ನಾವುಗಳು ಗೌರವಯುತದಿಂದ ಮನವಿ ಮಾಡಲಾಗಿದೆ ಮುಂದಿನ ದಿನದಿಂದ ಅಶಾಂತಿ ನಡೆದರೆ ಕೋಳಿ ಅಂಗಡಿ ಮಾಲೀಕರೇ ನೇರೆ ಹೋಣೆ ಎಂದು ದಲಿತ ಮುಖಂಡರು ಎಚ್ಚರಿಕೆ ನೀಡಿದರು.

ನಂತರ ಮಾತನಾಡಿದ ಕಂದಾಯ ಅಧಿಕಾರಿಗಳಾದ ಪ್ರಶಾಂತ್ ಕುಮಾರ್ ಹಾಗು ಗೋಪಿ ಮಾತನಾಡಿ ನ್ಯಾಯಾಲಯದ ಆದೇಶವನ್ನು ಪಾಲಿಸುವುದು ನಮ್ಮ ಕರ್ತವ್ಯ ಈಗಾಗಲೇ ನ್ಯಾಯಾಲಯದ ದಾವಾ ಸಂಖ್ಯೆ ೮೭೯೧ ರಲ್ಲಿ ಆನಂದ್ ಹಾಗು ಇತರರು ಅರ್ಜಿ ಸಲ್ಲಿಸಿದ್ದರು.

ಅದರಂತೆ ಒಟ್ಟು ೫ ಅಂಗಡಿ ಮಳಿಗೆಗಳಿಗೆ ಬೀಗ ತೆರಯಲು ನ್ಯಾಯಾಲಯ ನಮಗೆ ಆದೇಶ ನೀಡಿದೆ ನಾವು ಕಾನೂನು ಚೌಕಟ್ಟಿನಲ್ಲಿ ಅದನ್ನು ತೆಗೆಸಿದ್ದೇವೆ.ಪುರಸಭೆಯಿಂದ ಪರವಾನಗಿ ಸೂಕ್ತ ರೀತಿಯಲ್ಲಿ ಪಡೆಯಬೇಕು ಆದರೆ ಇಲ್ಲಿಯ ಸಾರ್ವಜನಿಕರು ಹಾಗು ಕೆಲ ಸಂಘಟನೆಗಳು ಬೀಗ ತೆರೆಯಲು ಅವಕಾಶ ನೀಡದೆ ಇರುವುದರಿಂದ ನಾವು ಸಂಬಂಧಪಟ್ಟವರಿಗೆ ಮಾಹಿತಿ ನೀಡುತ್ತೇವೆ ಎಂದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *