ಸಂತೆ ಕಾಳಮ್ಮ ದೊಡ್ಡಮ್ಮ ಹಾಗೂ ಚಿಕ್ಕಮ್ಮನವರ ಜಾತ್ರಾ ಮಹೋತ್ಸವ

ಅರೇಹಳ್ಳಿ: ಬೇಲೂರು ತಾಲೂಕಿನ ಅರೇಹಳ್ಳಿಯ ತೊಳಲು ರಸ್ತೆಯಲ್ಲಿರುವ ಶ್ರೀ ಸಂತೆ ಕಾಳಮ್ಮನವರ ದೇವಸ್ಥಾನದಲ್ಲಿ ದೊಡ್ಡಮ್ಮ ಹಾಗೂ ಚಿಕ್ಕಮ್ಮನವರ ೨೦ನೇ ವರ್ಷದ ಜಾತ್ರಾ ಮಹೋತ್ಸವವು ಎರಡು ದಿನಗಳ ಕಾಲ ಜರುಗಿತು.

ಈ ಸಂದರ್ಭದಲ್ಲಿ ಮುಖಂಡ ರಂಗಸ್ವಾಮಿ ಮಾತನಾಡಿ, ಪೂಜಾ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ವಾದ್ಯ ವೈಭವಗಳೊಂದಿಗೆ ಸಕಲೇಶಪುರ ರಸ್ತೆಯಲ್ಲಿರುವ ಮಠದ ಕಲ್ಯಾಣಿಯಿಂದ ಶ್ರೀ ಕಾಳಮ್ಮನವರಿಗೆ ಗಂಗಾಪೂಜೆ, ೧೦೮ ಕಳಸದೊಂದಿಗೆ ನಡೆಮುಡಿ ಉತ್ಸವ, ದೇವಾಲಯ ಪ್ರವೇಶ, ಪುಣ್ಯದೇವಿ ಪೂಜೆ, ಉಮಾ ಮಹೇಶ್ವರಿ ಕಳಸ, ಅಮ್ಮನವರಿಗೆ ಮಹಾರುದ್ರಾಭಿಷೇಕ, ಗಣ ಹೋಮ, ಚಂಡಿಕಾ ಹೋಮ, ಕುಂಕುಮಾರ್ಚನೆ, ಪೂರ್ಣಾಹುತಿ , ಮಹಾಮಂಗಳಾರತಿ ಬಳಿಕ ಅನ್ನ ಸಂತರ್ಪಣೆ ನಡೆಸಲಾಯಿತು.

ಜಾತ್ರೋತ್ಸವದ ಎರಡನೇ ದಿನ ಅಮ್ಮನವರಿಗೆ ಗಂಗಾಪೂಜೆ,ಪಂಚಾಭಿಷೇಕ,ಮಹಾ ಮಂಗಳಾರತಿ ನಂತರ ನೈವೇದ್ಯ ಸಮರ್ಪಣೆ ಮಾಡಲಾಗುವುದು ಎಂದು ಹೇಳಿದರು.

ಈ ವೇಳೆ ಗಾಣಿಗರ ಸಂಘದ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಪುಟ್ಟಸ್ವಾಮಿ, ಖಜಾಂಚಿ ಅನಿಲ್, ಉಪಾಧ್ಯಕ್ಷ ರಾಜೇಶ್, ಮುಖಂಡರಾದ ರಂಗಸ್ವಾಮಿ,ನಿಂಗಣ್ಣ, ಸಂಘದ ಪದಾಧಿಕಾರಿಗಳು, ಗಾಣಿಗ ಕುಲಬಾಂಧವರು ಹಾಗೂ ಸ್ಥಳೀಯ ಭಕ್ತಾಧಿಗಳು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *