ಸಕಲೇಶಪುರ : ಬೈ ಪಾಸ್ ರಸ್ತೆ ಸಂಪೂರ್ಣವಾಗಿ ಸಂಚಾರ ಮುಕ್ತ ಆಗಿಲ್ಲದಿದ್ದರೂ ಪ್ರತಿ ದಿನ ಸಾವಿರಾರು ವಾಹನಗಳು ಅತಿವೇಗವಾಗಿ ಚಲಿಸುತ್ತಿವೆ

ಬೈ ಪಾಸ್ ರಸ್ತೆಯ ಅಸುಪಾಸಿನಲ್ಲಿ ಬರುವ ಮಳಲಿ, ರಾಮೇನಹಳ್ಳಿ, ಕೌಡಳ್ಳಿ,, ಬಾಳೆಗದ್ದೆ, ಮಲ್ಲಿಕಾರ್ಜುನ ನಗರ, ಸದಾಶಿವ ಲೇ ಔಟ್ ಪ್ರೇಮನಗರದಲ್ಲಿನ ಸಾರ್ವಜನಿಕರು ತಮ್ಮ ಜೀವವನ್ನು ಕೈಲಿ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ಇದೆ.

ಏಕೆಂದರೆ ಸರ್ವಿಸ್ ರಸ್ತೆಯಾಗಲಿ ಅಂಡರ ಪಾಸ್ಗಳಾಗಲಿ, ಹಂಪ್ ಗಳಾಗಲಿ ಯಾವುದು ಇಲ್ಲಾ, ಇಲ್ಲಿ ಓಡಾಡುವ ಎಲ್ಲಾ ವಾಹನಗಳು 120 km ಕ್ಕಿಂತ ಹೆಚ್ಚು ವೇಗದಲ್ಲಿ ಚಲಿಸುತ್ತಿರುತ್ತಾರೆ.

ಹೀಗಾಗಿ ರಸ್ತೆ ಕ್ರಾಸ್ ಮಾಡುವುದು ತುಂಬಾ ಕಷ್ಟದ ಕೆಲಸವಾಗಿದ್ದು, ಕೌಡಹಳ್ಳಿಯ Jss ಕಾಲೇಜ್ ಗೆ ಪ್ರತಿ ದಿನ ನೂರಾರು ಮಕ್ಕಳು ಓಡಾಡಬೇಕು, ಹಾಗೆ ಶ್ರಾವಣ ದೋಷ ಮತ್ತು ವಿಕಾಲಾಂಗ ಮಕ್ಕಳ ಶಾಲೆ, ತಾಲ್ಲೂಕು ಉಪ ಕಾರಾಗೃಹ ಹಾಗೂ ಸರ್ಕಾರಿ ಮಾದ್ಯಾ ಮಿಕ ಶಾಲೆ ಇದ್ದು ಕ್ಷಣ ಕ್ಷಣ ಕ್ಕೂ ಬೈ ಪಾಸ್ ರಸ್ತೆ ದಾಟಿ ಓಡಾಡುವುದು ಅನಿವಾರ್ಯವಾಗಿದೆ

ರಸ್ತೆ ಕೆಲಸ ಸಂಪೂರ್ಣ ಮುಗಿಯದೆ ವಾಹನ ಓಡಾಟಕ್ಕೆ ಅವಕಾಶ ಕೊಟ್ಟಿರುವ ತಾಲ್ಲೂಕು ಆಡಳಿತ ಇದರ ಬಗ್ಗೆ ಗಮನ ಹರಿಸಿ ಮುಂದಿನ ದಿನಗಳಲ್ಲಿ ಆಗುವ ಅನಾಹುತ ತಪ್ಪಿಸಬೇಕು, ಇಲ್ಲದಿದ್ದರೆ ಈ ವ್ಯಾಪ್ತಿಯ ಎಲ್ಲಾ ನಾಗರಿಕರು ಸೇರಿ ರಸ್ತೆ ಬಂದು ಮಾಡುವುದು ಅನಿವಾರ್ಯ ಎಂದು ಮಾಜಿ TAPCMS ಅಧ್ಯಕ್ಷರಾದ ಲೋಹಿತ್ ಕೌಡಳ್ಳಿ ಎಚ್ಚರಿಕೆ ನೀಡಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *