
ಸಕಲೇಶಪುರ : ಮಲೆನಾಡು ಭಾಗದಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಮಳೆರಾಯ ಯಾವಾಗ ಮಳೆ ಸುರಿಸಿ ತಂಪೆರೆಯುತ್ತಾನೆ ಎಂದು ಜನ ಕಾಯುತ್ತಿದ್ದಾರೆ. ಇಂದು ಮಳೆಗಾಗಿ ಸಕಲೇಶಪುರದಲ್ಲಿ ಪವಿತ್ರ ಶುಕ್ರವಾರದಂದು ಕುಶಾಲನಗರ ಬಡಾವಣೆಯ ಈದ್ಗಾ ಮೈದಾನದಲ್ಲಿ ಸಾಮೂಹಿಕವಾಗಿ ಅಲ್ಲಾಹನಿಗೆ ಬೇಗ ಮಳೆಸುರಿಸುವಂತೆ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಮುಖಂಡರಾದ ಮಲ್ನಾಡ್ ಜಾಕೀರ್ ಮಾತನಾಡಿ ಮಳೆ ದೂರವಾಗಿ ಬರಗಾಲ ಬಂದತಹ ಸಂದರ್ಭದಲ್ಲಿ ಮಹಮ್ಮದ್ ಪೈಗಂಬರ್ ಅವರು ಈ ರೀತಿಯ ಬಯಲು ಪ್ರದೇಶದಲ್ಲಿ ದೇವರಲ್ಲಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದರು ಅವರು ಮಾಡುತ್ತಿದ್ದ ಪ್ರಾರ್ಥನೆಗೆ ಮಳೆ ಸುರಿದು ಭೂಮಿಯಲ್ಲಿ ವಾಸಿಸುವ ಪ್ರಾಣಿ ,ಪಕ್ಷಿಗಳು ,ಮರ ಗಿಡ ,ಹಾಗೂ ಮಾನವನು ಸೇರಿದಂತೆ ಸಕಲ ಜಲ ಚರಾಗಳು ಕೂಡ ನೆಮ್ಮದಿಯಿಂದ ಜೀವಿಸಲು ಅನುಕೂಲವಾಗುತ್ತಿತ್ತು ಅಲ್ಲಾಹನು ಹಾಕಿಕೊಟ್ಟ ಮಾರ್ಗದಂತೆ ನಾವೂ ಕೂಡ ಇಂದು ಈದ್ಗಾ ಮೈದಾನದಲ್ಲಿ ಮಳೆಗಾಗಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದು ದೇವರು ಆದಷ್ಟು ಬೇಗ ಮಳೆಯನ್ನು ಕರುಣಿಸಿ ಭೂಮಿಯನ್ನು ತಂಪುಗೊಳಿಸುವ ಮೂಲಕ ಎಲ್ಲಾ ಜೀವಿಗಳಿಗೂ ಬಿಸಿಲಿನ ದಾಹವನ್ನು ತೀರಿಸಲೆಂದು ಈ ಪ್ರಾರ್ಥನೆ ಮಾಡಲಾಗುತ್ತಿದೆ ಎಂದರು
ಈ ಸಂದರ್ಭದಲ್ಲಿ ಮುಸ್ಲಿಂ ಮುಖಂಡರಾದ ಎಸ್.ಎಸ್.ಅಸ್ಲಂ ಇತರರು ಇದ್ದರು.
