ಬೇಲೂರು : ಅಕ್ರಮವಾಗಿ ಶೇಕರಿಸಿಟ್ಟಿದ್ದ ಮರಳನ್ನು ವಶಪಡಿಸಿಕೊಂಡ ತಹಸೀಲ್ದಾರ್ ಎಂ ಮಮತಾ ತಾಲೂಕಿನ ಅರೇಹಳ್ಳಿ ಹೋಬಳಿಯ ಮದ್ವಾಪುರ ಹಾಗೂ ಮಾಲೂರು ಗ್ತಾಮದಲ್ಲಿ ಅಕ್ರಮವಾಗಿ ಶೇಕರಿಸಿದ್ದ ಸುಮಾರು ೮೦ ಟನ್ ಮರಳನ್ನು ತಹಸೀಲ್ದಾರ್ ಎಂ ಮಮತಾ ಹಾಗೂ ಭೂ ಗಣಿ ವಿಜ್ಞಾನ ಇಲಾಖೆಯ ವೆಂಕಟೇಶ್ ವಶಪಡಿಸಿಕೊಂಡರು.

ತಾಲೂಕಿನ ಅರೇಹಳ್ಳಿ ಹೋಬಳಿಯ ಮದ್ವಾಪುರ ಸರ್ವೆ ನಂಬರ್೨೯ ,೩೦ ಹಾಗೂ ಸರ್ವೆ ನಂಬರ್ ೬೨ ರಲ್ಲಿ ಯಗಚಿ ನದಿಯ ಹಿನ್ನೀರಿನಿಂದ ಅಕ್ರಮವಾಗಿ ಸುಮಾರು ೮೦ ಟನ್ ಅಷ್ಟು ಮರಳನ್ನು ಅಕ್ರಮವಾಗಿ ಶೇಖರಿಸಿಟ್ಟಿದ್ದ ಮರಳನ್ನು ಖಚಿತ ಮಾಹಿತಿ ಮೇರೆಗೆ ತಹಸೀಲ್ದಾರ್ ಎಂ ಮಮತಾ ಸ್ಥಳಕ್ಕೆ ಆಗಮಿಸಿ ಮರಳನ್ನು ವಶಪಡಿಸಿಕೊಂಡರು.

ಸುಮಾರು ಬೆಳಗಿನ ಜಾವ ೨ ಗಂಟೆಯವರೆಗೂ ಸ್ಥಳದಲ್ಲೆ ಮೊಕ್ಕಾಂ ಹೂಡಿ ವಶಪಡಿಸಿಕೊಂಡ ಮರಳನ್ನು ಪಿಡಬ್ಲ್ಯೂ ಇಲಾಖೆ ಸುಪರ್ದಿಗೆ ನೀಡಿದರು.

ಅಸಮಾಧಾನ ವ್ಯಕ್ತಪಡಿಸಿದ ಅಧಿಕಾರಿಗಳುಅಕ್ರಮ. ಮರಳು ದಂದೆಯಲ್ಲಿ ಭಾಗಿಯಾಗಿರುವವರು ಒತ್ತಡಕ್ಕೆ ಯಾರೂ ಸಹ ಇಲ್ಲಿಂದ ಮರಳನ್ಜು ಸಾಗಿಸಲು ಟಿಪ್ಪರ್ ಗಳಿಗೆ ಹಾಗೂ ಜೆಸಿಬಿಗಳಿಗೆ ಕಳುಹಿಸಿಕೊಡುತ್ತಿಲ್ಲ.ಇವರ ಮೇಲೆ ನಾವು ಮುಲಾಜಿಲ್ಲದೆ ನಮ್ಮ ಕೆಲಸಕ್ಕೆ ಅಡ್ಡಿಪಡಿಸಯವವರ ವಿತುದ್ಧ ಕ್ರಮ ಕೈಗೊಳ್ಳುತ್ತೇವೆ.

ಈ ಬಗ್ಗೆ ಬೇಲೂರು ಹಾಗೂ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸುತ್ತೇವೆ ಎಂದರು.

ನಂತರ ಬೆಳಗಿನ ಜಾವ ೨ ಗಂಟೆಯವರೆಗೂ ತಾವೇ ಖುದ್ದು ನಿಂತು ತಹಸೀಲ್ದಾರ್ ಎಂ ಮಮತಾ ಹಾಗೂ ಭೂಗಣಿ ಇಲಾಖೆಯ ವೆಂಕಟೇಶ್ ಸ್ಥಳದಲ್ಲೇ ಇದ್ದು ವಶಪಡಿಸಿಕೊಂಡ ಮರಳನ್ನು ಪಿಡಬ್ಲ್ಯೂ ಇಲಾಖೆಗೆ ರವಾನಿಸಿದರು.

ಈ ಸಂದರ್ಭದಲ್ಲಿ ಕಂದಾಯ ಇಲಾಖೆ ನಿರೀಕ್ಷಕರಾದ ಚಂದ್ರೇಗೌಡ ಹಾಗೂ ಗ್ರಾಮಸಹಾಯಕ ಗಿರೀಶ್ ಹಾಜರಿದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *