ಹಾಸನ: ಯಾರು ಹೆಚ್ಚು ವಿಷಯ ಗ್ರಹಿಸುವ ಗುಣ ಬೆಳೆಸಿಕೊಂಡಿರುತ್ತಾರೆ ಅವರು ಜನ ಮಧ್ಯೆ ನಿಂತು ಮಾತನಾಡುವ ಶಕ್ತಿ ಬೆಳೆಸಿಕೊಂಡು ಬಲಿಷ್ಠ ಪತ್ರಕರ್ತರಾಗುತ್ತಾರೆ ಎಂದು ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನದ ಮುಖ್ಯಸ್ಥರು ಹಾಗೂ ಮೈಸೂರು ಮಾನಸ ಗಂಗೋತ್ರಿ ಇ.ಎಂ.ಆರ್.ಸಿ. ನಿರ್ದೇಶಕರಾದ ಪ್ರೋ. ಎಂ.ಎಸ್. ಸಪ್ನ ಕಿವಿಮಾತು ಹೇಳಿದರು.

ನಗರದ ಆರ್.ಸಿ. ರಸ್ತೆ ಬಳಿ ಇರುವ ಸರಕಾರಿ ಕಲಾ ಕಾಲೇಜು ಸಭಾಂಗಣದಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಸರಕರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು ಸ್ವಾಯತ್ತ, ಪತ್ರಿಕೋಧ್ಯಮ ವಿಭಾಗ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಮಾಧ್ಯಮ ಲೋಕದ ಉದ್ಯೋಗಕ್ಕೆ ಪೂರ್ವಭಾವಿ ತಯಾರಿಗಳು ಹಾಗೂ ಸರಕಾರಿ ಉದ್ಯೋಗಕ್ಕೆ ಪೂರ್ವಭಾವಿ ಸಿದ್ಧತೆ ಕುರಿತು ಒಂದು ದಿನದ ಶೈಕ್ಷಣಿಕ ವಿಶೇಷ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪತ್ರಿಕೋಧ್ಯಮದ ಇತಿಹಾಸ ತಿಳಿಯುವುದು ಬಹಳ ಮುಖ್ಯ.

ಪ್ರಸ್ತುತದಲ್ಲಿ ಪ್ರತಿ ವಿಚಾರದಲ್ಲೂ ಸ್ಪರ್ದಾತ್ಮಕವಗಿ ತೆಗೆದುಕೊಳ್ಳಬೇಕು. ಪತ್ರಿಕೋಧ್ಯಮವನ್ನು ಹೇಗೆ ಉದ್ಯಮ ಮಾಡಿಕೊಳ್ಳಬೇಕು ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗಿದ್ದು, ನೀವು ಶಿಕ್ಷಣ ಪಡೆಯುವ ಪತ್ರಿಕೋಧ್ಯಮದಲ್ಲಿ ಪಡೆಯುವ ಅಂಕಗಳಿಂದ, ಮೆಡಲ್ ಗಳಿಂದ ಕೆಲಸ ತೆಗೆದುಕೊಳ್ಳುತ್ತದೆ ಎಂದು ಅಂದುಕೊಳ್ಳಬೇಡಿ. ಇದು ಪಾಠ ಮಾತ್ರ. ಅದೆ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ಬರಬೇಕಾಗಿರುವುದು ಉತ್ತಮ ಬರವಣಿಗೆಗಳು. ಕನ್ನಡ, ಇಂಗ್ಲೀಷ್ ಭಾಷೆ ಬಗ್ಗೆಯೂ ಜ್ಞಾನ ಇದ್ದು, ಚನ್ನಾಗಿ ಬರವಣಿಗೆ ಬರಬೇಕಾದರೇ ಆಸಕ್ತಿಯಿಂದ ಓದಬೇಕು ಎಂದರು.

ಪ್ರಸ್ತುತದಲ್ಲಿ ಮಕ್ಕಳು ಓದುವುದನ್ನು ಕಡಿಮೆ ಮಾಡಿಬಿಟ್ಟಿದ್ದಾರೆ. ಹೆಚ್ಚಾಗಿ ಮೊಬೈಲ್ ಹಿಡಿದು ಇನ್ಸ್ಟ್ರಾ ಗ್ರಾಂ, ವಾಟ್ಸಾಪ್ ಇತರೆಗಳ ಕಡೆ ಗಮನ ಹರಿಸಿದ್ದಾರೆ. ಹೆಚ್ಚು ಓದಿದಷ್ಟು ನಮ್ಮ ಜ್ಞಾನ ಹೆಚ್ಚುತ್ತದೆ ಎಂದು ಕಿವಿಮಾತು ಹೇಳಿದರು. ವಿಷಯವನ್ನು ಯಾರು ಹೆಚ್ಚು ಗ್ರಹಿಸುತ್ತಾರೆ ಅವರು ಹೆಚ್ಚು ಬಲಿಷ್ಠರಾಗುತ್ತೀರಾ! ವಿಷಯಗಳು ತಲೆಯಲ್ಲಿ ಇದ್ದಾಗ ಮಾತ್ರ ಜನರ ಮಧ್ಯೆ ಮಾತನಾಡುವುದಕ್ಕೆ ಸಾಧ್ಯ ಎಂದು ಸಲಹೆ ನೀಡಿದರು.

ಸರಕಾರಿ ಕಲಾ, ವಾಣಿಜ್ಯ ಕಾಲೇಜು ಮತ್ತು ಸ್ನಾತಕೋತ್ತರ ಕಾಲೇಜು ಪ್ರಾಂಶುಪಾಲ ಡಾ. ಎಂ.ಬಿ. ಇರ್ಷಾದ್ ಅವರು ಅಧ್ಯಕ್ಷತೆ ನುಡಿಯಲ್ಲಿ ಮಾತನಾಡಿ, ೧೯ನೇ ಶತಮಾನದಲ್ಲಿ ಸಮಾಜ ಸುಧಾರಣೆ ಆಗಿದ್ದು, ಇದಕ್ಕೆ ಕಾರಣವಾದದು ಯಾವುದು ಎಂದು ಹೇಳುವುದಾದರೇ ಪತ್ರಿಕೋಧ್ಯಮ.

ಈ ಪತ್ರಿಕೋಧ್ಯಮವೇ ಈ ಸಮಾಜದಲ್ಲಿ ಇಲ್ಲದೇ ಇದ್ದರೇ ಸಮಾಜದಲ್ಲಿ ಎಂತಹ ಘೋರ ಆಘಾತವಾದಂತಹ ವಿಚಿತ್ರಗಳು ನಡೆದು ಒಂದು ಕ್ರಾಂತಿಗೆ ಕಾರಣವಾಗುತಿತ್ತು ಎಂದರು.

ಜಾಗೃತಿಕ ಪ್ರಪಂಚದಲ್ಲಿ ಅನ್ವಯವಾಗುವಂತೆ ಕಡ್ಗಕ್ಕಿಂತ ಲೇಖನಿ. ರಾಜ್ಯಗಳ ಗೆಲ್ಲಲು ಇಂದು ಖಡ್ಗ ಬೇಕಾಗಿಲ್ಲ. ಒಂದು ಸಮಾಜದ ಪರಿವರ್ತನೆಗೆ ಒಂದು ಲೇಖನಿ ಸಾಕು. ರಾಷ್ಟ್ರಗಳನ್ನು ನಿಲುವು, ಅಧ್ಯಕ್ಷರ, ರಾಜಕೀಯ ಚಿತ್ರಣಗಳನ್ನೆ ಬದಲಾಯಿಸಿರುವಂತಹ ಕೆಲಸ ಈ ಪತ್ರಿಕೋಧ್ಯಮದಲ್ಲಿ ಆಗಿದೆ ಎಂದು ಕಿವಿಮಾತು ಹೇಳಿದರು.

ಪತ್ರಕರ್ತರು ಪ್ರತಿನಿತ್ಯ ಒಂದು ಸವಾಲಿನಿಂದಲೇ ಬರುತ್ತಾರೆ. ಯಾವ ರೀತಿ ಸಮಾಜವನ್ನು ಒಳ್ಳೆಯ ರೀತಿ ಕೊಂಡೂಯ್ಯಬೇಕು ಎನ್ನುವ ದೃಢ ಸಂಕಲ್ಪದೊಂದಿಗೆ ಪತ್ರಕರ್ತ ಮಿತ್ರರು ಶ್ರಮಿಸುತ್ತಿದ್ದಾರೆ. ಬೇಕಾದಷ್ಟು ಟೀಕೆ ಟಿಪ್ಪಣಿಯೊಂದಿಗೆ ಪತ್ರಕರ್ತರು ದಿಟ್ಟ ಮನಸ್ಸಿನಿಂದ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ಯೂರೋಪಿನಲ್ಲಿ ಲೇಖನಿಯಿಂದಲೇ ಒಂದು ಕ್ರಾಂತಿಯೇ ಆಗಿದೆ. ಸ್ವತಂತ್ರ ನಂತರ ಭಾರತ ದೇಶದಲ್ಲಿ ಹಲವಾರು ಬದಲಾವಣೆಗಳಾದವು. ಸ್ವಾತಂತ್ರ ಪೂರ್ವದಲ್ಲಿ ಆದ ಬದಲಾವಣೆಗಳು ಆಗಲು ಈ ಪತ್ರಿಕೋಧ್ಯಮದ ಇತಿಹಾಸ ಒಂದು ಜ್ವಲಂತ ಸಾಕ್ಷಿ. ಪತ್ರಿಕೋಧ್ಯಮ ಇಲ್ಲದೇ ಈ ದೇಶದ ಸ್ವತಂತ್ರ ಚಳುವಳಿ ಮುನೇಡಸಲು ಸಾಧ್ಯವಾಗುತ್ತಿರಲಿಲ್ಲ. ದೇಶದ ಮೂಲೆ ಮೂಲೆಗೆ ಸಂದೇಶ ರವಾನೆ ಮಾಡಿರುವುದು ಈ ಪತ್ರಿಗಳು ಎಂದು ಇದೆ ವೇಳೆ ಜರ್ನಲಿಸಂ ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾರ್ಯಕ್ರಮಲ್ಲಿ ಪತ್ರಿಕೋಧ್ಯಮ ವಿಭಾಗದ ಉಪನ್ಯಾಸಕರಾದ ಎ.ವಿ. ರಶ್ಮಿ, ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯಕ್ತರಾದ ಎಂ.ಬಿ. ಚನ್ನಕೇಶವ, ಪತ್ರಾಂಕಿತ ವ್ಯವಸ್ಥಾಪಕಾದ ಕೆ.ಟಿ. ಸತ್ಯಮೂರ್ತಿ, ಪರೀಕ್ಷಾ ನಿಯಂತ್ರಕರು ಕೆ.ಡಿ. ಮುರುಳೀಧರ್, ಉಪನ್ಯಾಸಕರಾದ ಹೆಚ್.ಸಿ. ಭವ್ಯ, ಕೆ.ಎ. ಶೃತಿ ಇತರರು ಭಾಗವಹಿಸಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *