
ಹಾಸನ : ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಎರಡು ವರ್ಷಗಳ ಕಾಲ ಜಿಲ್ಲಾದ್ಯಕ್ಷರಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಬಾಳ್ಳುಗೋಪಾಲ್ ಅವರು ತಮ್ಮ ಸ್ಥಾನಕ್ಕೆ ಇಂದು ರಾಜಿನಾಮೆ ನೀಡುವ ಮೂಲಕ ನುಡಿದಂತೆ ನಡೆದುಕೊಂಡು ಸಂಘಕ್ಕೆ ಗೌರವ ನೀಡುವ ರೀತಿಯಲ್ಲಿ ನಡೆದುಕೊಂಡರು ಎಂದು ಹಿರಿಯ ಪತ್ರಕರ್ತರಾದ ಹೆಚ್.ಬಿ.ಮದನ್ ಗೌಡ ,ಕೆ.ಆರ್.ಮಂಜುನಾಥ್ ,ರವಿನಾಕಲಗೋಡು ,ಉದಯ್ ಅವರು ಅಭಿನಂದನೆ ಸಲ್ಲಿಸಿದರು.
ಮುಂದಿನ ಒಂದು ವರ್ಷದ ಅವದಿಗೆ ಸಂಘಕ್ಕೆ ಸತ್ಯದ ಹೊನಲು ಪತ್ರಿಕೆಯ ಸಂಪಾದಕರಾದ ಕೆ.ಹೆಚ್.ವೇಣುಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು.
