
ಬೇಲೂರು : ಅರೇಹಳ್ಳಿ ಹೋಬಳಿ, ಚಿಕ್ಕಸಾಲಾವರ ಗ್ರಾಮದ ರೈತ ಮಹೇಶ S K s/o ಕೃಷ್ಣಪ್ಪ ಮೃತ ದುರ್ದೈವಿ, ಇವರ ಗ್ರಾಮದಲ್ಲಿ ಸತತವಾಗಿ 5 ದಿನಗಳಿಂದ ಬೀಡುಬಿಟ್ಟಿರುವ ಕಾಡನೇಗಳು ರೈತರು ಬೆಳೆದಿದ್ದ ಶುಂಠಿ, ಬಾಳೆ, ಜೋಳ, ಕಾಪಿ, ಬೆಳೆಗಳಿಗೆ ಹಾನಿಮಾಡಿದ್ದೂ, ಕೃಷಿ ಉಪಕರಣಗಳಾದ ಸ್ಪ್ರಿಂಕಿಲರ್ ಪೈಪ್ಗಳು, ಜೈಟ್ ಗಳನ್ನು ಮುರಿದು ಹಾಕಿದ್ದು ಅಪಾರ ಹಾನಿ ಉಂಟು ಮಾಡಿದ್ದು ಇದರಿಂದ ಮನನೊಂದ ರೈತ ಮಹೇಶ S K ವಿಷ ಸೇವಿಸಿ ಆತ್ಮ ಹತ್ಯೆಗೆ ಶರಣಾಗಿದ್ದಾರೆ.
ಈ ಘಟನೆ ನಡೆದಿದ್ದರೂ ಅರಣ್ಯ ಇಲಾಖೆಯವರು ಯಾವುದೇ ಕ್ರಮ ಕೈಕೊಂಡಿಲ್ಲ ಇದೆ ರೀತಿ ಮುಂದುವರೆದರೆ ಇನ್ನೆಷ್ಟು ಬಡ ರೈತರು ಇದೆ ರೀತಿ ಆತ್ಮ ಹತ್ಯೆಗೆ ಶರಣಾಗುತ್ತಾರೋ ಗೊತ್ತಿಲ್ಲ, ಇನ್ನು ಸಹ ಕಾಡಾನೆಗಳು ಇಲ್ಲೇ ಬೀಡುಬಿಟ್ಟಿದ್ದು ಅರಣ್ಯ ಇಲಾಖೆಯವರು ಇದರ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈಕೊಂಡಿಲ್ಲ ಇದು ಸುತ್ತಮುತ್ತಲ್ಲ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದ್ದು, ಜಮೀನಿನಲ್ಲಿ ಯಾವುದೇ ಕೆಲಸ ಮಾಡಲು ರೈತರು ಹಿಂದೇಟು ಹಾಕುತ್ತಿದರೆ.
ದಯವಿಟ್ಟು ಆತ್ಮಹತ್ಯೆಗೆ ಶರಣಾದ ಬಡ ರೈತನ ಕುಟುಂಬಕ್ಕೆ ಸರ್ಕಾರ ಅಭಯ ಹಸ್ತ ನೀಡಬೇಕು ಹಾಗೂ ಕಾಡನೇಗಳನ್ನು ದಯವಿಟ್ಟು ಸ್ಥಲಾಂತರೀಸಬೇಕು ಮುಂದಿನ ದಿನಗಳಲ್ಲಿ ಇದೆ ರೀತಿ ಮುಂದುವರೆದರೆ ರೈತರು ಜಿಲ್ಲಾಧಿಕಾರಿ ಕಚೇರಿಯ ಮುಂದೆ ಧರಣಿ ಕೂರಲಾಗುವುದು ಎಂದು ಎಚ್ಚರಿಗೆ ನೀಡಿದ್ದಾರೆ
ಅದ್ದೂರಿ ಕುಮಾರ್ ಅಧ್ಯಕ್ಷರು ಕೌರಿ ಸಂಜಯ್ ಕಾರ್ಯದರ್ಶಿ ಮತ್ತು ಪದಾಧಿಕಾರಿಗಳು ಕಾಫಿ ಬೆಳೆಗಾರರ ಸಂಘ ಬೇಲೂರು ತಾಲೂಕು
