
ಬೇಲೂರು : ಪಟ್ಟಣದಲ್ಲಿ ಶುಕ್ರವಾರ ಮದ್ಯಾಹ್ನ ಬಂದ ಬಾರಿ ಮಳೆಗೆ ಗುಣಿಕೆರೆ ಬೀದಿಯ ಒಂದನೇ ಅಡ್ಡರಸ್ತೆಯಲ್ಲಿ ಕೇಶವಮೂರ್ತಿ ಎಂಬುವವರು ವಾಸವಾಗಿದ್ದ ಮನೆಯ ಮೇಲೆ ಬೃಹದಾಕಾರದ ಮರವೊಂದು ಅವರ ಮನೆ ಮೇಲೆ ಬಿದ್ದು ಸಂಪೂರ್ಣ ಜಖಂಗೊಂಡಿದೆ.
ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯವಾಗಿಲ್ಲ, ಮಧ್ಯಾಹ್ನ 3:30 ರಿಂದ ಸುರಿದ ಬಾರಿ ಬಿರುಗಾಳಿ ಮಳೆಗೆ ಕೇಶವ್ ಮೂರ್ತಿ ಎಂಬುವರ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಯ ಮೇಲೆ ಬಿದ್ದ ಪರಿಣಾಮವಾಗಿ ಸಂಪೂರ್ಣ ಮನೆ ವಸ್ತುಗಳೆಲ್ಲ ಚೆಲ್ಲಾಪಿಳೆಯಾಗಿದೆ ಅಲ್ಲದೆ ಸೋಲಾರ್ ಟಿವಿ ಫ್ರಿಡ್ಜ್ ಸೇರಿದಂತೆ ಮನೆಯ ಗೃಹಪಯೋಗಿ ವಸ್ತುಗಳೆಲ್ಲ ಮಳೆಯ ನೀರಿನಿಂದ ತೊಳೆದು ಹೋಗಿದೆ
ಸ್ಥಳಕ್ಕೆ ಬೇಲೂರು ಪುರಸಭೆಯ ಆರೋಗ್ಯ ಅಧಿಕಾರಿ ಲೋಹಿತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು


