ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘವು ಬೆಳೆಗಾರರಿಗೆ ಕೃಷಿ ಮಾಹಿತಿಗಳನ್ನು ಒದಗಿಸುವ ನಿಟ್ಟಿನಲ್ಲಿ ಈ ಹಿಂದಿನಿಂದಲೂ ವಿಚಾರ ಸಂಕೀರಣಗಳನ್ನು ಆಯೋಜಿಸುತ್ತಾ ಬಂದಿದ್ದು ಪ್ರಸ್ತುತ ಕಾರ್ಯಕಾರಿ ಮಂಡಳಿಯು ಸಹ ಇದೇ ನಿಟ್ಟಿನಲ್ಲಿ ಮುಂದುವರೆಯುತ್ತಾ ಮಾರ್ಚ್ ತಿಂಗಳಿನಲ್ಲಿ ಸಕಲೇಶಪುರದ ಕಾಫಿ ಮಂಡಳಿಯಲ್ಲಿ ವಿಚಾರ ಸಂಕೀರಣವನ್ನು ಆಯೋಜಿಸಿತ್ತು.

ಈ ಯಶಸ್ವಿ ಕಾರ್ಯಕ್ರಮದ ನಂತರ ಇದೀಗ ಅಂದರೆ ದಿನಾಂಕ 25.05.2024ರ ಶನಿವಾರದಂದು ಬೇಲೂರು ತಾಲೂಕು ಗೆಂಡೆಹಳ್ಳಿಯ ಕಾಫಿ ಬೆಳೆಗಾರರಾದ ಹಾಗೂ ಕಾಫಿ ಮಂಡಳಿಯ ಸದಸ್ಯರಾದ ಜಿ.ಕೆ ಕುಮಾರ್ ರವರ ತೋಟದಲ್ಲಿ ಕಾಫಿ ಮತ್ತು ಕಾಳು ಮೆಣಸು ಬೆಳೆಗೆ ರಸಗೊಬ್ಬರ ಪೂರೈಕೆ ಮತ್ತು ಪೋಲಿಯಾರ್ ಸ್ಪ್ರೇ ಕುರಿತು ಕಾರ್ಯಗಾರವನ್ನು ಹಮ್ಮಿಕೊಂಡಿದ್ದು. ಈ ತಾಂತ್ರಿಕ ಕಾರ್ಯಕ್ರಮವು ಬಹಳ ಅಚ್ಚುಕಟ್ಟಾಗಿ ನಡೆದು ಬೆಳಗಾರರಿಗೆ ಸಾಕಷ್ಟು ಉಪಯುಕ್ತ ಮಾಹಿತಿಗಳನ್ನು ದೊರಕಿಸಿಕೊಡಲಾಯಿತು.

ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಅಧ್ಯಕ್ಷರಾದ ಎ ಎಸ್ ಪರಮೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಗಾರದಲ್ಲಿ ಕಾಫಿ ಮಂಡಳಿಯ ಅಧ್ಯಕ್ಷರಾದ ಎಂ. ಜೆ ದಿನೇಶ್ ರವರು, ಕರ್ನಾಟಕ ಬೆಳಗಾರರ ಒಕ್ಕೂಟದ ಅಧ್ಯಕ್ಷರಾದ ಡಾ. ಹೆಚ್ ಟಿ ಮೋಹನ್ ಕುಮಾರ್ ರವರು,ಹೆಚ್ ಡಿ ಪಿ ಎ ವಿಚಾರ ಸಂಕಿರಣ ಸಮಿತಿಯ ಅಧ್ಯಕ್ಷರಾದ ಹಾಗೂ ಹಿರಿಯ ಕಾಫಿ ಬೆಳೆಗಾರರಾದ ಬಿ ಎಂ ಮೋಹನ್ ಕುಮಾರ್ ರವರು, ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆಯ ವಿಭಾಗಿಯ ಮುಖ್ಯಸ್ಥರಾದ ಡಾ. ಶಿವಪ್ರಸಾದ್ ರವರು, ಪ್ರಗತಿಪರ ಯುವ ಬೆಳಗಾರರಾದ ಕರಣ್ ಗೌತಳ್ಳಿ ಯವರು, ಹೆಚ್‍ಡಿಪಿಎ ಗೌರವ ಕಾರ್ಯದರ್ಶಿಗಳಾದ ಕೆ ಬಿ ಲೋಹಿತ್ ರವರು, ಕಾಫಿ ಮಂಡಳಿ ಸದಸ್ಯರಾದ ಜಿ.ಕೆ ಕುಮಾರ್ ರವರು ಬೇಲೂರು ತಾಲೂಕು ಕಾಫಿ ಬೆಳೆಗಾರ ಸಂಘದ ಅಧ್ಯಕ್ಷರಾದ ಅದ್ದೂರಿ ಎಂ ಕುಮಾರ್ ರವರು, ಸಕಲೇಶಪುರದ ಕಾಫಿ ಮಂಡಳಿಯ ಹಿರಿಯ ಸಂಪರ್ಕ ಅಧಿಕಾರಿಗಳಾದ ಶ್ರೀ ಬಸವರಾಜ್ ರವರು, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾಫಿ ಗಿಡಗಳಿಗೆ ಗೊಬ್ಬರ ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಗೊಳಿಸಲಾಯಿತು. ಎಂ.ಜೆ ದಿನೇಶ್‍ರವರು ಕಾಫಿ ಮಂಡಳಿಯ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿಸಿಕೊಟ್ಟರು.

ಡಾ. ಹೆಚ್. ಟಿ ಮೋಹನ್ ಕುಮಾರ್ ರವರು ಮಾತನಾಡಿ ಇಂತಹ ಕಾರ್ಯಕ್ರಮಗಳು ಬೆಳೆಗಾರರಿಗೆ ತುಂಬಾ ಉಪಯುಕ್ತವಾಗಲಿವೆ ಎಂದು ತಿಳಿಸುವುದರ ಜೊತೆಗೆ ವಿಯೆಟ್ನಾಮ್ ಕೃಷಿ ಪ್ರವಾಸದ ಅನುಭವಗಳನ್ನು ಹಂಚಿಕೊಂಡರು.

ಸಂಪನ್ಮೂಲ ವ್ಯಕ್ತಿಗಳಾದ ಬಿ ಎಂ ಮೋಹನ್ ಕುಮಾರ್ ರವರು ಗೊಬ್ಬರ ನಿರ್ವಹಣೆಯ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ಒದಗಿಸಿ ಕೊಟ್ಟರು.

ವಿಜ್ಞಾನಿಗಳಾದ ಶಿವಪ್ರಸಾದ್ ರವರು ಮಣ್ಣು ಪರೀಕ್ಷೆ,ಗೊಬ್ಬರ ನಿರ್ವಹಣೆಯ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿಕೊಟ್ಟರು. ಕರಣ್ ಗೌತಳ್ಳಿ ಯವರು ಪೋಲಿಯಾರ್ ಸ್ಪ್ರೇ ನಿರ್ವಹಣೆಯ ಬಗ್ಗೆ ಮಾಹಿತಿ ಒದಗಿಸಿ ಕೊಟ್ಟರು.

ಕಾರ್ಯಗಾರವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದ ಶ್ರೀ ಜಿ.ಕೆ ಕುಮಾರ್ ದಂಪತಿಗಳಿಗೆ ಗೌರವ ಅಭಿನಂದನೆ ಸಲ್ಲಿಸಲಾಯಿತು. ಸುಮಾರು 150 ಬೆಳೆಗಾರರು ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದರು.

ಹೆಚ್‍ಡಿಪಿಎ ಟ್ರಸ್ಟ್ ನ ಅಧ್ಯಕ್ಷರಾದ ತೊ.ಚ ಅನಂತ ಸುಬ್ಬರಾಯ ರವರು, ಹೆಚ್ ಡಿ ಪಿ ಎ ಉಪಾಧ್ಯಕ್ಷರಾದ ಮಂಜುನಾಥ ಶೆಟ್ಟಿ ರವರು ಹಾಗೂ ಖಜಾಂಚಿಗಳಾದ ಎಂ ಜೆ ಸಚಿನ್ ರವರು ಹೆಚ್ ಡಿ ಪಿ ಎ ಪ್ಲಾಂಟೇಶನ್ ರಿಸರ್ಚ್ ಫೌಂಡೇಶನ್ ಅಧ್ಯಕ್ಷರಾದ ಕೃಷ್ಣಮೂರ್ತಿ ಖಂಡಿಗೆ ರವರು, ಹೆಚ್ ಡಿ ಪಿ ಎ ಬ್ಯಾಂಕಿಂಗ್ ಸಮಿತಿಯ ಅಧ್ಯಕ್ಷರಾದ ಶ್ರೀ ವೈ ಎಸ್ ಗಿರೀಶ್ ರವರು, ಹೆಚ್ ಡಿಪಿಎ ಐ.ಪಿ ಸೆಟ್ ಬಳಕೆದಾರರ ಸಂಘದ ಅಧ್ಯಕ್ಷರಾದ ಬಿ.ಎಸ್ ಕುಮಾರ್ ರವರು ಉಪಸ್ಥಿತರಿದ್ದರು.

ಬೇಲೂರು ತಾಲೂಕು ಬೆಳಗಾರರ ಸಂಘದ ಪದಾಧಿಕಾರಿಗಳು ಹಾಗೂ ಗೆಂಡೆಹಳ್ಳಿ ಪಂಚಾಯಿತಿ ಬೆಳಗಾರರ ಸಂಘದ ಅಧ್ಯಕ್ಷರು ಗೌರವ ಕಾರ್ಯದರ್ಶಿಗಳು ಪದಾಧಿಕಾರಿಗಳು ಮತ್ತು ಬೇಲೂರು ಭಾಗದ ಹೆಚ್ ಡಿ ಪಿ ಎ ನಿರ್ದೇಶಕರುಗಳು ಹೆಚ್ಚಿನ ಮುತುವರ್ಜಿ ವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡಲು ಸಹಕರಿಸಿದರು.

ಇವರೆಲ್ಲರಿಗೂ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘವು ಆಭಾರಿಯಾಗಿರುತ್ತದೆ. ಹಾಗೆಯೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲಾ ತಾಲೂಕು, ಹೋಬಳಿ, ಗ್ರಾಮ ಪಂಚಾಯಿತಿ ಬೆಳಗಾರ ಸಂಘದ ಅಧ್ಯಕ್ಷರು ಗೌರವ ಕಾರ್ಯದರ್ಶಿಗಳು ಪದಾಧಿಕಾರಿಗಳು ಮತ್ತು ನಿರ್ದೇಶಕರುಗಳಿಗೆ ಮತ್ತು ನೆರೆದ ಎಲ್ಲಾ ಬೆಳೆಗಾರರಿಗೂ ಈ ಮೂಲಕ ಧನ್ಯವಾದಗಳನ್ನು ಸಲ್ಲಿಸುತ್ತೇವೆ. ಜೊತೆಗೆ ಜಿ.ಕೆ ಕುಮಾರ್ ಮತ್ತು ಕುಟುಂಬದವರಿಗೂ ಸಹ ಈ ಮೂಲಕ ಧನ್ಯವಾದಗಳು ಸಲ್ಲಿಸುತ್ತೇವೆ.

ವಂದನೆಗಳು ಎ.ಎಸ್ ಪರಮೇಶ್ ಅಧ್ಯಕ್ಷರು ಕೆ ಬಿ ಲೋಹಿತ್, ಗೌರವ ಕಾರ್ಯದರ್ಶಿ,ಪದಾಧಿಕಾರಿಗಳು ನಿರ್ದೇಶಕರು, ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *