ಹಾಸನ: ನಗರದ ಶ್ರೀ ಕ್ಷೇತ್ರ ಕಾಳಿಕಾಂಬಾ ಕಮಟೇಶ್ವರ ದೇವಾಲಯದಲ್ಲಿ ಶ್ರೀ ಜಿ ವೇದಿಕ್, ಶ್ರೀ ಗಾಯತ್ರಿ ದೇವಿ ಜ್ಯೋತಿಷ್ಯ ಮತ್ತು ಪುರೋಹಿತ ಮಂದಿರದ ವತಿಯಿಂದ ಮಕ್ಕಳಿಗೆ ಎರಡು ದಿನದ ಸಂಸ್ಕಾರಬಾಲ ಭೋದೆ ಶಿಬಿರ ತರಗತಿ ಪ್ರಾರಂಭವಾಯಿತು.

ಮಕ್ಕಳ ಕಾರ್ಯಕ್ರಮವಾದುದರಿಂದ ಈ ಕಾರ್ಯಕ್ರಮವನ್ನು ಪುಟಾಣಿ ಮಕ್ಕಳಿಂದಲೇ ಉದ್ಘಾಟನೆಯನ್ನು ಮಾಡಲಾಯಿತು.

ಸಂಜೆ ೪ ಗಂಟೆಯಿಂದ ೬ ಗಂಟೆಯವರೆಗೆ ಉಚಿತವಾಗಿ ಸಂಸ್ಕಾರ ಬಾಲ ಬೋಧೆ ತರಗತಿಗಳು ಎರಡು ದಿನಗಳ ಕಾಲ ನಡೆಯಲಿದ್ದು, ಆರು ವರ್ಷ ಮೇಲ್ಪಟ್ಟ ಎಲ್ಲ ಮಕ್ಕಳು ಈ ತರಗತಿಯಲ್ಲಿದ್ದು, ಈ ಕಾರ್ಯಗಾರದಲ್ಲಿ ಮಕ್ಕಳಿಗೆ ಪ್ರತಿದಿನ ನಾವು ಮಾಡುವ ಕೆಲಸಗಳು ಒಟ್ಟಿಗೆ ಶ್ಲೋಕಗಳನ್ನು ಹೇಗೆ ಜೋಡಿಸಿಕೊಳ್ಳಬಹುದು ಸಂಸ್ಕಾರ ಯುತ ಜೀವನಕ್ಕೆ ಅಗತ್ಯವಾಗಿರುವ ಶ್ಲೋಕಗಳನ್ನು ಹಾಗೂ ಆದಿತ್ಯ ಹೃದಯವನ್ನು ಹೇಳಿಕೊಡಲಾಗುವುದು.

ಈ ಕಾರ್ಯಕ್ರಮದಲ್ಲಿ ಮಕ್ಕಳು ಉತ್ಸಹದಿಂದ ಪಾಲ್ಗೊಂಡು ಈ ಶಿಬಿರದ ಪ್ರಯೋಜನ ಪಡೆಯುತ್ತಿದ್ದಾರೆ. ಕಾರ್ಯಗಾರದ ನಂತರ ಮಕ್ಕಳಿಗೆ ಪ್ರಶಂಸ ಪತ್ರ ನೀಡಲಾಗುವುದು ಎಂದು ಸಂಸ್ಥೆಯ ಮುಖ್ಯಸ್ಥರಾದ ಪ್ರದೀಪ ಶರ್ಮ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಶ್ರೀ ಜಿ ವೇದಿಕ್ ಸಂಸ್ಥೆಯ ಮುಖ್ಯಸ್ಥರಾದ ಪ್ರದೀಪ ಶರ್ಮ, ಕಲ್ಲೇಶಾಚಾರ್ಯ ಹಾಗೂ ದೇವಾಲಯದ ಕಾರ್ಯದರ್ಶಿಗಳಾದ ಕೇಶವ್ ಪ್ರಸಾದ್, ದೇವಾಲಯದ ಬ್ರಹ್ಮಾನಂದ, ಮೋಹನ್, ಕಲಾವತಿ ಮೊದಲಾದವರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *