ಸಕಲೇಶಪುರ : ಪ್ರತಿನಿತ್ಯ ಪಟ್ಟಣ ವ್ಯಾಪ್ತಿಯಲ್ಲಿ ಹೇಮಾವತಿ ಒಡಲನ್ನು ಬಗೆದು ಅಕ್ರಮವಾಗಿ ಮರಳು ಸಾಗಿಸುವ ದಂದೆಕೋರರ ಸಂಖ್ಯೆ ಹೆಚ್ಚಾಗಿದ್ದು ಇದಕ್ಕೆ ಕಡಿವಾಣ ಹಾಕಬೇಕಾದ ಪೊಲೀಸರು ಅಕ್ರಮ ಮರಳು ದಂದೆಕೋರರಿಗೆ ಸಹಾಕಾರ ನೀಡುತ್ತಿರುವುದು ಗುಟ್ಟಾಗಿಯೇನು ಉಳಿದಿಲ್ಲ .

ಇಂದು ಬೆಳಗ್ಗೆ ಅಕ್ರಮವಾಗಿ ಮರಳು ಸಾಗಿಸುವ ಇಬ್ಬರ ನಡುವೆ ಗಲಾಟೆ ನಡೆದಿದ್ದು ಮಚ್ಚು ದೊಣ್ಣೆಗಳು ಹೊರಬಂದಿದ್ದು ಹಲವು ವರ್ಷಗಳ ಹಿಂದೆ ಹೆನ್ನಲಿಯಲ್ಲಿ ನಡೆದ ನಿಡಿಗೆರೆಯ ಅಜಯ್ ಕೊಲೆಯ ರೀತಿಯಲ್ಲಿಯೇ ಮತ್ತೊಂದು ಕೊಲೆ ನಡೆಯುವ ರೀತಿಯಲ್ಲಿಯೇ ಅಕ್ರಮ ಮರಳು ದಂದೆಕೋರರ ನಡುವೆ ಗಲಾಟೆ ನಡೆದಿದ್ದು ಕೂದಲೆಳೆಯ ಅಂತರದಲ್ಲಿ ಮತ್ತೊಬ್ಬ ಅಕ್ರಮ ಮರಳು ಸಾಗಿಸುವ ವ್ಯಕ್ತಿಗೆ ಕೈಗೆ ಗಾಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಹೇಳಲಾಗಿದೆ.

*ಸಾರ್ವಜನಿಕರ ಆಕ್ರೋಶ* :ತಾಲೂಕಿನಾದ್ಯಾಂತ ಹಾಗೂ ಪಟ್ಟಣ ವ್ಯಾಪ್ತಿಯಲ್ಲಿ ಎಗ್ಗಿಲ್ಲದೆ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು ಇದನ್ನು ತಡೆಯುವಲ್ಲಿ ತಾಲೂಕು ಆಡಳಿತ ವಿಫಲವಾಗಿದ್ದು ಪರೋಕ್ಷವಾಗಿ ಪೊಲೀಸರು ಅಕ್ರಮ ಮರಳು ದಂದೆಕೋರರಿಗೆ ಸಹಾಕಾರ ನೀಡುತ್ತಿರುವ ಹಿನ್ನಲೆಯಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದು ಕೂಡಲೇ ಪಟ್ಟಣದ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕದಿದ್ದರೆ ಇಲಾಖೆಯ ವಿರುದ್ದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *