
ಹಾಸನ: ಕಳೆದ ಎರಡು ದಿನಗಳ ಹಿಂದೆ ರಸ್ತೆ ಮಧ್ಯೆ ಲಾಂಗ್ ಮತ್ತು ಮಚ್ಚಿನಿಂದ ರೌಡಿ ಶೀಟರ್ ಚೈಲ್ಡ್ ರವಿಯನ್ನು ಬರ್ಬರ ಹತ್ಯೆ ಮಾಡಿ ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿಯಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ನೀರು ತರಲೆಂದು ಖಾಲಿ ಕ್ಯಾನನ್ನು ತನ್ನ ವಾಹನದಲ್ಲಿ ಇಟ್ಟುಕೊಂಡು ಹೋಗುತ್ತಿದ್ದಾಗ ಹೇಮಾವತಿ ನಗರದ ೩ನೇ ಮುಖ್ಯ ರಸ್ತೆ, ೯ನೇ ಕ್ರಾಸ್ ಹತ್ತಿರ ನಾಲ್ವರು ಕಾರಿನಲ್ಲಿ ಬಂದು ಬೈಕಿಗೆ ಗುದ್ದಿಸಿದ ನಂತರ ಚೈಲ್ಡ್ ರವಿ ಮೇಲೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಕ್ಷಣಾರ್ಧದಲ್ಲಿ ಅಲ್ಲಿಂದ ತಪ್ಪಿಸಿಕೊಂಡಿದ್ದರು.
ಈ ಬಗ್ಗೆ ಪತ್ನಿ ಗೌತಮಿ ಸ್ಥಳಕ್ಕೆ ಬಂದಿದ್ದರು. ಆರೋಪಿಗಳು ಚೈಲ್ಡ್ ರವಿಯ ಸ್ನೇಹಿತರು ಕೂಡ ಆಗಿದ್ದರು. ಆದರೇ ಹಳೇ ಧ್ವೇಷದಿಂದ ಇಬ್ಬರೂ ಮಾತನಾಡುತ್ತಿರಲಿಲ್ಲ. ಈ ಹಿಂದೆಯೂ ಕೂಡ ಚೈಲ್ಡ್ ರವಿ ಕೊಲೆ ಮಾಡಿ ದೊಡ್ಡ ಹೆಸರು ಮಾಡಬೇಕೆಂದು ಆರೋಪಿ ಪ್ರೀತಮ್ ಹೇಳಿಕೊಂಡಿದ್ರು.
ಈ ನಾಲ್ಕು ಜನರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಪತ್ನಿ ಗೌತಮಿ ಕೊಟ್ಟ ದೂರಿನ ಮೇರೆಗೆ ಪೆನ್ ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿ ಅಪರ ಪೊಲೀಸ್ ಅಧೀಕ್ಷಕರಾದ ವೆಂಕೇಶ್ ನಾಯ್ಡ್, ಡಿವೈಎಸ್ಪಿ ಮುರುಳೀಧರ್ ನೇತೃತ್ವದಲ್ಲಿ ಮುಂದಿನ ತನಿಖೆ ಕೈಗೊಳ್ಳಲಾಗಿತ್ತು ಎಂದರು.
ಪತ್ತೆ ಕಾರ್ಯದಲ್ಲಿ ತೊಡಗಿರುವ ವೇಳೆ ಜೂನ್. ೬ರ ಗುರುವಾರದಂದು ರಾತ್ರಿ ೮ ಗಂಟೆಯ ಸಮಯದಲ್ಲಿ ತಾಲೂಕಿನ ಕಸಬಾ ಹೋಬಳಿ ಗ್ಯಾರಹಳ್ಳಿ ಮದ್ಯದ ಅಂಗಡಿ ಹತ್ತಿರ ಆರೋಪಿಗಳನ್ನು ದಸ್ತಗಿರಿ ಮಾಡಿ ವಿಚಾರಣೆಗೆ ಒಳಪಡಿಸಿದಾಗ ಸತ್ಯಂಶ ಹೊರ ಬಂದಿತು.
ಆರೋಪಿಗಳಲ್ಲಿ ಮೊದಲ ಆರೋಪಿಯಾದ ಸಾಲಗಾಮೆ ರಸ್ತೆ ಬ್ರಾಹ್ಮಣರ ಹಾಸ್ಟೇಲ್ ಹಿಂಬಾಗ ಇರುವ ವಿಮೆ ಏಜೆಂಟ್ ಕೆಲಸ ಮಾಡುವ ಪ್ರೀತಮ್ ೨೭ ವರ್ಷ,
ಎರಡನೇ ಆರೋಪಿ ರಾಜಕುಮಾರ್ ನಗರ ಪುರದಮ್ಮ ದೇವಸ್ಥಾನದ ಹಿಂಬಾಗ ವಾಸವಿರುವ ತರಕಾರಿ ವ್ಯಾಪಾರ ಮಾಡುವ ಕೀರ್ತಿ ೨೬ ವರ್ಷ,
ಮೂರನೇ ಆರೋಪಿ ಗೌರಿಕೊಪ್ಪಲು ವಿವೇಕಾನಂದ ಪ್ರತಿಮೆ ಬಳಿ ವಾಸವಿರುವ ವ್ಯವಸಾಯ ಕೆಲಸ ಮಾಡುವ ರಂಗನಾಥ್ ೨೬ ವರ್ಷ ಹಾಗೂ ನಾಲ್ಕನೆ ಆರೋಪಿ ಶಾಂತಿ ನಗರದ ನಿವಾಸಿ ಉಮಮಹೇಶ್ವರಿ ದೇವಸ್ಥಾನದ ಹತ್ತಿರ ವಾಸವಿರುವ ಈರುಳ್ಳಿ ವ್ಯಾಪಾರ ಮಾಡುವ ಅಮಿತ್ ಇವರೆ ಬಂದಿತ ಆರೋಪಿಗಳು
ಹೇಮಾವತಿ ನಗರದಲ್ಲಿ ಚೈಲ್ಡ್ ರವಿ ತನ್ನ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಕಾರಿನಲ್ಲಿ ಬಂದು ಗುದ್ದಿದ ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಆರೋಪಿ ಪ್ರೀತಂ ಮತ್ತು ರವಿ ಜೊತೆ ಆಗಾಗ್ಗೆ ಮಾತುಕತೆ ನಡೆಯುತ್ತಿತ್ತು. ಇನ್ನು ಪ್ರೀತಂ ಮೇಲೆ ಈಗಾಗಲೇ ೧೩ ಕೇಸುಗಳಿದೆ. ಇನ್ನು ಹೆಚ್ಚಿನ ತನಿಖೆ ಮುಂದುವರೆಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಆರೋಪಿಗಳು ಹಾಗೂ ಮೃತ ರೌಡಿ ಶೀಟರ್ ರವಿ ಅಲಿಯಾಸ್ ಚೈಲ್ಡ್ ರವಿ ಸ್ನೇಹಿತರೆ ಆಗಿದ್ದು ಹಳೆ ದ್ವೇಷದ ಹಿನ್ನೆಲೆಯಲ್ಲಿ ಕಳೆದ ಅನೇಕ ದಿನದಿಳಿಂದ ಇವರು ಮಾತನಾಡುತ್ತಿರಲಿಲ್ಲ. ಚೈಲ್ಡ್ ರವಿ ಪತ್ನಿ ಗೌತಮಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.
