ಬೇಲೂರು : ಪಟ್ಟಣದ ದೇವಾಲಯ ರಸ್ತೆ ಹಾಗು ಮುಖ್ಯ ರಸ್ತೆಗಳಲ್ಲಿ ಪಾರ್ಕಿಂಗ್ ಹಾಗು ಪಾದಚಾರಿಗಳ ಸ್ಥಳಗಳನ್ನು ಒತ್ತುವರಿ ಮಾಡಿಕೊಂಡು ಕಸವನ್ನು ಒಳಚರಂಡಿ ಹಾಗು ರಸ್ತೆಗಳಲ್ಲಿ ಸುರಿಯುವುದನ್ನು ತಪ್ಪಿಸುವ ಉದ್ದೇಶದಿಂದ ಹಾಗು ಇತ್ತೀಚಿನ ದಿನಗಳಲ್ಲಿ ಮಲೇರಿಯಾ ಡೆಂಗ್ಯೂ ಚಿಕನ್ ಗುನ್ಯಾದಂತ ಮಾರಕ ಖಾಯಿಲೆಗಳು ಹೆಚ್ಚಾಗಿ ಕಾಣಿಸುತ್ತಿರುವುದರಿಂದ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಹಾಗು ಜಿಲ್ಲಾಧಿಕಾರಿಗಳ ಸೂಚನೆ ,ಮುಖ್ಯಾಧಿಕಾರಿಗಳ ಸೂಚನೆಯಂತೆ ತೆರವುಗೊಳಿಸಲಾಯಿತು.

ಈ ವೇಳೆ ಮಾತನಾಡಿದ ಪುರಸಭೆ ಸದಸ್ಯ ಜಗದೀಶ್ ವಿಶ್ವ ವಿಖ್ಯಾತ ಪ್ರವಾಸಿ ತಾಣದಲ್ಲಿ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ.ಆದರೆ ಬರುವಂತ ಪ್ರವಾಸಿಗರಿಗೆ ಟಾರ್ಪಲ್ ಕಟ್ಟಿದ ಗೂಡಂಗಡಿಗಳು ಸಿಗುತ್ತದೆ.ಅಸ್ವಚ್ಚತೆಗೆ ತಾಣವಾಗಿ ಪಟ್ಟಣ ಮಾರ್ಪಾಡಾಗುತ್ತಿದೆ.ಈಗಾಗಲೇ ಸುಮಾರು ೨ ವರ್ಷದಿಂದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆದರೂ ಸಹ ಇದರ ಬಗ್ಗೆ ಗಮನ ಹರಿಸುತ್ತಿಲ್ಲ.ಕೂಡಲೆ ಶಾಶ್ವತವಾಗಿ ಇವುಗಳನ್ನು ತೆರವುಗೊಳಿಸಬೇಕು.ಪಟ್ಟಣದಲ್ಲಿ ಡೆಂಗ್ಯೂ ಸೇರಿದಂತೆ ಇತರ ಮಾರಣಾಂತಿಕ ಕಾಯಿಲೆಗಳು ಹೆಚ್ಚಾಗಿ ವ್ಯಾಪಿಸುತ್ತಿದ್ದು ಮಂಗಳವಾರ ನನ್ನ ವಾರ್ಡ್ ನಲ್ಲಿ ಎರಡು ವರ್ಷದ ಮಗು ಡೆಂಗ್ಯೂ ಗೆ ಬಲಿಯಾಗಿದೆ .ಇದಕ್ಕೆ ಯಾರು ಹೊಣೆ ಇದರಲ್ಲಿ ಯಾರು ಸಹ ರಾಜಕೀಯ ಮಾಡದೆ ಸ್ವಚ್ಛತೆಗೆ ನಾವೆಲ್ಲರೂ ಕೈಜೋಡಿಸೋಣ ಜಿಲ್ಲಾಧಿಕಾರಿಗಳು ಕೂಡಲೇ ಮದ್ಯ ಪ್ರವೇಶಿಸಿ ಇದರ ಬಗ್ಗೆ ಗಮನ ಹರಿಸಿ ಶಾಶ್ವತ ಪರಿಹಾರ ನೀಡಬೇಕೆಂದು ಮನವಿ ಮಾಡಿದರು.

ಕರವೇ ಅಧ್ಯಕ್ಷ ಭೋಜೇಗೌಡ ಮತ್ತು ಡಾ ರಾಜ್ ಸಂಘದ ಅಧ್ಯಕ್ಷ ತೀರ್ಥಂಕರ ಮಾತನಾಡಿ ಇದು ಪ್ರವಾಸಿತಾಣ ಆದರೆ ಇಲ್ಲಿ ಬರುವ ಪ್ರವಾಸಿಗರಿಗೆ ದೇವಾಲಯ ಕಾಣುವ ಬದಲು ಗೂಡಂಗಡಿಗಳೆ ಕಾಣುತ್ತದೆ ಎಲ್ಲೆಂದರಲ್ಲಿ ಕಸದ ರಾಶಿ ಹಾಕಿರುತ್ತಾರೆ.ನೆಹರೂ ನಗರದಿಂದ ದೇವಸ್ಥಾನದವರೆಗು ಎರಡು ಬದಿಗಳಲ್ಲಿ ಪಾದಚಾರಿಗಳ ಸ್ಥಳ ಹಾಗು ರಸ್ತೆ ಒತ್ತು ವರಿ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ ಅಲ್ಲದೆ ಶಾಲಾ ಕಾಲೇಜುಗಳು ಮತ್ತು ಸರ್ಕಾರಿ ಆಸ್ಪತ್ರೆ ಪಕ್ಕದಲ್ಲಿ ಇರುವುದರಿಂದ ಇಲ್ಲಿ ಸೊಳ್ಳೆಗಳ ತಾಣಗಳಾಗಿವೆ ಮೊದಲು ಸ್ವಚ್ಚತೆಗೆ ಆದ್ಯತೆ ನೀಡಲಿ .ಪ್ರತಿನಿತ್ಯ ಸಾವಿರಾರು ರೋಗಿಗಳು ಆಸ್ಪತ್ರೆಯಲ್ಲಿ ದಾಖಲಾಗುತ್ತಿದ್ದಾರೆ.ಪೌರ. ಕಾರ್ಮಿಕರು ಎಷ್ಟೇ ಸ್ವಚ್ಚತೆ ಮಾಡಿದರು ದಿನನಿತ್ಯ ಇದೆ ಗೋಳಾಗಿದೆ. ಪುರಸಭೆಯವರು ಕೇವಲ ಒಂದು ದಿನಕ್ಕೆ ಮಾತ್ರ ತೆರವು ಕಾರ್ಯಚರಣೆಯಾಗಬಾರದು ಇದು ಶಾಶ್ವತವಾಗಿ ಪರಿಹಾರ ಆಗಬೇಕು.ಶಾಸಕರು ಹೆಚ್ಚಿನ ಗಮನ ಹರಿಸಬೇಕು ವ್ಯಾಪಾರಸ್ಥರು ತಾವು ವ್ಯಾಪಾರ ಮಾಡಿದ ನಂತರ ತಮ್ಮ ವಸ್ತುಗಳ ಸಮೇತ ಗಾಡಿಗಳನ್ನು ಮನೆಗಳಿಗೆ ಗುಂಡಿಯಲ್ಲಿ ಅದನ್ನು ಬಿಟ್ಟು ರಸ್ತೆ ಬದಿಯಲ್ಲಿ ನಿಲ್ಲಿಸುವುದು ತಪ್ಪು ಎಂದು ಅವರು ಇಂತಹ ಮಹತ್ವದ ಕಾರ್ಯಾಚರಣೆ ಮಾಡಿದ ಪುರಸಭೆಗೆ ಪಟ್ಟಣದ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಯಾವುದೇ ಒತ್ತಡಕ್ಕೆ ಮಣಿಯದೆ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ಮನವಿ ಮಾಡಿದ ಅವರು ಇದೇ ರೀತಿ ಮುಂದುವರೆದರೆ ಪುರಸಭೆ ಮುಂಭಾಗದಲ್ಲಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು

ಬಾಕ್ಸ್ ನ್ಯೂಸ್ : ಇತ್ತೀಚಿನ ದಿನಗಳಲ್ಲಿ ಪಟ್ಟಣದ ವ್ತಾಪ್ತಿಯಲ್ಲಿ ಡೆಂಗ್ಯೂ ಚಿಕ್ನ ಗುನ್ಯಾ ಕಾಯಿಲೆಗಳು ಹೆಚ್ಚಾಗಿ ವ್ಯಾಪಿಸುತ್ತಿದ್ದು ಸ್ವಚ್ಚತೆಗೆ ಪುರಸಭೆ ಯಿಂದ ಮೊದಲ ಆದ್ಯತೆ ನೀಡುತ್ತಿದ್ದು ರಸ್ತೆ ಬದಿ ವ್ಯಾಪಾರಿಗಳು ಕಸವನ್ನು ಎಲ್ಲೆಂದರಲ್ಲಿ ಹಾಕುವುದಾಗಲಿ ಹಾಗು ಇನ್ನಿತರ ತ್ಯಾಜ್ಯಗಳನ್ನು ಚರಂಡಿಗಳಲ್ಲಿ ಸುರಿಯುತ್ತಿರುವುದರಿಂದ ತೀವ್ರ ತೊಂದರೆಯಾಗುತ್ತಿದ್ದು ರಸ್ತೆಗಳಿಗೆ ಪಾದಚಾರಿಗಳಿಗೆ ಅನುವುಮಾಡಿಕೊಡದೆ ಒತ್ತುವರಿ ಮಾಡಿಕೊಂಡಿರುವುದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಒತ್ತುವರಿ ಮಾಡಿಕೊಂಡಿರುವ ಗೂಡಂಗಡಿಗಳನ್ನು ತೆರವು ಮಾಡಲಾಗುತ್ತಿದೆ.

ಇದರಿಂದ ಯಾರಿಗೂ ತೊಂದರೆಯಾಗುವುದಿಲ್ಲ .ಪ್ರತಿಯೊಬ್ಬರು ಸಹಕರಿಸುವಂತೆ ಮುಖ್ಯಾಧಿಕಾರಿ ಸುಜಯ್ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪುರಸಭೆ ಆರೋಗ್ಯಾಧಿಕಾರಿ ಲೋಹಿತ್, ಮೋನೇಶ್ ಹರೀಶ್ ಹಾಗೂ ಪೌರಕಾರ್ಮಿಕರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *