ಬೇಲೂರು : ಶ್ರೀ ಚನ್ನಕೇಶವ ಸ್ವಾಮಿದೇಗುಲವು ಹಾಗು ಹಳೆಬೀಡು ಈಗಾಗಲೇ ವಿಶ್ವಪಾರಂಪಾರಿಕ ಪಟ್ಟಿಗೆ ಸೇರ್ಪಡೆ ಯಾಗಿದ್ದು ಪ್ರವಾಸಿಗರು ಹೆಚ್ಚಾಗಿ ದೇಗುಲಕ್ಕೆ ಆಗಮಿಸುವ ಹಿನ್ನಲೆಯಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ತೀರ್ಮಾನಿಸಲಾಗಿದೆ.

ಅದೇ ರೀತಿಯಾಗಿ ನೆಹರೂನಗರದಿಂದ ದೇಗುಲದವರೆಗೂ ಪುರಸಭೆಯ ಅವರ ಅಧೀನದಲ್ಲಿದ್ದು ಅವರು ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ.ಅದರಂತೆ ಪಟ್ಟಣದ ತುಂಬೆಲ್ಲಾ ಪಾದಾಚಾರಿಗಳ ಸ್ಥಳ ಹಾಗು ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಸಾರ್ವಜನಿಕರಿಗೆ ಓಡಾಡಲು ಹಾಗು ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿತ್ತು.

ಜಿಲ್ಲಾಡಳಿತ ಪ್ರವಾಸೋದ್ಯಮ ಇಲಾಖೆ ಹಾಗೂ ಶಾಸಕರ ನಿರ್ದೇಶನದಂತೆ ಅಧಿಕಾರಿಗಳು ಹೊತ್ತುವರಿ ಮಾಡಿಕೊಂಡಿದ್ದ ವ್ಯಾಪಾರ ನಡೆಸಿದ ಗಾಡಿಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಸುಗಮ ಮಾಡಿಕೊಟ್ಟಿದ್ದಾರೆ.

ಹಾಗೆ ಮುಂದಿನ ದಿನಗಳಲ್ಲಿ ಪಾರ್ಕಿಂಗ್ ಗೆ ಯಾವುದೇ ಸಮಸ್ಯೆ ಆಗದಂತೆ ಪೊಲೀಸ್ ಇಲಾಖೆ ಮಾಡಿಕೊಟ್ಟರೆ ಸುಗಮ ಸಂಚಾರದ ಜೊತೆಗೆ ಪ್ರವಾಸೋದ್ಯಮದಿಂದ ಅಭಿವೃದ್ಧಿ ಪಡಿಸಲಾಗುತ್ತದೆ.ರಸ್ತೆ ಮತ್ತು ಪ್ರವಾಸೋದ್ಯಮದ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದರೆ ಅದನ್ನು ಜಿಲ್ಲಾಡಳಿತ ತೆರವು ಮಾಡಿಸಿಕೊಟ್ಟರೆ ಮತ್ತು ಮುಖ್ಯ ರಸ್ತೆಯನ್ನು ಅಗಲೀಕರಣ ಮಾಡಯವುದರ ಜೊತೆಗೆ ಸಂಪೂರ್ಣ ಪ್ರವಾಸೋದ್ಯಮಕ್ಕೆ ಸೌಂದರ್ಯಕರಣ ಮಾಡಲು ಅನುಕೂಲ ಮಾಡಿಕೊಡಲು ನಾವು ಸಿದ್ದರಿದ್ದೇವೆ.

ನಮಗೆ ಈಗಾಗಲೇ ಶಾಸಕರೂ ಕೂಡ ಸಂಪೂರ್ಣವಾಗಿ ನಮಗೆ ಸಹಕಾರ ನೀಡುವುದರ ಜೊತೆಗೆ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು ಜಿಲ್ಲಾಡಳಿತ ತಾಲೂಕು ಆಡಳಿತ ಸಹಾಯ ನೀಡಿದರೆ ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ಮನು, ಹರೀಶ್, ಮಹೇಶ್,ಇತರರು ಹಾಜರಿದ್ದರು

ಬಾಕ್ಸ್ ನ್ಯೂಸ್ : ಈಗಾಗಲೇ ಪ್ರವಾಸಿ ತಾಣವನ್ನು ಅಭಿವೃದ್ಧಿ ಪಡಿಸಲು ಜಿಲ್ಲಾಧಿಕಾರಿಗಳ ಹಾಗು ತಾಲೂಕು ಆಡಳಿತದಿಂದ ಸಂಪೂರ್ಣ ಸಹಕಾರ ಪಡೆದಿದ್ದು ಬಂದಂತ ಪ್ರವಾಸಿಗರಿಗೆ ಯೊವುದೇ ಲೋಪದೋಷ ಆಗದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರವಾಸೋದ್ಯಮ ಇಲಾಖೆಗೆ ಸೂಚನೆ ನೀಡಲಾಗಿದೆ.

ಅದರಂತೆ ಹೈಟೆಕ್ ಮಾದರಿಯಲ್ಲಿ ತ್ರಿ ಸ್ಟಾರ್ ಹೊಟೇಲ್ ಹಾಗು ಅತಿಥಿ ವಸತಿ ಗೃಹವನ್ನು ಯಗಚಿ ಜಲಾಶಯದ ಬಳಿ ನಿರ್ಮಾಣವಾಗುತ್ತಿದೆ.ರಸ್ತೆ ಅಭಿವೃದ್ಧಿ ಪಡಿಸಲು ಕ್ರಿಯಾಯೋಜನೆ ಸಿದ್ದವಾಗುತ್ತಿದ್ದು ಎಲ್ಲರ ಸಹಕಾರ ಪಡೆದು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಶಾಸಕ ಸುರೇಶ್ ಹೇಳಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *