
ಚನ್ನರಾಯಪಟ್ಟಣ:ಮಕ್ಕಳ ಸಾಹಿತ್ಯ ಪರಿಷತ್ತು ಹಾಗೂ ಭೂಮಿ ಉಳಿಸಿ ಆಂದೋಲನ ಸಮಿತಿ ಮತ್ತು ಗುಲಸಿಂದ ಸರ್ಕಾರಿ ಪ್ರೌಢಶಾಲೆ ವತಿಯಿಂದ ಪರಿಸರ ದಿನಾಚರಣೆಯನ್ನು ಗಿಡಗಳನ್ನು ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮ ಉದ್ದೇಶಿಸಿ ಆನಂದ್ ಮಾತನಾಡಿ ಪ್ರತಿ ಒಬ್ಬ ವಿದ್ಯಾರ್ಥಿಗಳು ಪರಿಸರವನ್ನು ಉಳಿಸುವ ಕಡೆ ಗಮನವನ್ನು ಹರಿಸಬೇಕು, ಮನೆಗೊಂದು ಮರವನ್ನು ಕಡ್ಡಾಯವಾಗಿ ಬೆಳೆಸುವ ಮೂಲಕ ಪರಿಸರವನ್ನು ಸಂರಕ್ಷಣೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕೆರೆಕಟ್ಟೆಗಳನ್ನು ಉಳಿಸುವ ಜೊತೆಗೆ ಗಿಡಮರಗಳನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿಎನ್ ಅಶೋಕ್, ಕೆಂಪೇಗೌಡ ವೇದಿಕೆ ಅಧ್ಯಕ್ಷರಾದ ಕಾಳೆನಹಳ್ಳಿ ಆನಂದ್, ಮಕ್ಕಳ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಸಿದ್ದೇಶ್,ಮಹಾದೇವ್, ಜಗದೀಶ್,ಪತ್ರಕರ್ತ ಜಯರಾಮ್,ನಾಗೇಶ್, ಸಿಎನ್ ಅರುಣ್ ಕುಮಾರ್, ಬಿ ಆರ್ ಸಿ ಅನಿಲ್,ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರಾದ ಪುಟ್ಟರಾಜು, ಸೇರಿದಂತೆ ಇತರರು ಹಾಜರಿದ್ದರು.





