
ಸಕಲೇಶಪುರ : ನಿರಂತರ ರಂಗ ಚಟುವಟಿಕೆ, ಸಾಹಿತ್ಯ ಕಾರ್ಯಕ್ರಮಗಳು, ಪರಿಸರ ರಕ್ಷಣೆ, ಸಾಮಾಜಿಕ ಸೇವೆಗಳು ಮುಂತಾದ ಹಲವು ಕೆಲಸಗಳನ್ನು ಮಾಡುತ್ತ ಬಂದಿರುವ ಬೆಳ್ಳೇಕೆರೆ ಯ ಜೈಕರ್ನಾಟಕ ಸಂಘ ಈಗ ಆರೋಗ್ಯ ಸೇವೆಯಲ್ಲಿ ತೊಡಗಿಕೊಳ್ಳುವ ಪ್ರಯತ್ನದಲ್ಲಿದೆ.
ರಂಗಭೂಮಿಯ ವ್ಯಕ್ತಿತ್ವ ವಿಕಸನ ಶಕ್ತಿ ಹಾಗೂ ಮನೋಚಿಕಿತ್ಸಕ ಗುಣಗಳು ಈಗ ಎಲ್ಲರಿಗೂ ತಿಳಿದಿರುವಂತದ್ದೇ ಆಗಿದೆ.
ಈಗ ಈ ಕಾರ್ಯದಲ್ಲಿ ಉಡುಪಿ ಜಿಲ್ಲೆಯ ಮಣಿಪಾಲದ ಕಸ್ತೂರಬಾ ಆಸ್ಪತ್ರೆ ಸಹಕಾರ ನೀಡಲು ಮುಂದೆ ಬಂದಿದೆ. ನಿನ್ನೆ ಇದರ ಪೂರ್ವಯೋಜನೆಗಳು ಹಾಗೂ ಸಿದ್ದತೆಗಳ ಬಗ್ಗೆಚರ್ಚಿಸಿ ಕಾರ್ಯಕ್ರಮ ರೂಪಿಸಲು, ಮಣಿಪಾಲದ ಕಸ್ತೂರಬಾ ಆಸ್ಪತ್ರೆಯ ಮನೋಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ. ಪಿ.ಎಸ್.ವಿ.ಎನ್ ಶರ್ಮಾ ಅವರ ಆರು ಜನ ವೈದ್ಯಕೀಯ ತಂಡ ರಕ್ಷಿದಿಗೆ ಭೇಟಿ ನೀಡಿತು..
ಸುಮಾರು ನಾಲ್ಕು ಗಂಟೆಗಳ ಕಾಲ ಸ್ಥಳ ಪರಿಶೀಲನೆ ನಡೆಸಿ ಇಲ್ಲಿರುವ ಕನಿಷ್ಠ ಸೌಲಭ್ಯಗಳ ವೀಕ್ಷಣೆ, ಸುತ್ತಲಿನ ಜನಸಂಖ್ಯೆಯ ಮತ್ತು ಇತರ ವಿವರಗಳು, ಸ್ಥಳೀಯರ ಅಭಿಪ್ರಾಯಗಳನ್ನು ಸಂಗ್ರಹಿಸಿದರು.
ನಂತರ ಜನರಲ್ಲಿ ಮನೋರೋಗಗಳ ಬಗ್ಗೆ ಹಾಗೂ ನರ ಸಂಬಂಧಿ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು. ಕೌಟುಂಬಿಕ ಸಮಾಲೋಚನೆ, ಚಿಕಿತ್ಸೆ ಮತ್ತು ಆಪ್ತ ಸಲಹೆಗಳು ಇವೆಲ್ಲವನ್ನೂ ನಿಯತಕಾಲಿಕವಾಗಿ ಹಾಗೂ ನಿರಂತರ ನಡೆಸಿಕೊಂಡು ಹೋಗುವ ಬಗ್ಗೆ ತೀರ್ಮಾನಿಸಲಾಯಿತುಇಲ್ಲಿ ಇದುವರೆಗೆ ನಡೆದಿರುವ ಎಲ್ಲ ಚಟುವಟಿಕೆಗಳ ಮಾಹಿತಿಗಳನ್ನು ಪಡೆದ ವೈದ್ಯರ ತಂಡ.. ಆದಷ್ಟು ಬೇಗ ಇಲ್ಲಿ ಮನೋ ಆರೋಗ್ಯ ಸೇವೆ ಪ್ರಾರಂಭಿಸುವುದಾಗಿ ಭರವಸೆಯ ನೀಡಿದರು..
ಈ ಬಗ್ಗೆ ಸ್ಥಳೀಯ ಕ್ಯಾಮನಹಳ್ಳಿ ಸರ್ಕಾರಿ ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿ ಅವರ ಸಹಕಾರವನ್ನು ಕೋರಲಾಯಿತು..
ಅವರು ಕೂಡಾ ಸಹಕಾರ ನೀಡುವುದಾಗಿ ತಿಳಿಸಿದರು..
ಸದ್ಯದಲ್ಲಿಯೇ ಸೇವೆ ಆರಂಭದ ಆಶಯ ನಮ್ಮದು..
ದಿನಾಂಕವನ್ನು ಸದ್ಯದಲ್ಲಿಯೇ ತಿಳಿಸಲಾಗುವುದು ಎಂದು ರಂಗಕರ್ಮಿ ಪ್ರಸಾದ್ ರಕ್ಷಿದಿ ತಿಳಿಸಿದ್ದಾರೆ.
