ಆಲೂರು : ತಾಲೂಕು ಪಾಳ್ಯ ಹೋಬಳಿಯ ಪಾಳ್ಯ ಗ್ರಾಮದ ರಾಜು ,(ಪಾಪ) 54 ವರ್ಷ ಇವರು ಪಾಳ್ಯ ಗ್ರಾಮದ ರಾಜು ಎಂಬುವವರು ಮಂಗಳೂರಿನಲ್ಲಿ ಆಟೋ ಚಾಲಕರಾಗಿ ಆಟೋವನ್ನು ಬಾಡಿಗೆ ಚಾಲನೆ ಮಾಡುತ್ತ ಜೀವನ ಸಾಗಿಸುತ್ತಾ ಬಂದಿರುತ್ತಾರೆ.

ಕಳೆದ ಎರಡು ದಿನಗಳ ಹಿಂದೆ ಮಂಗಳೂರಿನಲ್ಲಿ ಬಿದ್ದ ಬಾರಿ ಗಾಳಿ ಮಳೆಯಲ್ಲಿ ಆಟೋ ಚಾಲನೆ ಮಾಡಿಕೊಂಡು ರಾತ್ರಿ 8:30 ಕ್ಕೆ ಮನೆಗೆ ಬಂದಿರುವ ಇವರು ಮಳೆ ಬಿದ್ದ ಕಾರಣ ಆಟೋವನ್ನು ತೊಳೆಯಲು ಬಕೀಟಿನಲ್ಲಿ ನೀರು ತೆಗೆದುಕೊಂಡು ಬಂದಾಗ ಮೇಲೆ ಇದ್ದ 11 ಕೆ.ವಿ. ವೋಲ್ಟೇಜ್ ಕರೆಂಟ್ ವೈರ್ ಕಟ್ಟಾಗಿ ಅವರ ಮೇಲೆ ಬಿದ್ದ ಪರಿಣಾಮ ಅವರು ಕೂಗಾಡಿದ್ದನ್ನು ಕೇಳಿಸಿಕೊಂಡು ಮತ್ತೊಬ್ಬ ಗೆಳೆಯ ದೇವರಾಜು 35 ವರ್ಷ ನೆಲ್ಯಾಡಿ ಗ್ರಾಮದವರು. ಅವರನ್ನು ಕಾಪಾಡಲು ಹೋಗಿ ಸ್ಥಳದಲ್ಲಿ ಇಬ್ಬರು ಸಾವನಪ್ಪಿದ್ದಾರೆ.

ಸ್ಥಳಕ್ಕೆ ಮೆಸ್ಕಾಂ ಇಂಜಿನಿಯರ್ ಮತ್ತು ಸಬ್ ಇನ್ಸ್ಪೆಕ್ಟರ್ ಮತ್ತು ಡಿ ಎಚ್ ಓ ರವರು ಆಸ್ಪತ್ರೆಗೆ ಬಂದು ಇಬ್ಬರನ್ನು ನೋಡಿಕೊಂಡು ಹೋಗಿರುತ್ತಾರೆ. ಇವರಿಗೆ ಪತ್ನಿ ಇಬ್ಬರು ಗಂಡು ಮಕ್ಕಳಿದ್ದಾರೆ. ಇವರ ಅಂತ್ಯಕ್ರಿಯೆ ಸ್ವಗ್ರಾಮ ಪಾಳ್ಯದಲ್ಲಿ ಶುಕ್ರವಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *