
ಸಕಲೇಶಪುರ : ಕರ್ನಾಟಕ ಪಬ್ಲಿಕ್ ಶಾಲೆ. ಹಾನುಬಾಳು.ದಿನಾಂಕ:05:07:2024 ರಂದು ಪ್ರೌಡಶಾಲಾ ವಠಾರದಲ್ಲಿ, 2024 ರಿಂದ 2027 ರ ವರೆಗಿನ ಶಾಲಾ ಎಸ್,ಡಿ,ಎಂ,ಸಿ ಯ ನೂತನ ಸಮಿತಿಯನ್ನು ಪೋಷಕರ ಸಮ್ಮುಖದಲ್ಲಿ ರಚನೆ ಮಾಡಲಾಯಿತು.
ಈ ಸಮಿತಿಗೆ 16 ಪೋಷಕ ಪ್ರತಿನಿದಿಗಳನ್ನ ಆಯ್ಕೆ ಮಾಡಿ, ಅವರಲ್ಲಿ ಸಮಿತಿಯ ಅಧ್ಯಕ್ಷರಾಗಿ ಸನ್ಮಾನ್ಯ ಅರುಣ್. ಹೆಚ್.ಕೆ. ಮತ್ತು ಉಪಾಧ್ಯಕ್ಷರಾಗಿ ಸನ್ಮಾನ್ಯ ಎಂ.ಬಿ.ಅಬ್ದುಲ್ ರೆಹಮಾನ್ ಇವರನ್ನ ಸಮಿತಿ ಸದಸ್ಯರು ಸರ್ವಾನುಮತದಿಂದ ಅವಿರೋದವಾಗಿ ಆಯ್ಕೆ ಮಾಡಲಾಯಿತು.
ಸಮಿತಿಯ ನೂತನ ಸದಸ್ಯರಾಗಿ ನಜೀರ್, ಅವಿನಾಶ್, ಪ್ರಸನ್ನ, ಮಂಜುನಾಥ್, ಸಂಜೀವ್, ನೀಲರಾಜ್, ವಿನೋದ, ಕೈರುನ್ನಿಸಾ, ಜಾನಕಿ, ಪವಿತ್ರ, ಗೀತಾಂಜಲಿ, ಪ್ರಶಸ್ತಿ, ಶಿಲ್ಪ, ಪುಷ್ಪ ಇವರುಗಳು ಆಯ್ಕೆ ಆಗಿರುತ್ತಾರೆ


