
ಸಕಲೇಶಪುರ : ನಗರದ ಲಯನ್ಸ್ ಕ್ಲಬ್ ನ 2024-25 ನೇ ಸಾಲಿನ ನೂತನ ಪದಾಧಿಕಾರಿಗಳ ಪದವಿ ಪದಗ್ರಹಣ ಸಮಾರಂಭವು ಪಟ್ಟಣದ ಲಯನ್ಸ್ ಸೇವಾ ಮಂದಿರದಲ್ಲಿ ಶುಕ್ರವಾರ ನೆರವೇರಿತು
ಲಯನ್ಸ್ ಕ್ಲಬ್ ನ 2024-25 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಶುಕ್ರವಾರ ಹಮ್ಮಿಕೊಳಗಿತ್ತು.
ಲಯನ್ಸ್ ಕ್ಲಬ್ನ ನ 48 ನೇ ಅಧ್ಯಕ್ಷರಾಗಿ ಕೃಷ್ಣಪ್ಪ ಪೂಜಾರಿ ಹಾಗೂ ಲಿಯೋ ಆರ್ಶಿತ ಪೂಜಾರಿ ಅವರು ನಿಕಟಪೂರ್ವ ಅಧ್ಯಕ್ಷರಾದ ಬಬಿತಾ ವಿಶ್ವನಾಥ್ ರಿಂದ ಅಧಿಕಾರ ಸ್ವೀಕಾರ ಪಡೆದರು.
ಈ ಸಂದರ್ಭದಲ್ಲಿ ಎಸ್. ಎಸ್. ಎಲ್ ಸಿ ಯಲ್ಲಿ ಹೆಚ್ಚು ಅಂಕ ಪಡೆದವರಿಗೆ ಹಾಗೂ ನಿಕಟ ಪೂರ್ವ ಹಾಗೂ ನೂತನ ಪದಾಧಿಕಾರಿಗಳಿಗೆ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕ್ಷೇತ್ರದ ಶಾಸಕ ಸಿಮೆಂಟ್ ಮಂಜುನಾಥ್, ಸಂಜಿತ್ ಶೆಟ್ಟಿ, ರಘು ಪಾಳ್ಯ, ವಿಠಲ್, ಪ್ರೇಮನಾಥ್ ಮೀನಾಕ್ಷಿ ಖಾದರ್, ನೂತನ ಕಾರ್ಯದರ್ಶಿ ವೆಂಕಟೇಶ್ ಬಸವರಾಜು ಇತರರು ಇದ್ದರು




