ಸಕಲೇಶಪುರ : ದಿನಾಂಕ 05-07-2024 ಸೋಶಿಯಲ್ ಡೆಮೊಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ಗ್ರಾಮಾಂತರ ಜಿಲ್ಲೆ ಹಾಸನ ಇದರ ಸಭೆ ಜಿಲ್ಲಾಧ್ಯಕ್ಷರಾದ ಇಮ್ರಾನ್ ಅರೇಹಳ್ಳಿಯವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಕಛೇರಿಯಲ್ಲಿ ನಡೆಯಿತು.

ಸಭೆಯಲ್ಲಿ ಸಕಲೇಶಪುರ ಸರ್ಕಾರಿ ಆಸ್ಪತ್ರೆಯಲ್ಲಿ ಸಕಲೇಶಪುರ ಕುಶಾಲನಗರದ ಆದಿಲ್ ರವರ ಪತ್ನಿಯು ಡಾಕ್ಟರ್ ಪುರುಷೋತ್ತಮ್ ರವರ ನಿರ್ಲಕ್ಷ್ಯದಿಂದ ಹೆರಿಗೆಯ ಸಂದರ್ಭದಲ್ಲಿ ಮರಣ ಹೊಂದಿದ್ದು, ಡಾಕ್ಟರ್ ಪುರುಷೋತ್ತಮ್ ರವರ ಬೇಜವಾಬ್ದಾರಿಯಿಂದ ಇದುವರೆಗೆ ಐದಾರು ಮಹಿಳೆಯರು ಹೆರಿಗೆಯ ಸಂದರ್ಭದಲ್ಲಿ ಸಾವಿಗೀಡಾಗಿದ್ದು ಇದೆಲ್ಲಾ ಅನಾಹುತಕ್ಕು ಡಾ. ಪುರುಷೋತ್ತಮ್ ರವರೆ ಕಾರಣರಾಗಿರುತ್ತಾರೆ, ಆದುದರಿಂದ ಇಂತಹ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯತ ವೈದ್ಯನನ್ನು ತಕ್ಷಣ ಕೆಲಸದಿಂದ ಅಮಾನತು ಮಾಡಿ ಕಠಿಣ ಶಿಕ್ಷೆಗೆ ಒಳಪಡಿಸದಿದ್ದರೆ ಎಸ್ ಡಿ.ಪಿ.ಐ ವತಿಯಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ತೀರ್ಮಾನಿಸಲಾಯಿತು.

ಹಾಗು ಬ್ರಾಂಚ್ ನಿಂದ ವಿಧಾನಸಭಾ ಕ್ಷೇತ್ರ ರವರೆಗೆ ಜುಲೈ ಮತ್ತು ಆಗಷ್ಟ್ ತಿಂಗಳಿನಲ್ಲಿ ನಡೆಯಲಿರುವ ಪಕ್ಷದ ಆಂತರಿಕ ಚುನಾವಣೆಯನ್ನು ಸುಸೂತ್ರವಾಗಿ ನಡೆಸಲು ಜಿಲ್ಲಾ ಚುನಾವಣಾಧಿಕಾರಿ ಮತ್ತು ರಿಟೈನಿಂಗ್ ಅಧಿಕಾರಿಗಳ ಪಟ್ಟಿಯನ್ನು ತಯಾರಿಸಿ ರಾಜ್ಯಕ್ಕೆ ನೀಡಲಾಯಿತು.

ರಾಜ್ಯದಿಂದ ಬಂದಂತಹ ಸುತ್ತೋಲೆಯ ವಿಷಯಗಳ ಬಗ್ಗೆ ಚರ್ಚಿಸಿ ರೂಪುರೇಷೆ ಸಿದ್ಧಪಡಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಾಜಿದ್ ಪಾಷಾ ಉಪಾಧ್ಯಕ್ಷರಾದ ಅಶ್ರಪ್ ಕೋಟೆ ಹಾಗು ಜಿಲ್ಲಾ ಸಮಿತಿಯ ಸದಸ್ಯರು ಅರೇಹಳ್ಳಿ ಗ್ರಾಮ ಸಮಿತಿ ಕಾರ್ಯದರ್ಶಿ ಗಳು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *