
ಮಂಗಳವಾರ ಬೆಳಗ್ಗೆ 10:30 ಕ್ಕೆ ಸರಿಯಾಗಿ ಎಸ್ ಮಂಜುನಾಥ್ ( ಸಿಮೆಂಟ್ ಮಂಜು). ಮಾನ್ಯ ಶಾಸಕರು ಸಕಲೇಪುರ ವಿಧಾನ ಸಭಾ ಕ್ಷೇತ್ರ ಇವರ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಡೆಂಗ್ಯೂ ಪ್ರಕರಣಕ್ಕೆ ಸಂಬಂಧಿಸಿದಂತೆ ಸಭೆಯನ್ನು ಕರೆಯಲಾಗಿದೆ ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಣಾಧಿಕಾರಿಗಳು ತಿಳಿಸಿದ್ದಾರೆ.
ಈ ಸಭೆಗೆ ಕೃಷ್ಣಮೂರ್ತಿ ಮಾನ್ಯ ಉಪಕಾರ್ಯದರ್ಶಿಗಳು(ಅಭಿವೃದ್ದಿ) ಜಿಲ್ಲಾ ಪಂಚಾಯಿತಿ ಹಾಸನ ಇವರ ಉಪಸ್ಥಿತಿಯಲ್ಲಿ ಸಕಲೇಶಪುರ ತಾಲ್ಲೂಕಿನಲ್ಲಿ ಡೆಂಗ್ಯೂ ಪ್ರಕರಣಗಳ ನಿಯಂತ್ರಣ ಕ್ರಮಗಳ ಬಗ್ಗೆ ಮತ್ತು ಮಳೆ ಹಾನಿ ಬಗ್ಗೆ ಚರ್ಚಿಸಲು ಸಕಲೇಶಪುರ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ನೋಡಲ್ ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಿಗದಿಮಾಡಿದ್ದು ಸದರಿ ಸಭೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಮತ್ತು ಗ್ರಾಮಪಂಚಾಯಿತಿ ಅಧ್ಯಕ್ಷರುಗಳು ಹಾಜರಾಗಲು ಕೋರಿದೆ..
ಪತ್ರಿಕಾ ಮಿತ್ರರು ಸಹ ಹಾಜರಾಗಲು ಈ ಮೂಲಕ ಕೋರಿದೆ..
ಸ್ಥಳ: ತಾಲ್ಲೂಕು ಪಂಚಾಯಿತಿ ಸಭಾಂಗಣ ಸಕಲೇಶಪುರ
ಇಂತಿ :- ಕಾರ್ಯನಿರ್ವಹಾಣಾಧಿಕಾರಿಗಳು ತಾಲ್ಲೂಕು ಪಂಚಾಯಿತಿ ಸಕಲೇಶಪುರ
