
ಹಾಸನ: ಕೆ.ಎಸ್.ಆರ್.ಟಿ.ಸಿ. ಹಾಸನ ವಿಭಾಗದಲ್ಲಿ ಮೇಲಾಧಿಕಾರಿಗಳಿಂದ ಚಾಲನ ಸಿಬ್ಬಂದಿಗಳ ಮೇಲೆ ಕೆಲಸದ ಒತ್ತಡ, ಕಿರುಕುಳ ನಡೆಯುತ್ತಿದ್ದು, ೧೩ ಲಕ್ಷದಿಂದ ೧೪ ಲಕ್ಷ ಕಿಲೋ ಮೀಟರ್ ಚಲಿಸಿ ಸಂಚಾರಕ್ಕೆ ಯೋಗ್ಯವಲ್ಲದ ಅನುಪಯುಕ್ತ ಬಸುಗಳು ಹೆಚ್ಚಾಗಿದೆ.
೨೦೨೦ ರಲ್ಲಿ ಆದ ಕೈಗಾರಿಕ ಒಪ್ಪಂದದ ೩೮ ತಿಂಗಳ ಅರಿಯರ್ಸ್ ಕೊಡಬೇಕು. ೨೦೨೪ ಜನವರಿ ೧ ರಿಂದ ಜಾರಿಗೆ ಬರುವಂತೆ ಕೈಗಾರಿಕ ಒಪ್ಪಂದವು ಜಾರಿ ಆಗಬೇಕು ಮತ್ತು ಕೆ.ಎಸ್.ಆರ್.ಟಿ.ಸಿ. ಪ್ರಾದೇಶಿಕ ಕಾರ್ಯಗಾರ ಹಾಸನದ ನೌಕರರ ನೇಮಕಾತಿ ತಕ್ಷಣ ಆಗಬೇಕಾಗಿದೆ
ಹಾಗೂ ಹಾಸನ ವಿಭಾಗ ಡಿಟಿಓ ಮತು ಡಿಎಂಇ ರವರು ನೌಕರರನ್ನು ಗುಲಾಮರಂತೆ ಕಾಣುತ್ತಿದ್ದು, ಇವರನ್ನು ಬೇರೆಡೆಗೆ ವರ್ಗಾಯಿಸಬೇಕೆಂದು ಆಗ್ರಹಿಸಿ ನಗರದ ಕುವೆಂಪು ನಗರದಲ್ಲಿರುವ ಅಮೃತ್ ಪಾರ್ಟಿ ಹಾಲ್ ನಲ್ಲಿ ಕೆ.ಎಸ್.ಆರ್.ಟಿ.ಸಿ. ಹಾಸನ ವಿಭಾಗದ ಮತ್ತು ಪ್ರಾದೇಶಿಕ ಕಾರ್ಯಾಗಾರ ವತಿಯಿಂದ ಭಾನುವಾರದಂದು ಮದ್ಯಾಹ್ನದಂದು ಹಮ್ಮಿಕೊಳ್ಳಲಾಗಿದ್ದ ಸಾರಿಗೆ ನೌಕರರ ಜಾಗೃತಿ ಸಮಾವೇಶದಲ್ಲಿ ಪ್ರಮುಖವಾಗಿ ಚರ್ಚೆಗೆ ಬಂದು ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತಲೆ ಕೆಲಸ ನಿರ್ವಹಿಸುವಂತೆ ಕರೆ ಕೊಡಲಾಯಿತು.
ಕೆ.ಎಸ್.ಆರ್.ಟಿ.ಸಿ. ಸ್ಟಾಪ್ ಅಂಡ್ ವರ್ಕ್ಸ್‌ರ‍್ಸ್ ಫೆಡರೇಷನ್ ಅಧ್ಯಕ್ಷ ಹೆಚ್.ವಿ. ಅನಂತಸುಬ್ಬರಾವ್ ಮಾತನಾಡಿ, ಡಾ|| ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ಕೊಟ್ಟಿರುವುದರಿಂದ ಇವತ್ತು ನಾವುಗಳು ಈ ಸಮಾವೇಶ ನಡೆಸಲು ಅವಕಾಶ ಸಿಕ್ಕಿದೆ.
ಈ ಜಾತಿಗಳ ಸೃಷ್ಠಿ ಮಾಡಿದವರು ಯಾರು? ನಮ್ಮ ಎಐಟಿಯುಸಿ ಎನ್ನುವುದು ಹಳೆಯ ಸಂಘಟನೆ. ಪಂಡಿತ್ ಜವಹಲ್ ಲಾಲ್ ನೆಹರು, ಸ್ವಾತಂತ್ರ ಹೋರಾಟದಲ್ಲಿ ೧೦ ವರ್ಷಗಳ ಕಾಲ ಜೈಲುನಲ್ಲಿದ್ದರು. ಅನೇಕ ಪುಸ್ತಕ ಬರೆದಿದ್ದು, ಅಂತಹ ಮೇದವಿ ಇದ್ದರು. ಸುಭಾಷ್ ಚಂದ್ರ ಬೋಸ್ ಕೂಡ ಅಧ್ಯಕ್ಷರಾಗಿದ್ದರು. ಪ್ರತಿಭಟನೆ ಎಂಬುದು ಹಿಂದಿನಿಂದಲೇ ಬಂದಿದೆ. ೧೯೨೬ ಬ್ರಿಟಿಷ್ ಕಾಲದಲ್ಲೆ ಈ ಹೋರಾಟದ ಹಕ್ಕು ಬಂದಿತ್ತು.
ಆದರೇ ಇವತ್ತು ಹಾಸನದಲ್ಲಿ ನಮ್ಮ ಸಂಘಟನೆಯಿಂದ ಸಮಾವೇಶ ಮಾಡುತ್ತೇವೆ ಎಂದರೇ ಕೆ.ಎಸ್.ಆರ್.ಟಿ.ಸಿ. ಡಿಸಿಯಿಂದ ಹಿಡಿದು ಡಿಪೋ ಮ್ಯಾನೇಜರ್ ವರೆಗೆ ಡಿಎಂ ವರೆಗೂ ಚಾಲಕರಿಗೆ ಹೋಗದಂತೆ ತಡೆದು ಕೆಲಸ ಮಾಡುವಂತೆ ಸೂಚನೆ ಕೊಡುತ್ತಾರೆ. ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡಿ ಇಂತಹ ಸಮಾವೇಶ ಮಾಡಲಾಗುವುದು ಎಂದು ಎಚ್ಚರಿಸಿದರು.
ನೌಕರರು ಸಭೆ ಮಾಡಲು ಜಾಗ ಕೊಡುವುದಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು. ರಾಜ್ಯದ ಮೂಲೆ ಮೂಲೆಗಳಲ್ಲಿ ಸಮಾವೇಶ ಮಾಡಲಾಗಿದ್ದು, ನಮಗೆ ಪಾಠ ಕಲಿಸಲು ಬರಬೇಡಿ. ನೌಕರರ ೩೮ ತಿಂಗಳ ಅರಿಯರ್ರ‍್ಸ್, ೨೦೨೪ ಜನವರಿ ೧ ರಿಂದ ಜಾರಿಯಾಗಬೇಕಾಗಿದ್ದ ಕೈಗಾರಿಕ ಒಪ್ಪಂದವನ್ನು ಇದುವರೆಗೂ ಜಾರಿ ಮಾಡಿರುವುದಿಲ್ಲ. ನಮಗೆ ಕೇಳುವ ಹಕ್ಕು ಇದೆ. ನಮ್ಮ ಬೇಡಿಕೆ ಈಡೇರುವವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಹೇಳಿದರು.
ಕೆ.ಎಸ್.ಆರ್.ಟಿ.ಸಿ. ಸ್ಟಾಪ್ ಅಂಡ್ ವರ್ಕ್ಸ್‌ರ‍್ಸ್ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಡಿ.ಎ. ವಿಜಯಭಾಸ್ಕರ್ ಮಾತನಾಡುತ್ತಾ, ರಸ್ತೆ ಸುರಕ್ಷತೆ ಕಾನೂನು ಮಾಡಲು ಹೊರಟಿದ್ದು, ಉದಾರಿಕರಣ ಹೆಸರಿನಲ್ಲಿ ಖಾಸಗೀಕರಣ ಮಾಡಿ ದುಡಿಯುವ ಕೈ ಕಟ್ಟಿ ಹಾಕಿದೆ. ಇಂದು ನಾಲ್ಕು ನಿಗಮಗಳು ಯಾರಿಗೂ ಉಪಯೋಗ ಆಗಿರುವುದಿಲ್ಲ.
ಈ ನಿಟ್ಟಿನಲ್ಲಿ ಈ ನಾಲ್ಕು ನಿಗಮ ಒಂದಾಗಬೇಕಾಗಿದೆ. ಈಗಾಗಲೇ ಎರಡು ಮುಷ್ಕರಗಳು ಆಗಿದೆ. ಸಮಾನ ಕೆಲಸಕ್ಕೆ ಸಮಾನ ವೇತನ ಎಂದು ಹೊಸ ಘೋಷಣೆ ಮಾಡಿ ನೌಕರರ ತಲೆ ಮೇಲೆ ಟೋಪಿ ಹಾಕಲು ಸರಕಾರ ಹೊರಟಿದೆ. ಸಮಾನ ವೇತನ ಬಂದರೇ ಇನ್ಸೆಂಟಿವ್ ಮಾಯ.
ಈ ಸಮ್ಮೇಳನದ ಮೂಲಕ ಡಿಪೋ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕಾಗಿದೆ. ಹೋರಾಟ ಮಾಡುತ್ತಲೆ ಕೆಲಸ ನಿರ್ವಹಿಸಬೇಕಾಗಿದೆ ಎಂದರು.
ಸರ್ಕಾರದ ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಯ ಎಲ್ಲಾ ಬಸ್ಸುಗಳಲ್ಲಿ ಸಾರಿಗೆ ನಿಯಮಗಳನ್ನು ಉಲ್ಲಂಘನೆ ಮಾಡಿ ಶೇಕಡ ೮೦ಕ್ಕೂ ಹೆಚ್ಚು ಪ್ರಯಾಣಿಕರನ್ನು ಹತ್ತಿಸಿಕೊಂಡು ಬರುವಾಗ ಆಕಸ್ಮಿಕವಾಗಿ, ಮಹಿಳೆಯರು ಟಿಕೆಟ್ ಕಳೆದುಕೊಂಡಾಗ ಅಥವಾ ಪ್ರಯಾಣದ ಮಧ್ಯೆ ತುರ್ತು ಕೆಲಸದ ನಿಮಿತ್ತ ಬಸ್ಸಿನಿಂದ ಇಳಿದು ಹೋದ ನಂತರದಲ್ಲಿ ತನಿಖಾಧಿಕಾರಿಗಳು ಮಹಿಳಾ ಫ್ರೀ ಟಿಕೆಟ್ ಅನ್ನು ಹೆಚ್ಚುವರಿಯಾಗಿ ಹರಿದಿರುತ್ತೀರಿ ಎಂದು ಕೇಸು ದಾಖಲಿಸುವುದರಿಂದ ಹಲವು ನೌಕರರು ಮಾಡದ ತಪ್ಪಿಗೆ ಸಸ್ಪೆಂಡ್ ಆಗುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಮಾವೇಶದಲ್ಲಿ ಕೆ.ಎಸ್.ಆರ್.ಟಿ.ಸಿ. ಸ್ಟಾಪ್ ಅಂಡ್ ವರ್ಕ್ಸ್‌ರ‍್ಸ್ ಯೂನಿಯನ್ ಅಧ್ಯಕ್ಷ ಡಿ.ಜೆ. ಶಿವನಂಜೇಗೌಡ, ಪ್ರಧಾನ ಕಾರ್ಯದರ್ಶಿ ಜಿ.ಟಿ. ರಂಗೇಗೌಡ, ಕಾರ್ಯಾಧ್ಯಕ್ಷ ಸಿದ್ಪಪ್ಪ ಪಾಲೀಕಿ, ಡಿ.ಆರ್.ಬಿ.ಎಫ್. ಕೇಂದ್ರ ಕಛೇರಿ ಕಾರ್ಯದರ್ಶಿ ಮಂಜೂಳಾ, ಜಂಠಿ ಕಾರ್ಯದರ್ಶಿ ರಜಿನಿಕಾಂತ್, ಬಸವರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.
