ಸಕಲೇಶಪುರ : ಈ ದಿನ ಅಖಿಲ ಭಾರತ ವೀರಶೈವ ಮಹಾಸಭಾದ ಸಕಲೇಶಪುರ ತಾಲ್ಲೂಕು ಅಧ್ಯಕ್ಷರ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದವರು ಹಿಂಪಡೆಯಲು ಕೊನೆಯ ದಿನಾಂಕ ಆದ್ದರಿಂದ ನಾಮಪತ್ರ ಸಲ್ಲಿಸಿದ ನಾಲ್ಕು ಅಭ್ಯರ್ಥಿಗಳು ನಾಮಪತ್ರ ಹಿಂಪಡೆದರು.

ನಾಲ್ಕು ಅಭ್ಯರ್ಥಿಗಳನ್ನು ಮಲೆನಾಡು ವೀರಶೈವ ಸಮಾಜ ಕರೆದು ಚುನಾವಣಾ ಪ್ರಕ್ರಿಯೆ ಇದುವರೆಗೂ ಸಮಾಜದಲ್ಲಿ ನಡೆದಿಲ್ಲ ಆದ್ದರಿಂದ ನೀವೆಲ್ಲರೂ ಸಮಾಜಕ್ಕೆ ಗೌರವ ನೀಡಬೇಕು ಎಂದು ಸೂಚಿಸಿದರು

ಸಮಾಜ ಸೂಚಿಸಿದ ಕಾರಣಕ್ಕೆ ನಾಮಪತ್ರ ಸಲ್ಲಿಸಿದ್ದ ಸಾಗರ್ ಜಾನಕೆರೆ, ದಿನೇಶ್ ಎಸ್ ಸಿ. ಚಂದ್ರಶೇಖರ್, ಲೋಹಿತ್ ಕೌಡಳ್ಳಿ ಇವರುಗಳು ಸಮಾಜ ನೀಡಿದ ಮಾರ್ಗದರ್ಶನದಲ್ಲಿ ನಡೆದುಕೊಂಡು ಮಲೆನಾಡು ವೀರಶೈವ ಸಮಾಜಕ್ಕೆ ಗೌರವ ನೀಡಿ ನಾಮಪತ್ರವನ್ನು ಹಿಂಪಡೆದರು.

ಈ ಸಂದರ್ಭದಲ್ಲಿ ಮಲೆನಾಡು ವೀರಶೈವ ಸಮಾಜ ಸೂಚಿಸಿದ ಬ್ಯಾಕರವಳ್ಳಿ ಭಾಸ್ಕರ್ ಅವರನ್ನು ಅಖಿಲ ಭಾರತ ವೀರಶೈವ ಮಹಾಸಭಾ ಸಕಲೇಶಪುರ ತಾಲೂಕು ಘಟಕದ ಅಧ್ಯಕ್ಷರನ್ನಾಗಿ ಮಾಡಲಾಯಿತು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *